ನದಿ ಇಂಗಳಗಾಂವ ಗ್ರಾ, ಪಂ, ನೂತನ ಸದಸ್ಯರಿಗೆ ಅಥಣಿಯ ದಲಿತ ಮುಖಂಡರು ಹಾಗೂ ಪತ್ರಕರ್ತರಿಂದ ಸನ್ಮಾನ
ಗ್ರಾಮ ಪಂಚಾಯತಿ ಚುನಾವಣೆಯ ನದಿ ಇಂಗಳಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ ನಂಬರ ಎರಡರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ತಿರುಮಲಾ ವಿಲಾಸ ಕಾಂಬಳೆ ಹಾಗೂ ವಾರ್ಡ ನಂಬರ ನಾಲ್ಕರಲ್ಲಿ ಶ್ರೀಮತಿ ವೀಣಾ ಪ್ರಮೋದ ಕಾಂಬಳೆಯವರು ಘಟಾನುಗಟಿ ಅಭ್ಯರ್ಥಿಗಳ ವಿರುದ್ಧ ಪ್ರಚಂಡ ಬಹುಮತದಿಂದ ಜಯಗಳಿಸಿ ಸದರಿ ಎರಡು ವಾರ್ಡಗಳಲ್ಲಿ ಅಭಿವೃದ್ಧಿಯ ಕಾರ್ಯದತ್ತ ಸಜ್ಜಾಗಿ ನಿಂತಿರುವ ಜಯಬೇರಿಯ ಗ್ರಾಮ ಪಂಚಾಯತಿ ಚುನಾಯತ ಸದಸ್ಯರಿಗೆ ಅಥಣಿ ತಾಲೂಕಾ ಪತ್ರಕರ್ತ ಸಂಘಟನೆಯ ಹಾಗೂ ದಲಿತ ಮುಖಂಡರು ಸನ್ಮಾನಿಸಿ ಗೌರವಿಸಿದರು,
ಇನ್ನು ಗೌರವ ಸ್ವಿಕರಿಸಿ ಅವಿರೋದವಾಗಿ ಆಯ್ಕೆಯಾದ ಅಬ್ಯರ್ಥಿ ಶ್ರೀಮತಿ ತಿರುಮಲಾ ವಿಲಾಸ ಕಾಂಬಳೆ ಹಾಗೂ ವಾರ್ಡ ನಂಬರ ನಾಲ್ಕರಲ್ಲಿ ಜಯಬೇರಿ ಸಾದಿಸಿದ ಶ್ರೀಮತಿ ವೀಣಾ ಪ್ರಮೋದ ಕಾಂಬಳೆಯವರು ಮಾತನಾಡಿ ಶೌಚಾಲಯ, ಆಸರೆ ಮನೆ, ಬೀದಿದೀಪ ನಿರ್ವಹಣೆ, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ತಮ್ಮ ಗುರಿ ಎಂದರು.
ಈ ವೇಳೆ ಪತ್ರಕರ್ತರಾದ ರಮೇಶ ಬಾದವಾಡಗಿ,ರಾಕೇಶ ಮೈಗೂರ,ಸಂದೀಪ ಘಟಕಾಂಬಳೆ, ಹಾಗೂ ವಿಲಾಸ ಕಾಂಬಳೆ,ಮತ್ತು ದಲಿತ ಮುಖಂಡರುಗಳಾದ ಮಾಂತೇಶ ಬಾಡಗಿ,ಅಣ್ಣಪ್ಪ ಭಜಂತ್ರಿ, ಮಂಜು ಹೋಳಿಕಟ್ಟಿ,ಗಣಪತಿ ಕಾಂಬಳೆ ದರೂರ,ಮಹೇಶ ಕಾಂಬಳೆ ದರೂರ,ಜಗನ್ನಾಥ ಕಾಂಬಳೆ, ಹಾಗೂ ಕರ್ನಾಟಕ ರಾಜ್ಯ ಮುನಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕಾಂಬಳೆ ಉಪಸ್ಥಿತರಿದ್ದರ