ಅಬಿವೃದ್ದಿಗಾಗಿ ಗುಜನಟ್ಟಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ.
ಗೋಕಾಕ ತಾಲೂಕಿನ ಖನಗಾಂವ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಗುಜನಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿಯ ಉಪಚುನಾವಣೆಯಲ್ಲಿ ಗುಜನಟ್ಟಿ ಗ್ರಾಮಸ್ಥರಿಂದ 11:00 am ಗಂಟೆಯಾದರು ಇಲ್ಲಿಯವರೆಗೂ ಒಂದು ಮತದಾನ ಮಾಡಿರುವುದಿಲ್ಲ,
ತಮ್ಮ ಗ್ರಾಮದಲ್ಲಿರುವ ಜಾತಿಯ ಆದಾರದ ಮೇಲೆ ಮಿಸಲಾತಿ ಬಿಟ್ಟು ಬೇರೆ ಮಿಸಲಾತಿಯಿಂದ ನಮ್ಮ ಗ್ರಾಮದಲ್ಲಿ ಯಾವುದೆ ಅಬಿವೃದ್ದಿ ಕಾರ್ಯ ಆಗುತ್ತಿಲ್ಲಾ, ಬೇರೆ ಗ್ರಾಮದವರಿಂದ ನಮ್ಮ ಗ್ರಾಮದಲ್ಲಿ ಅಬಿವೃದ್ದಿಯಾಗುವುದಿಲ್ಲವೆಂದು ಇವತ್ತು ನಡೆಯುತ್ತಿರುವ ಗುಜನಟ್ಟಿಯ ಗ್ರಾಮ ಪಂಚಾಯತಿಯ ಉಪಚುನಾವಣೆಯಲ್ಲಿ ಯಾವುದೆ ಮತದಾನ ಮಾಡದೆ ಬಹಿಷ್ಕಾರ ಹಾಕಿದ್ದಾರೆಂದು ತಿಳಿದುಬಂದಿದೆ.