Breaking News

ಚಾಲಕರು ಕಾರ್ಮೀಕ ಇಲಾಖೆ ಸೌಲಬ್ಯ ಪಡೆದುಕೊಳ್ಳಬೇಕು : ಸುರೇಶ ಸನದಿ

Spread the love

ಚಾಲಕರು ಕಾರ್ಮೀಕ ಇಲಾಖೆ ಸೌಲಬ್ಯ ಪಡೆದುಕೊಳ್ಳಬೇಕು : ಸುರೇಶ ಸನದಿ

ಮನೋಹರ ಮೇಗೇರಿ :ವರದಿ ಗೋಕಾಕ: ಕೊರೋನಾ ಮಹಾಮಾರಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಖಾಸಗಿ ಚಾಲಕರಿಗೆ ರಾಜ್ಯ ಸರಕಾರ ೩ಸಾವಿರ ರೂಪಾಯಿ ಸಹಾಯ ಧನದ ಜೊತೆಗೆ ಶಾಸಕ ರಮೇಶ ಜಾರಕಿಹೊಳಿ ಅವರ ಸಹಕಾರದಿಂದ ಆಹಾರಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕರ ಸಹಾಯಕ ಸುರೇಶ ಸನದಿ ಹೇಳಿದರು.
ಅವರು, ಶುಕ್ರವಾರದಂದು ನಗರದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಮಿನಿ ಗೂಡ್ಸ್ ಚಾಲಕರಿಗೆ ಹಾಗೂ ಟ್ಯಾಕ್ಸಿ ಚಾಲಕರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಈಗಾಗಲೇ ಸರಕಾರದಿಂದ ನೊಂದಾಯಿತ ಹಾಗೂ ನೊಂದಣಿ ಇಲ್ಲದ ಎಲ್ಲ ಚಾಲಕರಿಗೂ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಸರಕಾರದ ಸೌಲಭ್ಯ ಪಡೆಯಲು ಎಲ್ಲ ಚಾಲಕರು ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡು ಸರಕಾರ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಪಾಂಡುರ0ಗ ಮಾವರಕರ, ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಸದಸ್ಯ ಯೂಸುಫ್ ಅಂಕಲಗಿ, ಅಬ್ದುಲಸತ್ತಾರ ಶಭಾಶಖಾನ, ಟ್ಯಾಕ್ಸಿ ವಾಹನ ಚಾಲಕರ ಸಂಘದ ಅಧ್ಯಕ್ಷ ರಾಮು ಹೂಗಾರ, ಉಪಾಧ್ಯಕ್ಷ ಸಂಜು ಮಾನಗಾಂವಿ, ಉದಯ ಘೋರ್ಪಡೆ, ಮಿನಿಗೂಡ್ಸ ಚಾಲಕರ ಸಂಘದ ಅಧ್ಯಕ್ಷ ಸಂತೋಷ, ಮುಖಂಡರಾದ ಮಡಿವಾಳಪ್ಪ ಕುಂಬಾರ, ಶ್ರೀಶೈಲ ಕುಂಬಾರ, ಮಲ್ಲಪ್ಪ ಅಂಬಿ, ಅಶೋಕ ಬಂಡಿ, ನಾಗರಾಜ ತಹಶೀಲ್ದಾರ, ವಜ್ರಕಾಂತ ಜೋತಾವರ, ಇಬ್ರಾಹಿಂ ಭೋಜಗಾರ, ದೀಲಾವರ, ಪ್ರವೀಣ ಜಮಖಂಡಿ ಸೇರಿದಂತೆ ಇತರರು ಇದ್ದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *