ಕೊಣ್ಣೂರ ಗ್ರಾಮದೇವಿ ಜಾತ್ರೆಯನ್ನು ಸರ್ವ ಸಮಾಜ ಒಟ್ಟಾಗಿ,ಒಗ್ಗಟ್ಟಾಗಿ ಸೇರಿ ಅದ್ದೂರಿಯಾಗಿ ಮಾಡಿ : ಶಾಸಕ ರಮೇಶ ಜಾರಕಿಹೋಳಿ.

ಗೋಕಾಕ : ಗೋಕಾಕ ಜಾತ್ರೆಯಂತೆ ಕೊಣ್ಣೂರ ಗ್ರಾಮದೇವತೆ ಜಾತ್ರೆ ಶಾಂತಿ ರೀತಿಯಲ್ಲಿ ಭಕ್ತಿಯಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಹಿರಿಯರ ಜೊತೆ ಚರ್ಚಿಸಿ ಅವರ ಮಾರ್ಗದರ್ಶನದಲ್ಲಿ ನಡೆಸಬೇಕೆಂದು ಗೋಕಾಕ ತಾಲೂಕಿನ ಕೊಣ್ಣೂರಿನ ಶ್ರೀಲಕ್ಷ್ಮೀ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ
ಕೊಣ್ಣೂರ ಗ್ರಾಮದೇವತೆ ಜಾತ್ರೆಯ ದಿನಾಂಕ ಮತ್ತು ಪತ್ರಿಕೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಶಾಸಕ ರಮೇಶ ಜಾರಕಿಹೋಳಿಯವರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಕೆಲವು ದಿನಗಳ ಹಿಂದೆ ಕೊಣ್ಣೂರ ಗ್ರಾಮ ದೇವತೆಯ ಜಾತ್ರೆಯಲ್ಲಿ ಹೊನ್ನಾಟ ಮತ್ತು ರಥೋತ್ಸವದ ಬಗ್ಗೆ ಹಲವರಿಂದ ಆಕ್ಷೇಪಗಳು ಉಂಟಾಗಿ ಗೊಂದಲ ಸೃಷ್ಟಿಯಾಗಿ ಹಿರಿಯರು ನಡೆಸಿದ ಸಭೆ ಮಟುಕುಗೊಳಿಸಲಾಗಿತ್ತು.
ಅದೆ ಕಾರಣಕ್ಕಾಗಿ ಸ್ಥಳಿಯ ಹಿರಿಯರು ಮತ್ತು ಕೆಲವು ಪುರಸಭೆ ಸದಸ್ಯರು ಶಾಸಕರ ಗಮನಕ್ಕೆ ತಂದಿದ್ದರು.ಅದರ ಬೆನ್ನಲ್ಲೆ ಶನಿವಾರ ದಿನ ಮರಡಿಮಠದ ಮರಡಿಮಠದ ಮ,ಘ,ಚ, ಶ್ರೀ ಪವಾಡೇಶ್ವರ ಶ್ರೀಗಳ ಸಾನಿದ್ಯದಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ಸ್ಥಳಿಯರು ಕೊಣ್ಣೂರಲ್ಲಿ ಎರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಸಮಾಜದವರನ್ನು ಒಗ್ಗಟ್ಟಾಗಿಸಿ ಮುಂಬರುವ ಗ್ರಾಮದೇವತೆಯ ಜಾತ್ರೆ ನಿಮಿತ್ಯ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜಾತ್ರಾ ದಿನಾಂಕ ಮತ್ತು ಪತ್ರಿಕಾ ಬಿಡುಗಡೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಸ್ಥಳಿಯ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗೋಕಾಕ ಜಾತ್ರೆ ನಮ್ಮಿಂದಲೆ ಆಗಿದೆ ಅಂದರೆ ತಪ್ಪು ಯಾಕೆಂದರೆ ಯಾರು ಎಷ್ಟೆ ದೊಡ್ಡವರಾಗಿದ್ದರು ದೈವಕ್ಕಿಂತ ಯಾರು ದೊಡ್ಡವರಲ್ಲ ನಾನು ಜಾತ್ರಾ ಕಮೀಟಿಯ ಸದಸ್ಯನಷ್ಟೆ ,ಗೋಕಾಕ ಜಾತ್ರೆ ಆಗಿದ್ದು ಎಲ್ಲರೂ ಕೈ ಜೋಡಿಸಿ ಸಹಕಾರ ನೀಡಿದ್ದರಿಂದ ಅದ್ದೂರಿಯಾಗಿ ಜರುಗಿತು,
ಅದಕ್ಕಾಗಿ ತಾವುಗಳು ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಎಲ್ಲ ಸಮಾಜದವರನ್ನು ಗಣನೆಗೆ ತೆಗೆದುಕೊಂಡು ಮಿತವಾಗಿ ಖರ್ಚು ಮಾಡಿ ಕೆಮಿಕಲ್ ಬಂಢಾರ ಹಾರಿಸದಂತೆ ನೋಡಿಕೊಳ್ಳಬೇಕು.
ಒಂದು ವೇಳೆ ಆ ರೀತಿ ಕಂಡು ಬಂದಲ್ಲಿ ಪೋಲಿಸರಿಗೆ ಪ್ರಿ ಹ್ಯಾಂಡ ಕೊಡಬೇಕು ಎಂದರು.
ಇದೆ ಕೊನೆಯದಲ್ಲ ಇನ್ನು ಎರಡು ಮೂರು ಬಾರಿ ಜಾತ್ರೆಯ ಬಗ್ಗೆ ಸಭೆ ಕರೆದು ಎಲ್ಲ ಸಮಾಜದವರನ್ನು ಸೇರಿಸಿಕೊಂಡು ಜಾತ್ರಾ ಕಮಿಟಿ ಮಾಡಿ,ಕಮೀಟಿ ಜಾತ್ರೆಗೆ ಮಾತ್ರ ಸಿಮಿತವಾಗಿರಬೇಕು ಹೊರತು ದೇವಸ್ಥಾನಕ್ಕೆ ಅಲ್ಲ ಎಂದರು.
ಶಾಸಕರ ಭಾಷಣದ ವೇಳೆಯಲ್ಲಿ ಮರಡಿಮಠದ ಶ್ರೀಗಳು ಹಳೆಯ ಪದ್ದತಿಯಂತೆ ಹೊನ್ನಾಟ ಇರಲಿ ಎಂದಾಗ ಅದಕ್ಕೆ ಶಾಸಕರು ಕೂಡ ಸಮ್ಮತಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರಾದ ಶಿವಲಿಂಗಯ್ಯ ಗಣಾಚಾರಿ,ಪುರಸಭೆ ಸದಸ್ಯರಾದ ಪ್ರಕಾಶ ಕರನಿಂಗ, ಮುಖ್ಯಾಧಿಕಾರಿ ಶಿವಾನಂದ ಹೀರೆಮಠ ಇವರು ಜಾತ್ರೆಯನ್ನು ಶಾಂತಿಯುತವಾಗಿ ಮಾಡುವುದರ ಬಗ್ಗೆ ಮತ್ತು ಅದಕ್ಕೆ ಬೇಕಾಗುವ ಸೌಲಭ್ಯಗಳನ್ನು ಪುರಸಭೆಯ ವತಿಯಿಂದ ಒದಗಿಸಿ ಕೊಡುತ್ತೇವೆಂದು ಭರವಸೆ ನೀಡಿದರು.
ಇವತ್ತಿನ ಕೊಣ್ಣೂರ ಗ್ರಾಮದೇವತೆಯ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಪುರಸಭೆಯ ಅದ್ಯಕ್ಷ ವಿನೋದ ಕರನಿಂಗ,ಗೋಕಾಕ ತಹಸಿಲ್ದಾರ ಮೊಹನ ಬಸ್ಮೆ, ಸಿಪಿಆಯ್ ಆರ್, ಸುರೇಶಬಾಬು,ಪಿ,ಎಸ್,ಆಯ್, ಕೆ,ವಾಲಿಕರ, ತಾಲೂಕಾ ಮಟ್ಟದ ಅಧಿಕಾರಿಗಳಾದ ಡಾ: ಅಂಟಿನ್, ಹೆಸ್ಕಾಂ ಅಧಿಕಾರಿ ಬಾಗಡಿ, ತಾಲೂಕಾ ವೈದ್ಯಾದಿಕಾರಿ ಮುತ್ತಪ್ಪ ಕೊಪ್ಪದ,ಶಾಂತಿನಾಥ ಬಟ್ಟೆ ಅಂಗಡಿ ಮಾಲಿಕರಾದ ಸಚಿನ ಸಮಯ,ಮಾರುತಿ ಪೂಜೇರಿ,ಕಾಡಣ್ಣಾ ಪೂಜೇರಿ,ಸ್ಥಳಿಯರು ಸೇರಿದಂತೆ ಸರ್ವ ಸಮಾಜದ ನೂರಾರು ಜನ ಬಾಗಿಯಾಗಿದ್ದರು, ಇನ್ನು ನ್ಯಾಯವಾದಿ ರಮೇಶ ಈರನಟ್ಟಿ ಸ್ವಾಗತಿಸಿ ವಂದಿಸಿದರು.