ದಶಕ ಕಳೆದರು ಉದ್ಘಾಟನೆ ಭಾಗ್ಯ ಕಾಣದ ಅಳಗವಾಡಿ ಪ್ರವಾಸಿ ಮಂದಿರ :
ವಿಶ್ವನಾಥ ಗಾಣಿಗೇರ ಆಗ್ರಹ
ರಾಯಬಾಗ: ಕಳೆದ ೧೨ ವರ್ಷಗಳಿಂದ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದೇ ಲೋಕೊಪಯೋಗಿ ಇಲಾಖೆಯ ತಾಲೂಕಿನ ಅಧಿಕಾರಿಗಳು ಸಾರ್ವಜನಿಕರಿಗೆ ಸುಳ್ಳು ತಿಳುವಳಿಕೆಯನ್ನು ನೀಡಿ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡುವುದರಲ್ಲಿ ಅಧಿಕಾರಿಗಳೆ ರಾಜಕೀಯ ಮಾಡುತ್ತಿದ್ದಾರೆ ಹೀಗಾಗಿ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದೇ ದಶಕಗಳು ಕಳೆದರು ಉದ್ಘಾಟನೆ ಭಾಗ ಕಾಣದ ಉಳಿದು ಹೋಗಿದೆ ಎಂದು ಕುಡಚಿ ಜನಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗಾಣಿಗೇರ ಹೇಳಿದರು.
ಅವರು ರಾಯಬಾಗ ತಹಶೀಲ್ದಾರ ಅವರು ಪ್ರವಾಸಿ ಮಂದಿರ ಲೋಕಾರ್ಪಣೆ ತಕ್ಷಣ ಮಾಡಬೇಕೆಂದು ಉಪ ತಹಶೀಲ್ದಾರ ಪರಮಾನಂದ ಮಂಗಸೋಳಿ ಅವರಿಗೆ ಮನವಿ ನೀಡಿ ಮಾತನಾಡುತ್ತಾ ಕುಡಚಿ ಮತಕ್ಷೇತ್ರದ ಅಳಗವಾಡಿ ಗ್ರಾಮದಲ್ಲಿರುವ ಪ್ರವಾಸಿ ಮಂದಿರವು ೧೨ ವರ್ಷಗಳ ಹಿಂದೆ ಬಿ. ಸಿ ಸರಿಕರ ಅವರು ಶಂಕುಸ್ಥಾಪನೆ ಮಾಡಿದರು. ಈ ಪ್ರವಾಸಿ ಮಂದಿರವು ಸಾರ್ವಜನಿಕರ ತೆರಿಗೆ ಹಣದಲ್ಲಿ ಸುಮಾರು ೪೦ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿ ಸುಮಾರು ದಶಕ ಕಳೆದರು ಇನ್ನು ಲೋಕಾರ್ಪಣೆಯಾಗದೆ ಉಳಿದಿರುತ್ತದೆ. ಶೀಘ್ರವಾಗಿ ಲೋಕಾರ್ಪಣೆ ಮಾಡಬೇಕೆಂದು ಹೊಂಗಿರಣ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಸಂಘ ಹಾಗೂ ಕುಡಚಿ ಜನಸೇವಾ ಸಂಘಟನೆಯಿಂದ ಜನೇವರಿ ೨೬ ರೊಳಗಾಗಿ ಲೋಕಾರ್ಪಣೆ ಮಾಡದಿದ್ದರೆ, ಪ್ರವಾಸಿ ಮಂದಿರದ ಮುಂದೆ ಸಾರ್ವಜನಿಕರೊಂದಿಗೆ ಫೆಬ್ರುವರಿ ೦೧ ರಂದು ಆಮರಣ ಉಪವಾಸ ಸತ್ಯಾಗ್ರಹ ಮಾಡುತ್ತೇವೆಂದು ರಾಯಬಾಗ ತಹಶೀಲ್ದಾರ ಮನವಿ ಸಲ್ಲಿಸಲಾಗಿದ್ದೆಂದು ಕುಡಚಿ ಜನಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗಾಣಿಗೇರ ಹೇಳಿದರು.
ಈ ಸಂದರ್ಭದಲ್ಲಿ ಹೊಂಗಿರಣ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಸಂಘ ರಾಜು ಐತವಾಡೆ. ಹಣಮಂತ ಸಣ್ಣಕ್ಕಿನವರ. ಶ್ರೀಧರ ಗಾಣಗೇರ. ವಿಠ್ಠಲ ಬಡಿಗೇರ. ಸಂಜು ಸಣ್ಣಕ್ಕಿನವರ. ಹಾಗೂ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.