ಯೂ ಟೂಬ್ ಬ್ಯಾನ್ ಎಂದು ಪ್ರಕಟಣೆ ಹೊರಡಿಸಿಲ್ಲ,,ಬೆಳಗಾವಿ ಜಿಲ್ಲಾಧಿಕಾರಿ ಸ್ಪಷ್ಟನೆ,,
ಬೆಳಗಾವಿ : ಬೆಳಗಾವಿ ಜಿಲ್ಲಾಧಿಕಾರಿ ಗಳು
‘ಯೂಟ್ಯೂಬ್ ಚಾನೆಲ್’ಗಳನ್ನು ಬ್ಯಾನ್
ಮಾಡಲಾಗಿದೆ’ ಎಂದು ಸಾಮಾಜಿಕ
ಜಾಲತಾಣಗಳಲ್ಲಿ (Social media)
ಮಾಧ್ಯಮ ಪ್ರಕಟಣೆಯೊಂದು ತುಂಬಾ
ಹರಿದಾಡುತ್ತಿದೆ.ಅದರ ಜೊತೆಯಲ್ಲಿ ಕೆಲವು ಸರಕಾರಿ ಕಚೇರಿಗಳಲ್ಲಿಯೂ ಕೂಡ ಜಿಲ್ಲಾಧಿಕಾರಿಗಳು ಯೂಟೂಬ್ ಬ್ಯಾನ್ ಮಾಡಿದ್ದಾರೆ ಅಂತ ತಮ್ಮ ಟೇಬಲಗಳ ಮೇಲೆ ,ಕಚೇರಿಯ ನೋಟಿಸ್ ಬೋರ್ಡಿನ ಮೇಲೆ ಅಂಟಿಸಿದ್ದುಆದರೆ ಇಂತಹ ಯಾವುದೇ ಪ್ರಕಟಣೆಯನ್ನು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಡಿಸಿರುವುದಿಲ್ಲ, ಇದು ಸತ್ಯಕ್ಕೆ
ದೂರವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್
ಪಾಟೀಲ ಅವರು ಸ್ಪಷ್ಟಪಡಿಸಿದ್ದಾರೆ.
ನಕಲಿ ಮಾಧ್ಯಮ ಪ್ರಕಟಣೆಯನ್ನು ಸೃಷ್ಟಿಸಿ
ಯೂಟ್ಯೂಬ್ ಚಾನೆಲ್ ಬ್ಯಾನ್ (banned)
ಮಾಡಲಾಗಿದೆ ಎಂದು ಸಾಮಾಜಿಕ
ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದು ಸಾರ್ವಜನಿಕರಲ್ಲಿ ಗೊಂದಲವನ್ನುಂಟು
ಮಾಡಿದೆ.
ಈ ರೀತಿ ವಿನಾಕಾರಣ ಗೊಂದಲ
ಮೂಡಿಸುತ್ತಿರುವವರ ಮತ್ತು ಅದನ್ನು ಪ್ರಚಾರ
ಪಡಿಸುವವರ ವಿರುದ್ಧ ಕಾನೂನು ಕ್ರಮವನ್ನು
ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆನೀಡಿದ್ದಾರೆ.
ಇನ್ನು ಯಾರಾದರೂ ಯೂ ಟೂಬ್ ಬ್ಯಾನ್ ಮಾಡಿದ್ದಾರೆ ಅಂತ ತಿಳಿಸಿದ್ದೆ ಆದಲ್ಲಿ ಅಂತವರ ಹತ್ತಿರ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಬ್ಯಾನ್ ಮಾಡಿದ ಆದೇಶ ಪ್ರತಿ ಪಡೆಯುವಂತಾರಬೇಕು,,