Breaking News

ಯೋಗಿಗಳ ಸ್ಥಾನಕ್ಕೆ ಯೋಗಿಗಳಂತೆ ಇರಬೇಕು : ನಿಜಗುನಾನಂದ ಸ್ವಾಮಿಜಿ

Spread the love

ಯೋಗಿಗಳ ಸ್ಥಾನಕ್ಕೆ ಯೋಗಿಗಳಂತೆ ಇರಬೇಕು : ನಿಜಗುನಾನಂದ ಸ್ವಾಮಿಜಿ

ಯೋಗಿಗಳ ಸ್ಥಾನಕ್ಕೆ ಬಂದವರು ಯೋಗಿಗಳಂತೆ ಇರಬೇಕು. ಶಿವಯೋಗಿಗಳ ಬದುಕು ಅತಿ ಅದ್ಬುತವಾದದ್ದು. ಯೋಗಿಯ ಪದ ಸ್ಪರ್ಶದ ಮಣ್ಣು ಈ ಜಗ್ಗತ್ತಿಗೆ ಪಾವನವಾದದ್ದು ಎಂದು ನಿಜಗುಣಾನಂದ ಮಹಾ ಸ್ವಾಮಿಗಳು ಹೇಳಿದರು.ಸಂತ ಸಂಘ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ಸಂಗಮೇಶ್ವರ ದೇವರು ಹೇಳಿದರು.

ಅವರು ನದಿ ಇಂಗಳಗಾಂವಿ ಗ್ರಾಮದಲ್ಲಿ 3 ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮದಲ್ಲಿ ಜೀವನ ದರ್ಶನ ಬಗ್ಗೆ ಮಾತನಾಡುತ್ತಾ ಶಿವಯೋಗಿಗಳನ್ನು ನೋಡಿದರೆ ಅವರಲ್ಲಿ ಭಕ್ತಿ ಶಕ್ತಿ ಬರುತ್ತದೆ. ನಾವುಗಳು ಎಲ್ಲರು ಸಮಾಜದ ಪ್ರಶ್ನೆ ಒಳಗಾದವರು ಆದರೆ ಶಿವಯೋಗಿಗಳ ಉತ್ತರವಾದರು. ಶಿವಯೋಗಿಗಳು‌ ನುಡಿದದ್ದು ಪಾವನವಾಗಿದೆ ಶಿವಯೋಗಿಗಳ ಜನ್ಮ ಸ್ಥಳ ಅತಿ ಪವಿತ್ರವಾದದ್ದು. ಜಗ್ಗತ್ತಿನಲ್ಲಿ ಮೂರು ಜನರ ಪಾತ್ರ ಮುಖ್ಯವಾಗಿದೆ. ಈ ಭೂಮಿಯ ಮೇಲೆ ದುಡ್ಡು ಇದ್ದವನು ದೊಡ್ಡವನಲ್ಲ. ಪ್ರಥಮವಾಗಿ ತಾಯಿಯನ್ನು ನಾವುಗಳು ಗೌರವದಿಂದ ಕಾಣಬೇಕು ತಾಯಿಯ ಸೇವೆ ಮಾಡುವ ಮನೋಭಾವನೆ ಹೊಂದಿರಬೇಕು. ತಾಯಿಯನ್ನು ಯಾರು ಮರೆತಿರುವರು ಅವರು ಮನುಷ್ಯರೇ ಅಲ್ಲ. ಜಗ್ಗತ್ತಿನಲ್ಲಿ ಹಣ ಕೊಟ್ಟರೆ ಎಲ್ಲವು ದೊರೆಯುತ್ತದೆ ಆದರೆ ತಾಯಿ ಮಾತ್ರ ಸಿಗುವುದಿಲ್ಲ. ತಾಯಿ ಬಹಳ ದೊಡ್ಡವಳು.

ಈ ದೇಶದಲ್ಲಿ 18 ಸಾವಿರ ವೃದ್ದಾಶ್ರಮಗಳು ನಿರ್ಮಾಣವಾದವು. ಜ್ಞಾನಿಗಳು ನುಡಿದಂತೆ ನಡೆಯುವುದೆ ಧರ್ಮ. ಜಗತ್ತಿಗೆ ಜ್ಞಾನಿ ತಾಯಿಗೆ ಮಗನಾಗಿರುತ್ತಾನೆ. ವೃದ್ಧ ತಂದೆ ತಾಯಿಯನ್ನು ಯಾರು ಮರೆಯಬೇಡಿ ಎಂದು ಕರೆ ನೀಡಿದರು.

ತಾಯಿ ಈ ಜಗ್ಗತ್ತಿನ ಬೇರು ಅವಳು. ಮನೆಯಲ್ಲಿ ಸಂಸ್ಕ್ರತಿಯ ಸಂಸ್ಕಾರ ದೊರೆಯುತ್ತದೆ. ನಮಗೆ ತಾಯಿಯ ಬೆಲೆ ಗೊತ್ತಿಲ್ಲ. ಆದರೆ ಸೀರೆಯ ಬೆಲೆ‌ ಎಲ್ಲರಿಗೂ ಗೊತ್ತಾಗುತ್ತದೆ. ಆಧ್ಯಾತ್ಮದ ಶಿಕ್ಷಣವೇ ನಿಜವಾದ ಶಿಕ್ಷಣ. ಧಾರಾವಾಹಿಗಳು ಕೇವಲ ಮನೋರಂಜನೆ ಅಷ್ಷೇ. ಅದರಿಂದ ಬದುಕುವದಕ್ಕೆ ಸಾಧ್ಯವಾಗುದಿಲ್ಲ. ಜಗ್ಗತ್ತಿನಲ್ಲಿ ಮನುಷ್ಯ ಬಹಳ ಚನ್ನಾಗಿ ಬದುಕಬೇಕು. ಜಗ್ಗತ್ತಿನಲ್ಲಿ ಮನುಷ್ಯನಿಗೆ ಏನು ತಿನ್ನಬೇಕು ಅನುವುದು ಅರಿವು ಇಲ್ಲವೇ ಇಲ್ಲ. ನುಡಿದತ್ತೆ ನಡೆ ಇದೆ ಕಡೆ ಬದುಕು ನಮ್ಮದು ತಿಳಿದುಕೊಳ್ಳಬೇಕು.

ಬವಿಷ್ಯ ನಮ್ಮ ಕೈಯಲ್ಲಿ ಇಲ್ಲ ನಮ್ಮನ್ನು ಮೇಲೆ‌ ಕುಳಿತವನು ಆಟ ಆಡುಸುತ್ತಿರುತ್ತಾನೆ.
ದ್ವಿತಿಯದಾಗಿ ಪ್ರಾಥಮಿಕ ಶಾಲಾ ಶಿಕ್ಷಕ ಶಾಲಾ‌ ಶಿಕ್ಷಕ ದೇಶದ ಬೇರುವಾಗಿರುತ್ತಾನೆ. ಶಿಕ್ಷಕರು ನಮ್ಮ‌ ಮನಸ್ಸಿಗೆ ಸಂಸ್ಕಾರ ನೀಡಿದ್ದಾರೆ

ತೃತಿಯದಾಗಿ‌ ನಮ್ಮ‌ ಆತ್ಮಕ್ಕೆ ಗುರುಯಾರು ಎಂದರೆ ಆಧ್ಯಾತ್ಮದಗುರು. ಯಾರು ಇತಿಹಾಸವನ್ನು ತಿಳಿದುಕೊಳ್ಳುವುದಿಲ್ಲವೋ ಅವರು ಇತಿಹಾಸ ಸೃಷ್ಠಿಸಲ್ಲು ಸಾಧ್ಯವಿಲ್ಲ ಶಿವಯೋಗಿಗಳ ವಾಣಿ ಈ ಜಗ್ಗತ್ತನ್ನು ಬೆಳಗಿದ್ದಾರೆ ಹೀಗಾಗಿ ಈ ಸಮಾಜದ ಜನರು ಅಥಣಿಯ ಶಿವಯೋಗಿಗಳನ್ನು ಮರೆಯಬಾರದು ಎಂದು ಹೇಳಿದರು

ವರದಿ: ವಿಲಾಸ ಕಾಂಬಳೆ. ಅಥಣಿ.


Spread the love

About Fast9 News

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *