Breaking News

ಗುರುವಿನ ಕೃಪೆ ಇದ್ದರೆ ಜೀವನ ಪಾವನವಾಗುತ್ತೆವೆ : ಡಾ: ಗಿರೀಶ ನಾರಗೊಂಡ.

Spread the love

ಗುರುವಿನ ಕೃಪೆ ಇದ್ದರೆ ಜೀವನ ಪಾವನವಾಗುತ್ತೆವೆ : ಡಾ: ಗಿರೀಶ ನಾರಗೊಂಡ.

ಪರಮಾನಂದವಾಡಿ: ನಾವುಗಳು ಮುಖ್ಯವಾಗಿ ಕೊರೋನಾ ಸೋಂಕಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡು ಆಧ್ಯಾತ್ಮಿಕ ಜ್ಞಾನಿಗಳ ಸಂಘ ಮಾಡಿಕೊಂಡು ಹೋಗುವುದು ಉತ್ತಮ‌ ಎಂದು ಡಾ. ಗೀರಿಶ ನಾರಗೊಂಡ ಹೇಳಿದರು.

ಅವರು ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ಪರಮಾನಂದವಾಡಿ ಯುಗಾದಿ ಜಾತ್ರಾ ಮಹೋತ್ಸವ 2021 ರ ಶ್ರೀ ಗುರುದೇವ ಬ್ರಹ್ಮಾನಂದ ಮಹಾಸ್ವಾಮಿಗಳ 45 ನೇ ಹಾಗೂ ಶ್ರೀ ಗುರುದೇವ ಸಿದ್ದೇಶ್ವರ ಮಹಾಸ್ವಾಮಿಗಳ 15 ನೇ “ಮಹಾಸಮಾಧಿ ಮಹೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗುರುಗಳ ಮಾತಿನಂತೆ ನಾವುಗಳು ನಡೆದುಕೊಳ್ಳಬೇಕು ಜ್ಞಾನ ದೊರೆಯುವ ಮಠ ಮಾನ್ಯಗಳಿಂದ ನಾವುಗಳು ದೂರ ಉಳಿದಿದ್ದೆವೆ ಗುರುವಿನ ಕೃಪೆ ನಮ್ಮ ಮೇಲೆ ಇರಬೇಕು ಅದರಿಂದ ನಾವುಗಳು ಜೀವನದಲ್ಲಿ ಪಾವನವಾಗುತ್ತೆವೆ ಎಂದು ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಪ.ಪೂ.ಶ್ರೀ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು. ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠ,ಗದಗ. ಪ.ಪೂ.ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠ,ಗದಗ. ಪ.ಪೂ.ಶ್ರೀ ಸದ್ಗುರು ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳ. ಶ್ರೀ ಗುರು ಬ್ರಹ್ಮಾನಂದ ಆಶ್ರಮ ಪರಮಾನಂದವಾಡಿ ಸನ್ಮಾನ್ಯ ಶ್ರೀ ಕಲ್ಲಪ್ಪಣ್ಣ ಮಗೆಣ್ಣವರ, ಮಾಜಿ ಶಾಸಕರು, ಬಸವರಾಜ ಸನದಿ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

ವರದಿ : ಆನಂದ ಕೊಳಿಗುಡ್ಡೆ.


Spread the love

About fast9admin

Leave a Reply

Your email address will not be published. Required fields are marked *