Breaking News

ಡಾ: ಬಿ,ಆರ್,ಅಂಬೇಡ್ಕರರವರ ಶ್ರಮದಿಂದ ಸಮಾಜದಲ್ಲಿ ನಮಗೆ ಸ್ಥಾನ ಇದೆ : ವೆಂಕಟೇಶ ಕೇಳಗೇರಿ

Spread the love

ಡಾ: ಬಿ,ಆರ್,ಅಂಬೇಡ್ಕರರವರ ಶ್ರಮದಿಂದ ಸಮಾಜದಲ್ಲಿ ನಮಗೆ ಸ್ಥಾನ ಇದೆ : ವೆಂಕಟೇಶ ಕೇಳಗೇರಿ

ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿ‌ ಅಂಬೇಡ್ಕರ ನಗರದ ನಿವಾಸಿಗಳಿಂದ ಭಾರತ ರತ್ನ, ಸಂವಿಧಾನ ಶಿಲ್ಲಿ ಡಾ : ಬಾಬಾ ಸಾಹೇಬ ಅಂಬೇಡ್ಕರ್ ರವರ 130 ನೆಯ ಜಯಂತಿಯನ್ನು ಆಚರಿಸಲಾಯಿತು.

ಬೆಳಗಾವಿ ಸಿ,ಆರ್,ಸಿ,ಎಲ್, ಅಧಿಕಾರಿಯಾದ ಬಾಲಚಂದ್ರ ಶಿಂಗ್ಯಾಗೋಳ ಇವರು ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಸ್ಥಳಿಯ ಮುಖಂಡರಾದ ವೆಂಕಟೇಶ್ವ ಕೇಳಗೇರಿ ಇವರು ಮಾತನಾಡಿ ಹಿಂದೂಳಿದ ತಮ್ಮ ಸಮಾಜವನ್ನು ಮುಂದೆ ತರಲು ಹಗಲಿರು ಶ್ರಮಿಸಿದ್ದರಿಂದ ಇವತ್ತು ನಾವೆಲ್ಲ ಸಮಾಜದಲ್ಲಿ ತಲೆ ಎತ್ತುವಂತಾಗಿದೆ ಅದಕ್ಕಾಗಿ ನಾವೆಲ್ಲರೂ ಅವರ ಮಾರ್ಗದರ್ಶನದಂತೆ ನಡೆಯುವುದು ಬಹಳ ಅವಶ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಯಮನಪ್ಪಾ ಕೊಣ್ಣೂರ, ದನ್ಯಕುಮಾರ ಮೇಗೇರಿ, ವಿಠ್ಠಲ ಗುಡಜ,ಮಯೂರ ಗುಡಜ,ಶಿವಾನಂದ ಹಾದಿಮನಿ,ಸದಾನಂದ ನಡಗೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದು ಸರ್ವರಿಗೂ ಸಿಹಿ ಹಂಚಲಾಯಿತು.


Spread the love

About fast9admin

Check Also

ರಾಯಬಾಗದಲ್ಲಿ ರಸ್ತೆ ತಡೆದು ಕರವೇ ಕಾರ್ಯಕರ್ತರಿಂದ ಪ್ರತಿಭಟನೆ.

Spread the loveರಾಯಬಾಗದಲ್ಲಿ ರಸ್ತೆ ತಡೆದು ಕರವೇ ಕಾರ್ಯಕರ್ತರಿಂದ ಪ್ರತಿಭಟನೆ. ರಾಯಬಾಗ : ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಕೆಲ …

Leave a Reply

Your email address will not be published. Required fields are marked *