ಸಂತ್ರಸ್ತರ ಪಾಲಿಗೆ ಕರುಣಾಮಯಿಯಾದ ಅಪ್ಪಾಸಾಬ ಸೌಂದಲಗಿ,
ಚಿಂಚಲಿ : ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ರಾತ್ರೋರಾತ್ರಿ ಹೆಚ್ಚು ನೀರು ಹರಿದು ಬರುತ್ತಿದೆ. ಇದರಿಂದ, ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ. ರಸ್ತೆ ಮೇಲೆ ಸಂತ್ರಸ್ತರು ರಾತ್ರಿಯಿಡಿ ಚಳಿಯಲ್ಲಿ ವಾಸವಾಗಿದ್ದಾರೆ.
ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಕೃಷ್ಣ ನದಿ ಹರಿಯುತ್ತಿರುವ ರಾತ್ರಿ ಸಮಯದಲ್ಲಿ ಅಪಾರ ಪರಮಾನದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಮನೆಗಳಿಗೆ ಹಾಗೂ ಗುಡಿಸಲುಗಳಿಗೆ ನೀರು ಬಂದಿರುವುದರಿಂದ ರಾತ್ರೋರಾತ್ರಿ ಖಾಲಿ ಮಾಡಿ ಮೊಳವಾಡ ರಸ್ತೆ ಚಿಂಚಲಿ ಪಟ್ಟಣದ ಹತ್ತಾರೂ ಕುಟುಂಬಗಳು ಕೊರಿವ ಚಳಿಯಲ್ಲಿ ರಸ್ತೆಯ ಮೇಲೆ ಮಲಗಿದ್ದರು.
ಇಷ್ಟೋದು ಅಪಾರ ಪರಮಾನದಲ್ಲಿ ನೀರು ಹರಿದು ಬರುತ್ತಿದರು ಸಹ ಕಾಳಜಿ ಕೇಂದ್ರ ಕೆಂದ್ರವನ್ನು ಪ್ರಾರಂಭಿಸುವುದಕ್ಕೆ ತಾಲೂಕಾ ಆಡಳಿತ ಮತ್ತು ಪಟ್ಟಣ ಪಂಚಾಯತಿಯವರು ನೆರೆ ಸಂತ್ರಸ್ತರ ಬಗ್ಗೆ ಇನ್ನೂವರೆಗೂ ಕಾಳಜಿ ತಗೆದುಕೊಂಡಿಲ್ಲ.ಹೀಗಾಗಿ ನೆರೆ ಸಂತ್ರಸ್ತರು ರಸ್ತೆಯ ಮೇಲೆ ವಾಸವಾಗುವ ಪರಿಸ್ಥಿತಿ ನಿಮಾರ್ಣವಾಗಿದೆ
ಸಂತ್ರಸ್ತರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ
*ನೆರೆ ಸಂತ್ರಸ್ತ ಸಹಾಯಕ್ಕೆ ಸ್ಥಳೀಯರು*: ಹತ್ತಾರೂ ಕುಟುಂಬಗಳು ರಾತ್ರೋರಾತ್ರಿ ಮನೆಗಳು ಖಾಲಿ ಮಾಡಿ ರಸ್ತೆಯ ಮೇಲೆ ವಾಸವಾಗಿದ್ದನ್ನು ವಿಷಯ ತಿಳಿದ ತಕ್ಷಣ ಸ್ಥಳೀಯರಾದ. ಅಪ್ಪಾಸಾಬ ಸೌಂದಲಗಿ ಅವರು ರಾತ್ರೋರಾತ್ರಿ ಮನೆಗಳು ಖಾಲಿ ಮಾಡಿಕೊಂಡು ರಸ್ತೆಯ ಮೇಲೆ ಮಲಗಿದ ಕಟುಂಬಗಳಿಗೆ 50 ಸಾವಿರ ನಗದು ರೂಪಾಯಿಗಳನ್ನು ಸಂತ್ರಸ್ತರಿಗೆ ನೀಡಿ ಮಾನವಿಯತೆಯನ್ನು ಮೆರೆದಿದ್ದಾರೆ