.ದೇಶದ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ : ವಿವೇಕ ಜತ್ತಿ
ಗೋಕಾಕನ ನಗರದ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಯವರ ಗೋಕಾಕ ಗೃಹ ಕಚೇರಿ ಹಿಲ್ ಗಾರ್ಡನ್ ನಲ್ಲಿ ಗೋಕಾಕ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ವತಿಯಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಮಾತನಾಡಿ ಕಾಂಗ್ರೆಸ್ ಮಾಡಿದ ಎಪ್ಪತ್ತು ವರ್ಷಗಳ ಸಾಧನೆಯನ್ನು ಬಿಡಿ ಬಿಡಿಯಾಗಿ ಬಿಡಿಸಿ ಹೇಳಿದರು ಹಾಗೂ ಈ ದೇಶದ ಎಲ್ಲಾ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ ಎಲ್ಲರನ್ನೂ ಒಗ್ಗೂಡಿಸಿ ಹೋಗಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಹಾಗೂ ಮುಂಬರುವ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ವಿನಂತಿಸಿದರು.
ಈ ಸಂಧರ್ಭದಲ್ಲಿ ಸಭೆಯಲ್ಲಿ ಡಿಸಿಸಿ,ಇಮ್ರಾನ್ ತಪಕೀರೆ, ರಾಜ್ಯ ಸಂಚಾಲಕ ಸಮೀವುಲ್ಲಾ ದೇಸಾಯಿ, ಬಸನಗೌಡ ಹೊಳಿಯಾಚೆ
ಜಿಲ್ಲಾ ಪದಾಧಿಕಾರಿಗಳಾದ ರವಿ ಮೂಡಲಗಿ ಇಮಾಮ ಅಂಡಗಿ ಸಲೀಂ ಇನಾಮದಾರ ಹಾಪೀಜ ದಸ್ತಗೀರ ಮುಲ್ಲಾ ನೇಮಿನಾಥ ಬೊಮ್ಮಣ್ಣವರ ಗುಲ್ಜಾರ್ ದೇಸಾಯಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು ಗೋಕಾಕ ಬ್ಲಾಕ್ ಅದ್ಯಕ್ಷ ಶ್ರೀ ರೆಹಮಾನ್ ಮೊಕಾಶಿಯವರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು