ವಿದ್ಯೆಯನ್ನ ಕಲಿತರೆ ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಬಹುದು : ಪ್ರಕಾಶ ಬಡೇಶ

ಹುಕ್ಕೇರಿ : ವಿದ್ಯಾರ್ಥಿ ಜೀವನದಲ್ಲಿ ಶೃದ್ದೆ ಭಕ್ತಿ,ಶಾಂತ ಚಿತ್ತದಿಂದ ಅಬ್ಯಾಸ ಮಾಡಬೇಕು ಯಾಕೆಂದರೆ ವಿದ್ಯೆಯನ್ನ ಕಲಿತರೆ ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಬಹುದೆಂದು
ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಗುರುಕುಲ ಪ್ರಾಥಮಿಕ ಹಾಗೂ ಪ್ರೌಡಶಾಲೆಯಲ್ಲಿ ಗೋಕಾಕ ತಾಲೂಕಿನ ಕೊಣ್ಣೂರಿನ ಓಂ ಆದ್ಮಾತ್ಮಿಕ ಹಾಗೂ ಯೋಗಾಶ್ರಮ ಕೊಣ್ಣೂರ ಇವರಿಂದ 2025-26 ನೆ ಸಾಲಿನ ಎಸ್,ಎಸ್,ಎಲ್,ಸಿ,
ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೋತ್ಸಾಹಕ ಕಾರ್ಯಕ್ರಮದಲ್ಲಿ ಮಹಾತ್ಮರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸತ್ಕಾರ ಸ್ವಿಕರಿಸಿ ಶರಣರಾದ ಪ್ರಕಾಶ ಬಡೇಶ ಮಾತನಾಡಿದರು
ಪ್ರತಿ ಬಾರಿಯೂ ನಮ್ಮ ಅಧ್ಯಾತ್ಮಿಕ ಕೇಂದ್ರದಲ್ಲಿ ಪರೀಕ್ಷೆ ಬರೆಯಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನ ನೀಡುತ್ತಾ ಬಂದಿದ್ದೇವೆ.ಆದರೆ ಹಲವಾರು ವಿದ್ಯಾರ್ಥಿಗಳು ದೂರದ ಊರಿಂದ ಬರುವಾಗ ಅನಾಹುತ ಆಗಬಾರದೆಂದು ನಾವೆ ಖುದ್ದಾಗಿ ಒಂದೊಂದು ಶಾಲೆಗೆ ತೆರಳಿ ಅಲ್ಲಿಯೆ ಮೊದಲೆ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ರಸಪ್ರಶ್ನೆಯ ಸ್ಪರ್ದೆ ಎರ್ಪಡಿಸಿ ವಿದ್ಯಾರ್ಥಿಗಳು ಅಬ್ಯಾಸ ಮಾಡುವ ಪೃವೃತ್ತಿ ಬೆಳೆಸಿಕೊಳ್ಳಲು ತಿಳಿಸುವುದು ಓಂ ಆದ್ಮಾತ್ಮಿಕ ಹಾಗೂ ಯೋಗಾಶ್ರಮದ ಉದ್ದೇಶವಾಗಿದೆ ಎಂದರು.
ಇವತ್ತು ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮೊದಲೆ ಆಯ್ಕೆಯಾದ ಹತ್ತು ವಿದ್ಯಾರ್ಥಿಗಳಿಗೆ ಸತ್ಯ,
ಶಾಂತಿ,ಸಾಧನೆ,ತ್ಯಾಗ,ಗಳಂತಹ ಜೀವನದ ಅರ್ಥ ತಿಳಿಸುವ ಶಬ್ದಗಳ ಹೆಸರನಿಟ್ಟು ಪ್ರತಿಯೊಬ್ಬರಿಗೂ ಕನ್ನಡ ಮತ್ತು ಆಂಗ್ಲ ಬಾಷೆಯಲ್ಲಿ ಪ್ರಶ್ನೆ ಕೇಳಿ ಸರಿಯಾಗಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಬುಜಪ್ಪಾ ಕಡಹಟ್ಟಿ ಇವರು ನಗದು ಬಹುಮಾನ ನೀಡಿ ಅಭಿನಂದಿಸಿದರು.
ಇನ್ನು ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿಸುವ ಶಿಕ್ಷಕರನ್ನು ಮಾತಾಜಿ,ಗುರುಜಿ ಎಂದು ಕರೆಯುತ್ತಿರುವುದು ಶಾಲೆಯ ವಿಶೇಷವಾಗಿದೆಸ್ವಾಮಿ ವಿವೇಕಾನಂದ ಆದರ್ಶಗಳನ್ನು ಇಲ್ಲಿನ ವಿದ್ಯಾರ್ಥಿಗಳು ಅಳವಡಿಸಿಕೊಂಡಿರುವುದು ಹೆಮ್ಮ ತರುವಂತಿದೆ.
ಈ ಸಂದರ್ಭದಲ್ಲಿ ಶಾಲಾ ಅದ್ಯಕ್ಷರಾದ ಬೀಮಪ್ಪ ಕೂದನೂರಿ, ಹೊನಪ್ಪ ಬನವನ್ಮವರ, ಆಡಳಿತಾಧಿಕಾರಿ ರಮೇಶ ಈರನಟ್ಟಿ, ನಿರ್ದೇಶಕ ಮಲಗೌಡ ಪಾಟೀಲ ಸೇರಿದಂತೆ ಶಿಕ್ಷಕಿಯರು,ಶಿಕ್ಷಕರು ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು.