ಟ್ಯೂಷನಗೂ ಹೋಗದೆ ಮನೆಯಲ್ಲಿಯೆ ಅಬ್ಯಾಸ ಮಾಡಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಸಂಪ್ರಿತಾ
ಬಾಗಲಕೋಟ ಜಿಲ್ಲೆಯ ಮುದೋಳ ನಗರದ ವಿದ್ಯಾರ್ಥಿನಿಯೊಬ್ಬಳು ಟ್ಯೂಶನ್‌ಗೂ ಹೋಗದೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ
624 ಅಂಕ ಗಳಿಸಿ ಕನ್ನಡ ಮಾಧ್ಯಮದಲ್ಲಿ ಉತ್ತಮ
ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ.ನಗರದ ಕೆ.ಆರ್.ಲಕ್ಕಂ ಕನ್ನಡ ಮಾಧ್ಯಮ ಶಾಲೆಯ
ವಿದ್ಯಾರ್ಥಿನಿ ಸಂಪ್ರಿತಾ ಬಿ.ಬಿಸನಕೊಪ್ಪ ಸಾಧಕ ವಿದ್ಯಾರ್ಥಿನಿ .
ನ್ಯಾಯವಾದಿ ಬಿ.ಜಿ.ಬಿಸನಕೊಪ್ಪ ಅವರ ಸುಪುತ್ರಿ ಸಂಪ್ರಿತಾ ಪ್ರತಿಭಾವಂತ ವಿದ್ಯಾರ್ಥಿನಿ. ಎಲ್.ಕೆಜಿಯಿಂದ ಎಸ್ಸೆಸ್ಸೆಲ್ಸಿವರಿಗೂ ಒಂದೆ ಶಾಲೆಯಲ್ಲಿ ಓದುತ್ತಿದ್ದಳು
ಮುಂದೆ ಮೆಡಿಕಲ್ ಓದಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಆಶಾಭಾವ ವ್ಯಕ್ತಪಡಿಸಿದ್ದಾಳೆ.
ಸಂಪ್ರಿತಾ ಪಡೆದು ಕೊಂಡ ಅಂಕಗಳು
ಕನ್ನಡ -125, ಇಂಗ್ಲಿಷ್ -100, ಹಿಂದಿ-100, ಸಮಾಜವಿಜ್ಞಾನ -100, ವಿಜ್ಞಾನ -100 ಹಾಗೂ ಗಣಿತ – 99. ಅಂಕ ಪಡೆದು ಕೊಂಡು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.ಇವಳ ಈ ಸಾದನಗೆ ಶಾಲಾ ಮಂಡಳಿಯವರು ಶುಭ ಹಾರೈಸಿದ್ದಾರೆ,
Fast9 Latest Kannada News