Breaking News

ಮಳೆಯ ಅಬ್ಬರಕ್ಕೆ ವ್ಯಕ್ತಿ ಸಾವು ,ಹಲವಾರು ಬೈಕಗಳು ಜಖಮ್

Spread the love

ಮಳೆಯ ಅಬ್ಬರಕ್ಕೆ ವ್ಯಕ್ತಿ ಸಾವು ,ಹಲವಾರು ಬೈಕಗಳು ಜಖಮ್

ಬೆಳಗಾವಿ ನಗರದಲ್ಲಿ ಬಾರಿ ಗುಡುಗು- ಬಿರುಗಾಳಿ ಸಹಿತ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ನಗರವೇ ತತ್ತರಿಸಿತು. ಮರ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿದ್ದು, ಜಿಲ್ಲಾಸ್ಪತ್ರೆ ಎದುರು ಮರ ಬಿದ್ದು 40ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಬೆಳಗಾವಿ ನಗರದಲ್ಲಿ ಮಂಗಳವಾರ ಸಂಜೆ ಹೊತ್ತಿಗೆ ಸುರಿದ ಧಾರಾಕಾರ ಗಾಳಿ-ಮಳೆಯಿಂದ ನಗರ ತಲ್ಲಣಗೊಂಡಿತು. ಜೋರಾದ ಬಿಸಿದ ಗಾಳಿ ಮಳೆಗೆ ಅನೇಕ ಗಿಡಗಳು ಬಿದ್ದಿವೆ. ಇಲ್ಲಿಯ ಕ್ಲಬ್ ರಸ್ತೆಯ ಕಾಳಿ ಅಂಬ್ರಾಯಿ ಬಳಿ ಗಿಡ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ದ್ವಿಚಕ್ರ ವಾಹನದ ಮೇಲೆ ಹೊರಟಿದ್ದ ವಿಜಯ ಕೊಲ್ಹಾಪುರೆ(64) ಎಂಬವರ ಮೇಲೆ ಮರ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ನಗರದ ಅನೇಕ ಕಡೆಗಳು ಗಿಡ-ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲಾಸ್ಪತ್ರೆ ರಸ್ತೆಯ ನಾಗಶಾಂತಿ ಶೋರೂಂ ಬಳಿ ದ್ವಿಚಕ್ರ ವಾಹನಗಳು ನಿಲ್ಲಿಸಲಾಗಿತ್ತು. ಪಕ್ಕದಲ್ಲಿಯೇ ದೊಡ್ಡ ಮರ ಬಿದ್ದು ಸುಮಾರು 40ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿದೆ. ಸಾಲಾಗಿ ವಾಹನಗಳನ್ನು ನಿಲ್ಲಿಸಲಾಗಿತ್ತು. ದೊಡ್ಡದಾದ ಮರ ಬಿದ್ದಿದೆ. ಬಹುತೇಕ ಎಲ್ಲ ವಾಹನಗಳು ನುಜ್ಜಾಗಿವೆ.


Spread the love

About Fast9 News

Check Also

ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಜಿಲ್ಲೆಯ …

Leave a Reply

Your email address will not be published. Required fields are marked *