Breaking News

ಬಹುಕೋಟಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆಳೆದ ಜಯಂತ ತಿನೈಕರ್‌ ಮೇಲೆ ಮಾರಣಾಂತಿಕ ಹಲ್ಲೆ.

Spread the love

ಬಹುಕೋಟಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆಳೆದ ಜಯಂತ ತಿನೈಕರ್‌ ಮೇಲೆ ಮಾರಣಾಂತಿಕ ಹಲ್ಲೆ.

ಆರ್.ಟಿ.ಐ ಕಾರ್ಯಕರ್ತರೂ ಆಗಿರುವ ಜಯಂತ ತಿಣೈಕರ್ ಅವರ ಮೇಲೆ ಅಪರಿಚಿತ ಯುವಕರ ತಂಡವೊಂದು ಹಲ್ಲಗೈದು ಗಾಯಗೊಳಿಸಿದ ಘಟನೆ  ಬೆಳಗಾವಿ- ಖಾನಾಪುರ ಹೆದ್ದಾರಿಯ ಝಾಡ ಶಹಾಪುರ ಗ್ರಾಮದ ಬಳಿ ಸಂಭವಿಸಿದೆ . |ತಾವು ಶುಕ್ರವಾರ ಸಂಜೆ ಕಾರಿನಲ್ಲಿ ಬೆಳಗಾವಿಯಿಂದ ಖಾನಾಪುರದತ್ತ ಕಾರನ್ನು ಪ್ರಯಾಣಿಸುವಾಗ ತಮ್ಮ ಬೈಕುಗಳಲ್ಲಿ ಬೆನ್ನಟ್ಟಿದ ಐದಾರು ಯುವಕರ ತಂಡ ಝಾಡ ಶಹಾಪುರ ಬಳಿ ಕಾರು ನಿಲ್ಲಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ .

ಹಲ್ಲೆಯಿಂದ ತಮ್ಮ ಕೈ – ಕಾಲುಗಳಿಗೆ  ಹಲ್ಲೆಯಿಂದ ತಮ್ಮ ಕೈ – ಕಾಲುಗಳಿಗೆ ತೀವ್ರವಾದ ಗಾಯಗಳಾಗಿದ್ದು ಹಾಗೂ ತೀವ್ರ ರಕ್ತಸ್ರಾವವಾಗಿದೆ ಎಂದು ತಿಣೈಕರ್ ಬೆಳಗಾವಿ ಗ್ರಾಮೀಣ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ .

ತಿಣೈಕರ್ ಅವರು ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೇಲಗಿ ಪ್ರಕರಣವನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿದ್ದರು . ಜೊತೆಗೆ ಕಳೆದ ಕೆಲ ವರ್ಷಗಳಿಂದ ಅನ್ಯಾಯದ ವಿರುದ್ಧದ ವಿವಿಧ ಹೋರಾಟಗಳಲ್ಲಿ ಭಾಗವಹಿಸಿದ್ದರು ಅಲ್ಲದೇ ಈಗ ತಾಲೂಕಿನ ಕೆಲವು ಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಯೋಜನೆಯನ್ನು ಹೊಂದಿದ್ದು ಎಲ್ಲಿ ಭ್ರಷ್ಟಾಚಾರ ಆಚೆ ಬಂದರೆ ಎಲ್ಲಿ ತಮ್ಮ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬರತ್ತೆ ಅನ್ನೋ ಭಯದಿಂದ ಆ ಭ್ರಷ್ಟ ಅಧಿಕಾರಿಗಳು ಈ ದುಶ್ಕ್ರುತ್ಯ ಎಸಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದರು

ತಿನೈಕರ ಅವರು ಸಧ್ಯ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಾಲಿನ ಶಸ್ತ್ರ ಚಿಕೆತ್ಸೆಗೆ ಒಳಗಾಗಿದ್ದಾರೆ


Spread the love

About Fast9 News

Check Also

ಅನೈತಿಕ ಸಂಬಂಧ,ಮನೆಗೆ ಕರೆಯಿಸಿ ಕೊಲೆ,, ಪತ್ನಿ ಆಸ್ಪತ್ರೆಯಲ್ಲಿ,,,

Spread the loveಅನೈತಿಕ ಸಂಬಂಧ,ಮನೆಗೆ ಕರೆಯಿಸಿ ಕೊಲೆ,, ಪತ್ನಿ ಆಸ್ಪತ್ರೆಯಲ್ಲಿ,,, ಒಂದು ವಿಷಯ ಮಾತಾಡೊದಿದೆ ಎಂದು ಮನೆಗೆ ಕರೆಯಸಿ ಮಾರಕಾಸ್ತ್ರಗಳಿಂದ …

Leave a Reply

Your email address will not be published. Required fields are marked *