Breaking News

ಶಾಸಕ ರಮೇಶ ಜಾರಕಿಹೊಳಿ ಸಹಾಯಕ ಸುರೇಶ ಸನದಿ ಅವರಿಂದ ಕಾಳಜಿ ಕೇಂದ್ರಗಳಿಗೆ ಭೇಟಿ.!

Spread the love

ಶಾಸಕ ರಮೇಶ ಜಾರಕಿಹೊಳಿ ಸಹಾಯಕ ಸುರೇಶ ಸನದಿ ಅವರಿಂದ ಕಾಳಜಿ ಕೇಂದ್ರಗಳಿಗೆ ಭೇಟಿ.!

ಗೋಕಾಕ: ಮಳೆ ಕಡಿಮೆಯಾಗುತ್ತಿರುವದರಿಂದ ಪ್ರವಾಹವು ಕಡಿಮೆಯಾಗುತ್ತಿದೆ. ತಾಲ್ಲೂಕು ಆಡಳಿತದಿಂದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜನತೆ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರುವಂತೆ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೊಳ ತಿಳಿಸಿದರು.
ತಾಲೂಕಾಡಳಿತ, ನಗರಸಭೆ ಹಾಗೂ ಶಾಸಕರ ಕಾರ್ಯಾಲಯದಿಂದ ನಗರ ಎಲ್ಲ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಕುಂದು ಕೊರತೆ ವಿಚಾರಣೆ ನಡೆಸಿ, ಸ್ಥಳದಲ್ಲೇ ಜಾನುವಾರುಗಳಿಗೆ ಮೇವು ವ್ಯವಸ್ಥೆ ಮಾಡಿ, ರೈತರಿಗೆ ವಿತರಿಸಿ ಮಾತನಾಡಿದರು.
ಹಿಡಕಲ್ ಜಲಾಶಯ, ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾದಿಂದ ನೀರು ಹರಿವು ಪ್ರಮಾಣ ಕಡಿಮೆಯಾಗುವ ವಿಶ್ವಾಸವಿದೆ. ಸೋಮವಾರ ಸಂಜೆ ಒಳಗಾಗಿ ಪ್ರವಾಹ ತಗ್ಗಲಿದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಪ್ರವಾಹ ಪಿಡಿತ ಪ್ರೇದಶಗಳಲ್ಲಿ ಭೇಟಿ ನೀಡಿ, ಸಂತ್ರಸ್ತರ ನೋವುಗಳ ಸ್ಫಂಧಿಸು ಕಾರ್ಯ ಮಾಡಲಾಗುತ್ತಿದೆ. ಪ್ರವಾಹ ಪಿಡಿತ ಪ್ರದೇಶಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಶಾಸಕರ ನೇತ್ರತ್ವದಲ್ಲಿ ಸರಕಾರಕ್ಕೆ ಕಳುಹಿಸಲಾಗುತ್ತದೆ. ಸರಕಾರದ ಮಟ್ಟದಲ್ಲಿ ಶಾಸಕರು ಪರಿಹಾರ ನೀಡಲು ಶ್ರಮಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಸಂತ್ರಸ್ತರಿಗೆ ಆಹಾರ, ಆರೋಗ್ಯ ತಪಾಸಣೆ ಹಾಗು ಜಾನುವಾರು ಗಳಿಗೆ ಮೇವು ವಿತರಣೆ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಶಾಸಕರು ನೀಡಿದ ಮಾಸ್ಕ ಹಾಗೂ ಅವಶ್ಯಕ ದಿನ ಬಳಿಕೆ ಪರಿಕರಗಳನ್ನು ಸಂತ್ರಸ್ತರಿಗೆ ನೀಡಿ ಆರೋಗ್ಯ ರಕ್ಷಣೆ ಕಡೆಗೂ ಹೆಚ್ಚಿನ ಮಹತ್ವ ನೀಡುವಂತೆ ತಹಶೀಲದಾರ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಬಸವರಾಜ ಆರೇನ್ನವರ, ಶಾಸಕರ ಸಹಾಯಕ ಸುರೇಶ ಸನದಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಪರಿಸರ ಅಭಿಯಂತರ ಎಮ್ ಎಚ್ ಗಜಾಕೋಶ, ಪಶು ಪಾಲನೆ ಇಲಾಖೆಯ ಡಾ. ಮೋಹನ ಕಮತ, ಡಾ. ಶಶಿಕಾಂತ ಕೌಜಲಗಿ, ನಗರಸಭೆ ಸದಸ್ಯರಾದ ಶ್ರೀಶೈಲ ಯಕ್ಕುಂಡಿ, ಯೂಸುಫ್ ಅಂಕಲಗಿ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ಪ್ರಕಾಶ ಮುರಾರಿ, ಹನಮಂತ ಕಾಳಮ್ಮಗುಡಿ, ಮುಖಂಡರಾದ ದುರ್ಗಪ್ಪ ಶಾಸ್ತಿçಗೊಲ್ಲರ, ವಿಜಯ ಜತ್ತಿ, ಅಬ್ದುಲಸತ್ತಾರ ಶಭಾಶಖಾನ, ಕಿರಣ ಡಮಾಮಗರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಕಂದಾಯ ನಿರೀಕ್ಷಕ ಎಸ್ ಎನ್ ಹಿರೇಮಠ, ಗ್ರಾಮ ಲೇಕ್ಕಾಧಿಕಾರಿ ದೇಸಾಯಿ ಸೇರಿದಂತೆ ಅನೇಕರು ಇದ್ದರು.

 


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *