ಪರಿಸರ ಸಮತೊಲನ ಕಾಪಾಡಲು ಮರಗಳನ್ನು ಬೆಳೆಸಿ : ಸುರೇಶ ಸನದಿ.
ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಜರತ್ ಶಾಹುಸೇನ್ ಶಾ ಖುಫಾರೆ ಬಂಜನ್ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಪಟ್ಟಣದ ಖಬರಸ್ತಾನ್ ಆವರಣದಲ್ಲಿ ಅರಣ್ಯ ಇಲಾಖೆ ಆಶ್ರಯ ಐದ ನೂರು ಸಸಿ ನೇಡುವ ಕಾರ್ಯಕ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ್ ಸನದಿ ಅವರು ಚಾಲನೆ ನೀಡಿ ಮಾತನಾಡಿ ಪರಿಸರ ಸಮತೋಲನ ಕಾಪಾಡಲು ಗಿಡಗಳನ್ನು ಹೆಚ್ಚು ಹೆಚ್ಚಾಗಿ ನೆಡುವ ಅಗತ್ಯ ತುಂಬಾ ಇದೆ.
ಅರಣ್ಯ ನಾಶದಿಂದ ಮನುಕುಲವೇ ನಾಶವಾಗುತ್ತದೆ, ಪ್ರಾಕೃತಿಕ ವಿಕೋಪಗಳು ಪರಿಸರ ಅಸಮತೋಲನದ ಪರಿಣಾಮಗಳಾಗಿವೆ. ಭೂಮಿಯ ತಾಪಮಾನ ಏರಿಕೆ, ಅತೀವೃಷ್ಟಿ, ಅನಾವೃಷ್ಟಿ, ಸುನಾಮಿ, ಸಾಂಕ್ರಮಿಕ ರೋಗಗಳು, ನೆರೆ ಪ್ರವಾಹಗಳು, ಭೂಕಂಪಗಳು ಮಾನವ ಅತಿಯಾಸೆಯಿಂದ ಪರಿಸರವನ್ನು ನಾಶಗೊಳಿಸುವದರಿಂದ ಸಂಭವಿಸುತ್ತಿವೆ. ಇನ್ನಾದರೂ ಎಚ್ಚೆತ್ತುಕೊಂಡು ಗಿಡ, ಮರ, ಬಳ್ಳಿಗಳನ್ನು ಬೆಳೆಸಿ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೆ ಸರಿ ಪಡಿಸಬೇಕು. ಇಲ್ಲದಿದ್ದರೆ ಅಮ್ಲಜನಕವನ್ನೂ ಸಹ ಖರೀದಿಸ ಬೇಕಾಗಬಹುದು. ಅದಕ್ಕೂ ಮೊದಲೇಎಚ್ಚತ್ತು ಕೋಳ್ಳೊಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೀರ್ ಭದ್ರೋದ್ದೀನ್ ಶಾ ಖಾದ್ರಿ
ಅಲ್ಲಾಹುದ್ದೀನ್ ಪೀರಜಾದೆ,ಮಹ್ಮದಗೌಸ್ ಪೀರಜಾದೆ, ಆದಮ ಪೀರಜಾದೆ, ಕುಮಾರ ಕೊಣ್ಣೂರ, ಧನ್ಯಕುಮಾರ ಮೇಗೆರಿ,ಇಬ್ರಾಹಿಂ ಪೀರಜಾದೆ, ಸೈಯದ್ ಮುಲ್ಲಾ, ಇಕಾಬಾಲ ಪೀರಜಾದೆ, ಮೊಸಾ ಮುಲ್ಲಾ,
ವಿನೋದ ಕರನಿಂಗ,ಅಯೂಬ ಪೀರಜಾದೆ, ಇಮ್ರಾನ್ ಜಮಾದಾರ
ಉಸ್ಮಾನ ಜಾಫರ್, ಜಾಕಿರ ,ಪೀರಜಾದೆ, ಜೈಹೀರ ಮುಲ್ಲಾ,ನಾಗೇಶ್ ಸಂಗ್ಗೋಳಿ,ಮಜೀದ ಪೀರಜಾದೆ ಇಂತಿಯಾಜ್ ಪೀರಜಾದೆ, ಸಲ್ಲಾವುದ್ದೀನ್ ಪೀರಜಾದೆ, ಗೌಸ ಜಕಾತಿ,ರಹೇಮಾನ್ ಪೀರಜಾದೆ,ಮಾರುತಿ ಪೂಜೇರಿ, ಹಲವರು ಉಪಸ್ಥಿತರಿದ್ದರು.