ಕಾರ್ಮಿಕರಿಗಾಗಿ ನಾವು ನಮ್ಮ ಕರ್ತವ್ಯವನ್ನು ಮಾಡಬೇಕಾಗಿದೆ : ಕುಳಲಿ
ಗೋಕಾಕದಲ್ಲಿರುವ ಕೂಲಿ ಕಾರ್ಮಿಕರ ಹಮಾಲ ಸಂಘಕ್ಕೆ ಬೆಳಗಾವಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಬೇಟಿ ನೀಡಿ ಹಮಾಲರ ಕುಂದು ಕೊರತೆ ವಿಚಾರಿಸಿದರು,
ಅದರ ಜೊತೆಯಲ್ಲಿ ತಾವು ಕೂಡ ಮನುಷ್ಯರೆ ಅದಕ್ಕಾಗಿ ಯಾವುದೆ ಕೆಲಸ ಮಾಡಬೇಕಾದರೆ ನಿಷ್ಕಾಳಜಿ ವಹಿಸದೆ ಜವಾಬ್ದಾರಿಯಿಂದ ಮಾಡಲು ತಿಳಿಸಿದರು, ಅದಲ್ಲದೆ ನಿಗದಿತ ಸಮಯಕ್ಕೆ ಕಚೇರಿಯಿಂದ ಮಾಡಿಸಿಕೊಂಡ ಕಾರ್ಮಿಕರ ಕಾರ್ಡುಗಳನ್ನು ಮರುನೊಂದಣಿ ಮಾಡಲು ಕಾರ್ಮಿಕರಿಗೆ ತಿಳಿಸಿದರು,
ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಮಿಕ ನೀರಿಕ್ಷಕರಾದ ಪಾಂಡುರಂಗ ಮಾವರಕರ, ಹಮಾಲ ಅದ್ಯಕ್ಷ ಬಸವರಾಜ ಆರೆನ್ನವರ, ಸಿಬ್ಬಂದಿಗಳು ಹಾಗೂ ಯಲ್ಲಪ್ಪ ಮೇತ್ರಿ, ಶೆಟ್ಟಪ್ಪಾ ಮಸ್ತ್ರಿ, ಶ್ರೀಕಾಂತ ದೊಡಮನಿ, ರಾಜು ಬಿಜಗಾರ,ದಸ್ತಗಿರಿ ಮುಲ್ಲಾ, ಶೇಖರ ಪಾಟೀಲ,ಪ್ರಕಾಶ ಕಳ್ಳಿಮನಿ ಹಾಗೂ ಇನ್ನಿತರ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
Fast9 Latest Kannada News