ರಸ್ತೆ ಮೇಲೆ ಮಲಮೂತ್ರದ ನೀರು,ಕಣ್ಮಿಚ್ಚಿ ಕುಳಿತ ಚಿಂಚಲಿ ಪಟ್ಟಣ ಪಂಚಾಯತ ಅಧಿಕಾರಿಗಳು,
ಚಿಂಚಲಿ : ಪಟ್ಟಣ ಪಂಚಾಯತ ಶೌಚಾಲಯದ ಪೈಪ್ ಒಡೆದು ಹೋಗಿ ದೇವಸ್ಥಾನಕ್ಕೆ ಹೋಗುವ ರಸ್ತೆ ಪಕ್ಕ ಮಲಮೂತ್ರದ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರ ದುರ್ನಾತಕ್ಕೆ ಸುತ್ತಮುತ್ತಲಿನ ನಿವಾಸಿಗಳು ಮತ್ತು ಭಕ್ತರು ಪರದಾಡುವಂತಾಗಿದೆ.
ದಕ್ಷಿಣ ಭಾರತದ ಸುಪ್ರಸಿದ್ಧ ದೇವಸ್ಥಾನ ಶ್ರೀ ಮಾಯಾಕ್ಕಾ ದೇವಸ್ಥಾನಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನಕ್ಕೆ ಹೋಗಬೇಕಾದಂರೆ ಪಟ್ಟಣ ಪಂಚಾಯತ ಶೌಚಾಲಯದ ಮಲಮೂತ್ರದಲ್ಲಿ ನಡೆದುಕೊಂಡು ಹೋಗುತ್ತಿದ್ದರು ಸಹ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.
ಪಟ್ಟಣ ಪಂಚಾಯತ ಸ್ವಚ್ಛತೆಗಾಗಿ ಕೋಟಿ ಕೋಟಿ ಅನುದಾನ ಬಂದರು ಸಹ ಪಟ್ಟಣ ಪಂಚಾಯತ ಕಾರ್ಯಲಯದ ಶೌಚಾಲಯ ಪೈಪ್ ಒಡೆದು ಮಲಮೂತ್ರ ರಸ್ತೆ ಮೇಲೆ ಹರಿಯುತ್ತಿದೆ. ಕಳೆದ 15 ದಿನಗಳಿಂದ ಹರಿದು ಬರುವ ತ್ಯಾಜ್ಯವಸ್ತುಗಳು ಮತ್ತು ಮಲ ಮೂತ್ರ ಡಾಂಬರು ರಸ್ತೆಯ ಮೇಲೆ ಹರಿದು ಬರುತ್ತಿದ್ದು, ಇಡೀ ಬೀದಿ ಗಬ್ಬುನಾರುತ್ತಿದೆ.ಆದರು ಸಹ ಪಟ್ಟಣ ಪಂಚಾಯತ ಅಧಿಕಾರಿಗಳು ರೀಪೇರಿ ಮಾಡುವ ಕ್ರಮಕೈಗೊಳ್ಳದ ಅಧಿಕಾರಿಗಳು.
ಭಕ್ತರ ಆಕ್ರೋಶ:
ಶ್ರೀ ಮಾಯಾಕ್ಕಾ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಸ್ನಾನ ಮಾಡಿದ ನಂತರ ಮತ್ತೆ ಡಾಂಬರು ರಸ್ತೆಯ ಮೇಲೆ ಹರಿಯುತ್ತಿರುವ ಮಲಮೂತ್ರವನ್ನು ತ್ಯಾಜ್ಯವನ್ನು ತುಳಿದುಕೊಂಡು ದೇವರ ದರ್ಶನ ಮಾಡುವುದು ಯಾವ ಕರ್ಮ ಸಾರ್, ಅದರಲ್ಲೂ ರಸ್ತೆಯ ಮೇಲೆ ಮಲಮೂತ್ರ ಹರಿಯುತ್ತಿದ್ದರೂ ಯಾರೂ ಗಮನ ಹರಿಸದಿರುವುದು ವಿಪರ್ಯಾಸವಾಗಿದೆ ಎಂದು ಸ್ಥಳೀಯರು ಹಾಗೂ ದೇವಸ್ಥಾನಕ್ಕೆ ಬಂದ ಭಕ್ತರ ಕುಟುಂಬದವರು ಪಟ್ಟಣ ಪಂಚಾಯತ ಅಧಿಕಾರಿಗಳ ಮೇಲೆ ಭಕ್ತರು ಆಕ್ರೋಶ ವ್ಯಕ್ತ ಪಡೆಸಿದ್ದಾರೆ.