25 ವರ್ಷದ ಹಳೆಯ ಬಸ್ ನಿಲ್ದಾಣ ಸ್ಚಚ್ಚ ಮಾಡಿದ ಸತೀಶ ಜಾರಕಿಹೋಳಿ ಪೌಂಡೇಷನ್ ಸದಸ್ಯರು.
ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿನ ಇಪ್ಪತ್ತು ವರ್ಷಕ್ಕೂ ಹಳೆಯದಾದ ಬಸ್ ನಿಲ್ದಾಣದ ಕುಡುಕರ ತಾಣವಾಗಿತ್ತು, ಕುಡುಕರ ಹಾವಳಿಯಿಂದ ಬಸ್ ಮೂಲಕ ತೆರಳುವವರು ಅವರ ಗಬ್ಬು ವಾಸನೆಯಿಂದ ಬೆಸತ್ತು ಯಾರು ಕೂಡ ಬಸ್ ನಿಲ್ದಾಣದಲ್ಲಿ ತಂಗುತ್ತಿರಲಿಲ್ಲ, ಅದರಿಂದ ಅದು ಹಾಳು ಬಿದ್ದಿತ್ತು.
ಆದರೆ ಅದೆ ಹಾಳು ಬಿದ್ದಿರುವ ಬಸ್ ನಿಲ್ದಾಣವನ್ಬ ಇವತ್ತು kpcc ಕಾರ್ಯಾದಕ್ಷ ಶಾಸಕ ಸತೀಶ ಜಾರಕಿಹೋಳಿ ಪೌಂಡೆಷನಿನ ಸುಮಾರು ಹದಿನೈದು ಸದಸ್ಯರು ಸತೀಶ ಜಾರಕಿಹೋಳಿಯವರ ಮಾರ್ಗದರ್ಶನದಂತೆ ಬಸ್ ನಿಲ್ದಾಣದಲ್ಲಿದ್ದ ಎಲ್ಲ ಕಸವನ್ನು ತೆಗೆದು ಹಾಕಿ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ.
ಸ್ವಚ್ಚತಾ ಕಾರ್ಯ ಮಾಡುವಂತಹ ಸಮಾಜ ಸೇವೆ ಕೆಲಸ ಮಾಡುವುದರಲ್ಲಿ ಗೋಕಾಕದ ಸತೀಶ ಪೌಂಡೇಷನ್ ಸದಸ್ಯರು ಎತ್ತಿದ ಕೈ, ಗೋಕಾಕ ತಾಲೂಕಿನ್ಯಾದಂತ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಯಾವುದೆ ಕೆಲಸವಿರಲಿ ಆ ಸ್ಥಳಕ್ಕೆ ತೆರಳಿ ಮೊದಲು ಅಲ್ಲಿನ ಸ್ವಚ್ಚತಾ ಕಾರ್ಯ ಮಾಡಿಯೆ ಮುಂದಿನ ಕೆಲಸ, ಅದರಂತೆ ಇವತ್ತು ಕೊಣ್ಣೂರಿನ ಕುಡುಕರ ತಾಣವಾಗಿದ್ದ ಬಸ್ ನಿಲ್ದಾಣ ಇವತ್ತು ಸಾರ್ವಜನಿಕರಿಗೆ ತಂಗುವುದಕ್ಕೆ ಅನೂಕೂಲವಾಗಿದೆ, ಇವರ ಕಾರ್ಯಕ್ಕೆ ಕೊಣ್ಣೂರಿನ ಜನ ಸತೀಶ ಜಾರಕಿಹೋಳಿ ಪೌಂಡೇಷನ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.