ಅಟೋ ,ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ವಾರ್ನ ಮಾಡಿದ ಪಿ,ಎಸ್,ಐ,ವಾಲಿಕರ.
ಗೋಕಾಕ ನಗರ ಮತ್ತು ಹೊರವಲಯದಲ್ಲಿ ದಿನದಿನಕ್ಕೆ ಹೆಚ್ಚುತ್ತಿರುವ ಅಪಘಾತವನ್ನು ತಡೆಯುವಗೊಸ್ಕರ ಗೋಕಾಕ ನಗರ ಪಿ,ಎಸ್,ಐ, ವಾಲಿಕರ ಇವರು ಮ್ಯಾಕ್ಸಿ ಕ್ಯಾಬ್ ಚಾಲಕರು ಮತ್ತು ಆಟೋ ಚಾಲಕರ ಸಭೆಯನ್ನು ಕರೆದು, ರಸ್ತೆ ಸುರಕ್ಷತೆ ಮತ್ತು ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಇದರೊಂದಿಗೆ ಹಲವು ಚಾಲಕರು ದಾಖಲೆಗಳನ್ನು ತಮ್ಮಲ್ಲಿ ಇಟ್ಟುಕೊಳ್ಳದೆ ತಮ್ಮ ವಾಹನಗಳನ್ನು ಚಲಾಯಿಸುತ್ತಿರುವುದು ಕಂಡು ಬಂದಿರುವದರಿಂದ ಇಲಾಖೆ ನಿಗದಿಪಡಿಸಿರುವ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವದರ ಜೊತೆಯಲ್ಲಿ, ರಿಕ್ಷಾ ಚಾಲಕರು ಸಮವಸ್ತ್ರ ಧರಿಸಿ ವಾಹನದ ಎಲ್ಲಾ ದಾಖಲೆಗಳನ್ನು ವಾಹನದಲ್ಲಿ ಇಟ್ಟು ಕೊಳ್ಳಬೇಕೆಂದು ಎಂದು ಪಿ ಎಸ್ ಐ ವಾಲೀಕರ ಸೂಚಿಸಿದರು.
ಇನ್ಮುಂದೆ ಯಾರಾದರೂ ನಿಯಮಗಳನ್ನು ಉಲಂಘಿಸಿದರೆ ಅವರ ಆಟೋವನ್ನು ವಶಪಡಿಸಿ ಹಾಗು ದಂಡ ಕೂಡ ವಿಧಿಸಲಾಗುವುದು ಎಂದು ಖಡಕ್ಕಾಗಿ ವಾರ್ನಿಂಗ್ ನೀಡಿದರು.
ಇನ್ನು ಕಬ್ಬು ಕಟಾವು ಮಾಡಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವಾಗ
ರಾತ್ರಿಯಲ್ಲಿ ಕಬ್ಬಿನ ಟ್ರ್ಯಾಕ್ಟರ್ ಟ್ರೈಲರ್ ಕಾಣದೆ ಎಷ್ಟೋ ಅಪಘಾತಗಳು ಸಂಭವಿಸುತ್ತವೆ
ಅದಕ್ಕಾಗಿ ಗೋಕಾಕ ನಗರದ ಹೊರವಲಯದ ಸಂಕೇಶ್ವರ ಯರಗಟ್ಟಿ ರಸ್ತೆಯಲ್ಲಿ ಸಂಚರಿಸುವ ಕಬ್ಬಿನ ಟ್ರ್ಯಾಕ್ಟರಗಳಿಗೆ ರೇಡಿಯಂ ರೆಫ್ಲೆಕ್ಟರ್ ಅಳವಡಿಸುವ ಕಾರ್ಯಕ್ಕೆ ಗೋಕಾಕ ಪೊಲೀಸರು ಮುಂದಾದರು. ಲೌಡ್ ಸ್ಪೀಕರ್ ಹಚ್ಚಿ ಕೊಂಡು ಹೋಗುವ ಕಬ್ಬಿನ ಟ್ರ್ಯಾಕ್ಟರ್ ಮಾಲಕರಿಗೆ ಪಿ ಎಸ್ ಐ ವಾಲೀಕರ ವಾರ್ನಿಂಗ್ ನೀಡಿದರು
ಈ ಸಂದರ್ಭದಲ್ಲಿ ಗೋಕಾಕ ನಗರ ಪೋಲಿಸ ಠಾಣೆಯ ಎಲ್ಲ ಪೋಲಿಸರು ಸಾಥ ನೀಡಿದರು.