ಆರೋಗ್ಯ ಸಂಪತ್ತು ಇಲ್ಲದಿದ್ದರೆ ಮಾನವನ ಶರೀರ ಶವ ಇದ್ದಂತೆ: ಪೀರಜಾದೆ
ಗೋಕಾಕ : ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ, ಶಿಸ್ತನ್ನು ರೂಪಿಸಿಕೊಂಡು ಸೌಹಾರ್ದತೆಯ ಬದುಕಿನೊಂದಿಗೆ ಆರೋಗ್ಯವಂತ ಭಾರತದ ಸದೃಢ ಪ್ರಜೆಗಳಾಗಿ ಬಾಳುತ್ತಾರೆ ಎಂದು ಗೋಕಾಕ ತಾಲೂಕಿನ ಕೊಣ್ಣೂರಲ್ಲಿನ ಆಚಾರ್ಯ ಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ 2023-24ನೇ ಸಾಲಿನ ವಾರ್ಷಿಕ ಕ್ರೀಡೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಣ್ಣೂರ ವಲಯದ ಸಿ ಆರ್ ಸಿ ಪೀರಜಾದೆ ಇವರು ಭೂಮಿ ಪೂಜೆ ನೇರವೇರಿಸಿ ಮಾತನಾಡಿ ಕ್ರೀಡೆಗಳಲ್ಲಿ ಬಹುಮಾನ ಪಡೆಯುವುದು ಮುಖ್ಯವಲ್ಲ ಬಾಗವಹಿಸುವುದು ಮುಖ್ಯ.ವಿದ್ಯಾರ್ಥಿಗಳು ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿದಂತೆ ಒಳಾಂಗಣ ಕ್ರೀಡೆಗಳಲ್ಲಿಯೂ ಬಾಗವಹಿಸುವಂತೆ ತಿಳಿಸಿದರು. ಆರೋಗ್ಯ ಸಂಪತ್ತು ಇಲ್ಲದಿದ್ದರೆ ಮಾನವನ ಶರೀರ ಶವ ಇದ್ದಂತೆ ಮೈದಾನದ ಕೊರತೆ ಇದ್ದರೂ ಸಹ ಇಲ್ಲಿನ ಶಿಕ್ಷಕಿಯರು ತಮ್ಮ ಶಾಲೆಯಲ್ಲಿ ಇದ್ದಷ್ಟು ಮೈದಾನದಲ್ಲಿ ಕ್ರೀಡೆಗಳನ್ನು ನಡೆಸುವುದರ ಮೂಲಕ ಮಕ್ಕಳ ಪ್ರತಿಭೆ ಗುರುತಿಸುತ್ತಿರುವುದು ಹೆಮ್ಮೆ ಪಡುವಂತಾಗಿದೆ.ಕ್ರೀಡೆ ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬಿರಿ ಮನುಷ್ಯನ ದೇಹ ಮತ್ತು ಮನಸನ್ನು ಶಾಂತ ಇಡುತ್ತದೆ ಎಂದರು.
ಇನ್ನೂ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರಿಗೆ ವಿದ್ಯಾರ್ಥಿಗಳಿಂದ ಹೂ ಗುಚ್ಚು ನೀಡಿ ಗೌರವ ಸಮರ್ಪಿಸಲಾಯಿತು. ಭೂಮಿ ಪೂಜೆ ನೆರವೇರಿಸಿ,ಶಪಥ ನುಡಿಸಿ ಕ್ರೀಡಾಜ್ಯೋತಿಯನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕ್ರೀಡೆಗೆ ಚಾಲನೆ ನೀದಿದರು.ಶಾಲೆಯಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಬಾಗವಸಿದರು
ಈ ಸಂಧರ್ಭದಲ್ಲಿ ಆಚಾರ್ಯ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿನ್ನಪ್ಪ ಚೌಗಲಾ, ಉಪಾದಕ್ಷ ಮಹಾವೀರ ಬುದಿಗೊಪ್ಪ, ಕಾರ್ಯದರ್ಶಿಗಳಾದ ಅರುಣ ಹೊಳಿ,ಸಿದ್ದಪ್ಪ ಬೊರಗಲ್ಲೆ. ಶಾಲೆಯ ಮುಖ್ಯೋಪಾದ್ಯಾಯಿನಿ ಸುಧಾ ಪೂಜೇರಿ, ಶೋಭಾ ಗುಡದವರ.ಸುರೇಖಾ ವಗ್ಗಣವರ, ಲಕ್ಷ್ಮಿ ನಡವಿನಮನಿ, ಚಂದ್ರವ್ವ ಸುಕುಂಡೆ, ಸಾವಿತ್ರಿ ಉಗರಖೋಡ.ಭಾರತಿ ಮಸೂತಿ, ಭಾರತಿ ಅಂಬಿಗೇರ, ರೇಖಾ ಪೂಜೇರಿ ಉಪಸ್ತಿರಿದ್ದು ಶಿಕ್ಷಕಿಯರಾದ ಮಹೇಶ್ವರಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.