ಗ್ರಾಮೀಣ ಕನ್ನಡಪರ ಸಂಘಟನೆಗಳಿಂದ ಗೋಕಾಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಪ್ಪು ಪಟ್ಟಿಯ ಪ್ರದರ್ಶನ
ಇದೇ ತಿಂಗಳು 27 ರಂದು ಗೋಕಾಕದ ನ್ಯೂ ಇಂಗ್ಲೀಷ್ ಶಾಲೆಯ ಆವರಣದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರ ವಿರುದ್ದ ಗೋಕಾಕ ಗ್ರಾಮೀಣ ಭಾಗದ ಕನ್ನಡ ಪರ ಸಂಘಟನೆಗಳು ಘಟಪ್ರಭಾ ನಗರದಲ್ಲಿ ಗುರುವಾರ ಸಂಜೆ ಸಭೆ ಸೇರಿ ತೀವ್ರ ವಿರೊಧ ವ್ಯಕ್ತ ಪಡಿಸಿದರು.
ಈ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ ಅವರು ಈ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಗ್ರಾಮೀಣ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಗ್ರಾಮೀಣ ಭಾಗದ ಘಟಾನುಘಟಿ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಕಡೆಗಣಿಸಲಾಗಿದೆ ಅಲ್ಲದೇ ಈ ಸಮ್ಮೇಳನವು ಕೆಲವು ಬಕೆಟ್ ಹಿಡಿಯುವವರಿಗೆ ಮಾತ್ರ ಮನ್ನಣೆ ಕೊಡಲಾಗಿದೆ.
ನಿಮಗೆ ತಾಕತ್ತು ಇದ್ದರೆ ಗೋಕಾಕ ನಗರ ಸಾಹಿತ್ಯ ಸಮ್ಮೇಳನ ಮಾಡಿ ನಮಗೆ ಗ್ರಾಮೀಣ ಭಾಗದಲ್ಲಿ ಮಾಡಲು ಅವಕಾಶ ಮಾಡಿಕೊಡಬೇಕು ನಾವೆಲ್ಲರು ಸೇರಿ ಸಾಹಿತ್ಯ ಸಮ್ಮೇಳನ ಹೇಗೆ ಮಾಡಬೇಕು ಎಂಬುವದನ್ನು ತೋರಿಸಿ ಕೊಡುತ್ತೇವೆ ಎಂದು ಸವಾಲು ಹಾಕಿದರು ಅಲ್ಲದೇ ಇದನ್ನು ಸರಿ ಪಡೆಸದಿದ್ದರೆ ಸಮ್ಮೇಳನ ನಡೆಯುವ ದ್ವಾರದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡುವದಾಗಿ ಎಚ್ಚರಿಕೆ ಕೊಟ್ಟರು.
ಸಭೆಯನ್ನುದ್ದೇಶಿ ಕರ್ನಾಟಕ ರಕ್ಷಣಾ ವೇದಿಕೆ (ಸಂತೋಷ ಅರಳಿಕಟ್ಟಿ ಬಣ) ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷ ಅಯೂಬ ಪೀರಜಾದೆ,ಕರವೇ (ಶಿವರಾಮೇ ಗೌಡ ಬಣ)ದ ಜಿಲ್ಲಾ ಸಂಚಾಲಕ ರೆಹಮಾನ ಮೊಕಾಶಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಗೋಕಾಕ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ,ಉಪಾಧ್ಯಕ್ಷ ಶ್ರೀಕಾಂತ ಮಹಾಜನ, ಕರವೇ ಶಿವರಾಮೇ ಗೌಡ ಬಣ ದ ಗೋಕಾಕ ತಾಲೂಕಾಧ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ,ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ರಾಜು ದೊಡ್ಡಮನಿ,ಮಾರುತಿ ಚೌಕಾಶಿ,ಬಸವರಾಜ ಹುಬ್ಬಳ್ಳಿ,ಆನಂದ ಪೂಜೇರಿ,ನಾಗರಾಜ ಹುಕ್ಕೇರಿ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.