ಮನೆಗೆ ಒಳ್ಳೆಯ ಮಗನಾದರೆ ದೇಶಕ್ಕೂ ಕೂಡ ಆತ ಒಳ್ಳೆಯ ಮಗ: ಡಾ: ಶ್ರೀ ಮಹಾಂತಯ್ಯ ಸ್ವಾಮಿ
ಗೋಕಾಕ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ವಿವಿದ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಗಾಗಿ
ಜೈ ಅಂಬೆ ಸೇವಾ ಸಮಿತಿ ಮತ್ತು ಗ್ಲೋಬಲ್ ಪೀಸ್ ಯುನಿವರ್ಸಿಟಿ (ಯು,ಎಸ್,ಎ)ಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡ ಹೂಲಿಕಟ್ಟಿ ಗ್ರಾಮದ ಶ್ರೀಗರಗದ ದುರ್ಗಾ ಮಾತಾ ದೇವಸ್ಥಾನದ ಶ್ರೀ ಮಹಾಂತಯ್ಯ ಅಜ್ಜನವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಮಯದಲ್ಲಿ ಕೆರಳದ ರಾಷ್ಟ್ರಿಯ ಹಿಂದೂ ಮಹಾ ಸಭಾ ಪ್ರದಾನ ಕಾರ್ಯದರ್ಶಿ ಸ್ವಾಮಿ ಸೌಪರ್ಣಿಕಾ ವಿಜಯೆಂದ್ರ ಇವರಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ ಡಾ: ಮಹಾಂತಯ್ಯನವರು
ನಾಳೆ ಒಂದು ತುತ್ತು ಅಣ್ಣ ನಮಗೆ ನಿಡುತ್ತಾರೆಂದು ಆಸೆಯಿಂದ ಒಂದು ಒಪ್ಪತ್ತಿನ ಊಟ ಕಡಿಮೆ ಮಾಡಿ ನಮಗೆ ನೀಡಿ ಮಕ್ಕಳನ್ನು ಸಾಕಿರುತ್ತಾರೆ, ಆದರೆ ಇವತ್ತಿನ ಯುವ ಪಿಳಿಗೆ ಹೆತ್ತ ತಂದೆಗಳನ್ನು ದುಶ್ಚಟಗಳಿಗೆ ಮಾರು ಹೋಗಿ ಮತ್ತು ತಮ್ಮ ಪತ್ನಿಯರ ಮಾತು ಕೇಳಿ ವೃದ್ದಾಶೃಮಕ್ಕೆ ಕಳುಹಿಸುತಿದ್ದಾರೆ, ಅದು ನಿಲ್ಲಬೇಕು, ಮನೆಗೆ ಒಬ್ಬ ಒಳ್ಳೆಯ ಮಗನಾದರೆ ದೇಶಕ್ಕೂ ಕೂಡ ಆತ ಒಳ್ಳೆ ಮಗನಾಗುವುದರಲ್ಲಿ ಯಾವ ಸಂದೇಹವಿಲ್ಲ,
ಈ ಪದವಿ ಬಂದನಂತರ ಇನ್ಮುಂದೆ ಸಮಾಜ ಸೇವೆ ಮಾಡುವ ಕೆಲಸ ಹೆಚ್ಚಾಗಿದೆ, ಅದಕ್ಕೆ ತಕ್ಕಂತೆ ನಾನು ನನಗೆ ಸಾದ್ಯವಾದಷ್ಟು ಸಮಾಜ ಸೇವೆ ಮಾಡುತ್ತೇನೆ. ಮನೆಯಲ್ಲಿ ಕೇವಲ ಒಬ್ಬ ತಾಯಿ ಇರುತ್ತಾಳೆ ಆದರೆ ವೃದ್ದಾಶ್ರಮದಲ್ಲಿ ಹತ್ತಾರು ತಾಯಂದಿರ ಸೇವೆ ಮಾಡುವ ಬಾಗ್ಯ ನನಗೆ ಒದಗಿದೆ ಎಂದರು.
ಈ ಸಂದರ್ಬದಲ್ಲಿ ಜೈ ಅಂಬೆ ಸೇವಾ ಸಮಿತಿಯಿಂದ ಆಗಮಿಸಿದ ಸ್ವಾಮಿಜಿಗಳಾದ ಬಸವರಾಜ ಅಜ್ಜನವರಿಗೆ, ಸಿದ್ದಾಶ್ರಮದ ಶ್ರೀಚಿದಾನಂದ ಜಾರಕಿಹೋಳಿ,ರಾಯಬಾಗದ ಅಪ್ಪಾಜಿ ದುಂಡುಸುತಾರ,ಸ್ಥಳಿಯ ಮುಖಂಡರಾದ ವಿಶ್ವ ಹಿಂದೂ ಪರಿಷತ್ ಬಜರಮಗದಳದ ಬೆಳಗಾವಿ ಸಂಯೋಜಕರಾದ ಸದಾಶಿವ ಗುದುಗಗೋಳ ಇವರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.