ನಿಲಜಿ ಗ್ರಾಮ ಪಂಚಾಯತಿ ಇನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ತಕ್ಕೆಗೆ
ಹಾರೂಗೇರಿ : ಸಮೀಪದ ನಿಲಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯನ್ನು ಬಿಜೆಪಿ ಬೆಂಬಲಿತ ಅಭ್ಯಥಿಗಳ ಗೆಲ್ಲವು ಸಾಧಿಸಿದ್ದಾರೆ ಗ್ರಾಮದ ಸದೀಪ ಪಾಟೀಲ ಅಧ್ಯಕ್ಷರಾಗಿ ಮತ್ತು ಶ್ರೀಮತಿ ಮಂಗಲ ನಿಂಬಾಳಕರ ಇವರು ಉಪಾದ್ಯಕ್ಷರಾಗಿ ಆಯ್ಕೆಯಾದರು.
ನಿಲಜಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು ೧೮ ಸದಸ್ಯರಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳನ್ನು ಚುನಾವಣೆ ಅಧಿಕಾರಿಗಳಿಗೆ ನೀಡಿದರು. ಅಧ್ಯಕ್ಷ ಸ್ಥಾನಕ್ಕಾಗಿ ಸದೀಪ ಪಾಟೀಲ ಹಾಗೂ ಮೇಘರಾಜ ಮಾಳಗಿ ಇವರು ನಾಮಪತ್ರವನ್ನು ನೀಡಿದರು. ಇನ್ನೂ ಉಪಾಧ್ಯಕ್ಷ ಮಹಿಳಾ ಸ್ಥಾನಕ್ಕೆ ಶ್ರೀಮತಿ ಮಂಗಲ ನಿಂಬಾಳಕರ ಹಾಗೂ ವೀನಾಕ್ಷಿ ಅಕೋಳ ಇವರುಗಳು ನಾಮಪತ್ರವನ್ನು ಸಲ್ಲಿಸಿದ್ದರು.
ಸದೀಪ ಪಾಟೀಲ ಅವರಿಗೆ ೧೧ ಮತಗಳ ಪಡೆದುಕೊಂಡರು ಇವರ ಪ್ರತಿಸ್ಫರ್ಧಿಯಾದ ಮೇಘರಾಜ ಮಾಳಗಿ ಇವರು ೭ ಮತಗಳನ್ನು ಪಡೆದುಕೊಂಡರು ಸದೀಪ ಪಾಟೀಲ ಅವರು ೪ ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀಮತಿ ಮಂಗಲ ನಿಂಬಾಳಕರ ಅವರಿಗೆ ೧೧ ಮತಗಳ ಪಡೆದುಕೊಂಡರು ಅವರ ಪ್ರತಿಸ್ಪರ್ಧಿಯಾಗಿ ಶ್ರೀಮತಿ ಮೀನಾಕ್ಷಿ ಅಂಕೋಳ ಅವರು ೭ ಮತಗಳನ್ನು ಪಡೆದುಕೊಂಡರು ಶ್ರೀಮತಿ ಮಂಗಲ ನಿಂಬಾಳಕರ ಅವರು ೪ ಮತಗಳ ಅಂತರದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ವಿಠ್ಠಲ ರಾಠೋಡ ಹೇಳಿದರು. ಬಳಿಕ ಮತ್ತು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತ್ಕರಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ನೂತನ ಅದ್ಯಕ್ಷೆ ಸದೀಪ ಪಾಟೀಲ ಅವರು ಗ್ರಾಮ ಪಂಚಾಯತಿ ಸದಸ್ಯರ ಮತ್ತು ಗ್ರಾಮಸ್ಥರ ಸಹಕಾರದಿಂದ ಗ್ರಾಮ ಅಭಿವೃದ್ಧಿ ಮಾಡಲಾಗುವದು ಹೆಚ್ಚು ಕುಡಿಯುವ ನೀರು ಸ್ವಚ್ಛತೆ, ಚಂರಡಿ ಅಭಿವೃದ್ಧಿ ಮಾಡಿ ಗ್ರಾಮವನ್ನು ಸ್ವಚ್ಛಗ್ರಾಮ ಮಾಡುವ ಗುರಿ ನಮ್ಮದ್ದಾಗಿದ್ದೆಂದರು,
ಉಪಾದ್ಯಕ್ಷ ಶ್ರೀಮತಿ ಮಂಗಲ ನಿಂಬಾಳಕರ ಮಾತನಾಡಿ ನನಗೆ ಸಿಕ್ಕ ಅವಕಾಶದಲ್ಲಿ ಗ್ರಾಮದ ಮೂಲ ಭೂತ ಸೌಕರ್ಯಕ್ಕಾಗಿ ಶ್ರಮಿಸುವೆ ಎಂದರು
ಗ್ರಾಮದ ಮುಖಂಡ ನರಸು ತುಳಸಿಗೇರಿ ಮಾತನಾಡಿ ಗ್ರಾಮದ ಮುಖಂಡರ ಮಾರ್ಗದರ್ಶನದಲ್ಲಿ ಮತ್ತು ಸದಸ್ಯರ ಸಹಕಾರದಿಂದ ಗ್ರಾಮದ ಅಭಿವೃದ್ಧಿಗೆ ಮನ್ನಣೆ ನೀಡಲಾಗುವದು, ನಮ್ಮ ಗ್ರಾಮದ ಅಭಿವೃದ್ಧಿಯನ್ನು ಸ್ಥಳೀಯ ಶಾಸಕ ಪಿ ರಾಜೀವ್ ಹಾಗೂ ಸಂಸದ ಅಣ್ಣಾಸಾಬ ಜೋಲೆ, ಜಿಲ್ಲಾ ಉಸ್ತುವರಿ ಸಚಿವರೊಂದಿಗೆ ಮಾತನಾಡಿ ಗ್ರಾಮದಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿ ಮಾಡುವ ಗ್ರಾಮಸ್ಥರ ಹೆಚ್ಚಿನ ಜವಾಬ್ದಾರಿಯಾಗಿದ್ದು ನಾವುಗಳು ಸಹ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರಿಗೆ ಸಹಾಯ ಸಹಕಾರ ನೀಡುತ್ತೇವೆಂದು ಹೇಳಿದರು.
ಈ ಸಂದರ್ಭದಲ್ಲಿ ವಿಲಾಸ ಪಾಟೀಲ. ಬಸಗೌಡ ಪಾಟೀಲ, ಪ್ರದೀಪ ಪಾಟೀಲ, ಚೀತಾಮನಿ ಮಾ ಅಕ್ಕೇನ್ನವರ, ಶಿವಾಜಿ ಚೌವ್ಹಾನ, ಬಾಳಪ್ಪಾ ಪಡಲಾಳೆ, ಸಾದೇವ ಕಾಂಬಳೆ, ರವೀಂದ್ರ ಪಾಟೀಲ, ಗಣೇಶ ಪಾಟೀಲ ಉಪಸ್ಥಿತರಿದ್ದರು.