ಕನ್ನಡ ತಾಯಿಯ ಸೇವೆಗಾಗಿ ಆಯ್ಕೆ ಮಾಡಿ : ಬಸವರಾಜ ಖಾನಪ್ಪನವರ.
ಬರುವ ಮೇ 9 ರಂದು ಜರಗುವ ಬೆಳಗಾವಿ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಿಸಿ ಚುನಾವಣೆಗೆ ಸ್ವರ್ಧಿಸಿದ್ದು, ಈ ಬಾರಿ ಎಲ್ಲ ಕನ್ನಡಿಗರು ನನ್ನನ್ನು ಬೆಂಬಲಿಸಿ ಕನ್ನಡ ತಾಯಿಯ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕೆಂದು ಅಭ್ಯರ್ಥಿ ಬಸವರಾಜ ಖಾನಪ್ಪನವರ ಮನವಿ ಮಾಡಿದರು.
ರವಿವಾರದಂದು ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ ಹಾಗೂ ಸುಣಧೋಳಿ ಗ್ರಾಮದಲ್ಲಿ ಕಸಾಪ ಸದಸ್ಯರನ್ನು ಭೇಟಿಯಾಗಿ ಮತಯಾಚನೆ ಮಾಡಿ ಹುಣಶ್ಯಾಳ ಪಿ.ಜಿ ಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪರಮ ಪೂಜ್ಯ ಶ್ರೀ ನಿಜಗುಣದೇವರ ಆರ್ಶಿವಾದ ಪಡೆದು ಅವರು ಮಾತನಾಡಿದರು.
ಕನ್ನಡ ನಾಡು ,ನುಡಿ ,ನೆಲ, ಜಲಕ್ಕೆ ಕುತ್ತು ಬಂದಾಗ ಕಳೆದ 16 ವರ್ಷಗಳಿಂದ ಹೋರಾಟಗಳನ್ನು ಸಂಘಟಿಸಿ ಕನ್ನಡವನ್ನು ಗಟ್ಟಿಗೋಳಿಸುವ ಕಾರ್ಯದಲ್ಲಿ ನಿರತರಾಗಿದ್ದು, ಕನ್ನಡ ಉಳಿಸುವ ಹೋರಾಟಗಳ ಜೊತೆಗೆ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದ್ದು ಈ ಬಾರಿಯ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಚುನಾವಣೆಗೆ ಸ್ವರ್ಧಿಸಿದ್ದು, ಎಲ್ಲ ಸಾಹಿತಿಗಳು ,ಕನ್ನಡ ಪರ ಕಾಳಜಿ ಉಳ್ಳ ಕಸಾಪದ ಆಜೀವ ಸದಸ್ಯರು ನನ್ನನ್ನು ಬೆಂಬಲಿಸಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಿ ಕನ್ನಡವನ್ನು ಇನ್ನಷ್ಟು ,ಮತ್ತಷ್ಟು ಗಟ್ಟಿಗೋಳಿಸುವ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಖಾನಪ್ಪನವರ ಮನವಿ ಮಾಡಿದರು.
ಇದೇ ಸಂಧರ್ಭದಲ್ಲಿ ಸಿದ್ಧಲಿಂಗ ಕೈವಲ್ಯಾಶ್ರಮದ ಪರಮ ಪೂಜ್ಯ ಶ್ರೀ ನಿಜಗುಣದೇವರು ಅಭ್ಯರ್ಥಿ ಬಸವರಾಜ ಖಾನಪ್ಪನವರ ಅವರನ್ನು ಸತ್ಕರಿಸಿ, ಗೌರವಿಸಿದರು.
ಈ ಸಂಧರ್ಭದಲ್ಲಿ ಮುಖಂಡರುಗಳಾದ ಬಸವರಾಜ ಹತ್ತರಕಿ, ಶಿವಾನಂದ ವಾಲಿ, ರಾಮನಾಯ್ಕ ನಾಯಕ, ಸಾದಿಕ ಹಲ್ಯಾಳ, ನಿಜಾಮ ನದಾಫ ಇದ್ದರು.