Breaking News

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆಯ ಪೂರ್ವಭಾವಿ ಸಭೆ

Spread the love

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆಯ ಪೂರ್ವಭಾವಿ ಸಭೆ

ಗೋಕಾಕ : ಸಮೂಹ ಸಂಪನ್ಮೂಲ ಕೇಂದ್ರ ದೂಪದಾಳದಲ್ಲಿ ಗೋಕಾಕ್ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಸನ್ಮಾನ್ಯ ರಮೇಶಣ್ಣಾ ಜಾರಕಿಹೊಳಿಯವರ ನೇತ್ರತ್ವದಲ್ಲಿ ದೂಪದಾಳ ಹಾಗೂ ಘಟಪ್ರಭಾ ಪ್ರದೇಶದ ಎಲ್ಲಾ ಶಾಲೆಗಳ ಎಚ್ಡಿಎಂಸಿ ಅಧ್ಯಕ್ಷರು, ಸದಸ್ಯರುಗಳ ಹಾಗೂ ಮಕ್ಕಳ ಪಾಲಕರ ಸಭೆಯನ್ನು ಏರ್ಪಡಿಸಿ ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆಯ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು. ಸದರಿ ಸಭೆಗೆ ಎಲ್ಲಾ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಎಸ್ಡಿಎಂಸಿ ದೂಪದಾಳ ಶಾಲೆಯ ಅಧ್ಯಕ್ಷ ಮದಾರಸಾಬ ಜಗದಾಳ ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ಸಮೂಹ ಸಂಪನ್ಮೂಲ ಅಧಿಕಾರಿಗಳಾದ ರಮೇಶ್ ಕೋಲಕಾರ ವಹಿಸಿ ಆಯುಷ್ಮಾನ್ ಕಾರ್ಡ್ ಉಪಯೋಗಗಳನ್ನು ಸವಿಸ್ತಾರವಾಗಿ ಹೇಳಿದರು. ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡಿಸಲು ಬೇಕಾಗಿರುವ ವೆಚ್ಚವನ್ನು ಸಂಪೂರ್ಣವಾಗಿ ಶಾಸಕರಾಗಿರುವ ರಮೇಶ ಜಾರಕಿಹೊಳಿಯವರೇ ಭರಿಸಲಿದ್ದಾರೆ ಎಂದು ಈ ಸಮಯದಲ್ಲಿ ತಿಳಿಸಿದರು. ಅದಲ್ಲದೆ ಯೋಜನೆಯನ್ನು ನಮ್ಮ ಶಾಲಾ ಮಕ್ಕಳ ಮೂಲಕ ಜಾಗೃತಿ ಮೂಡಿಸಿ ಯೋಜನೆಯನ್ನು ಸಂಪೂರ್ಣವಾಗಿ ಯಶಸ್ವಿಯಾಗುವಂತೆ ಸಹಕಾರ ಕೊಡುತ್ತೇವೆ ಎಂದು ಹೇಳಿದರು. ಅದೇ ರೀತಿ ಗ್ರಾಮಲೆಕ್ಕಾಧಿಕಾರಿಗಳ ಆದ ಎಂ ಎಸ್ ಗಡಕರಿಯವರು ಉಚಿತ ಆರೋಗ್ಯ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವ ಹಾಗೂ ಅದರ ಉಪಯೋಗವನ್ನು ಎಲ್ಲರೂ ತೆಗೆದುಕೊಳ್ಳುವಂತೆ ಸೂಚಿಸಿದರು. ದುಪದಾಳ ಹಾಗೂ ಘಟಪ್ರಭಾ ಭಾಗದ ಎಲ್ಲಾ ಜನರು ಈ ಕಾಡನ್ನು ಬೇಗನೆ ಮಾಡಿಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು.
ಈ ಸಮಯದಲ್ಲಿ ತಾಲೂಕು ಪಂಚಾಯತಿ ಸದಸ್ಯರಾದ ಲಗಮಣ್ಣ ನಾಗಣ್ಣವರ, ಹನುಮಂತ ಗಾಡಿ ವಡ್ಡರ್, ಶೆಟ್ಟೆಪ್ಪ ಗಾಡಿವಡ್ಡರ, ರಾಜಶೇಖರ್ ರಜಪೂತ್. ಮಹೇಶ್ ಪಾಟೀಲ್, ಶಿಡ್ಲೆಪ್ಪ ತಳಗೇರಿ, .ರಾಮಪ್ಪ ದೇಮನ್ನವರ, ಕೇಶವ್ ಮೇಗೇರಿ, ಬರ್ತೇಶ್ ಪರಪ್ಪನವರ್, ಶ್ರೀಮಂತ ಬೆಳವಿ, ಬಾಳಪ್ಪ ತಳಗೇರಿ, ಬಾಹುಬಲಿ ಕಡಟ್ಟಿ, ನಾಗರಾಜ್ ಮುತ್ಯಪ್ಪಗೋಳ, ಆದಪ್ಪ ಮಗದುಮ್, ದೇವರುಶಿ, ಶಿವಾಜಿ ತಳಗೇರಿ, ಭೀಮಶಿ ಚೂನಪ್ಪಗೋಳ ಹಾಗೂ ರಾಜು ದೊಡ್ಡಮನಿ ಉಪಸ್ಥಿತರಿದ್ದರು.
ಶ್ರೀಮತಿ ಎ.ಬಿ.ಪ್ರಸಾದ್ ಶಿಕ್ಷಕಿ ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.


Spread the love

About Fast9 News

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *