Breaking News

ಜಗ್ಗತ್ತಿಗೆ ನಿಜಬೆಳಕು ತೋರಿದ ಮಹಾಜ್ಞಾನಿ ಬುದ್ಧ : ಭಿರಡಿ ಗ್ರಾಮದಲ್ಲಿ ಬುದ್ಧ ಜಯಂತಿ ಆಚರಣೆ

Spread the love

ಜಗ್ಗತ್ತಿಗೆ ನಿಜಬೆಳಕು ತೋರಿದ ಮಹಾಜ್ಞಾನಿ ಬುದ್ಧ :
ಭಿರಡಿ ಗ್ರಾಮದಲ್ಲಿ ಬುದ್ಧ ಜಯಂತಿ ಆಚರಣೆ

ಚಿಂಚಲಿ: ನಮ್ಮ ಜೀವನದಲ್ಲಿ ಗೌತಮ ಬುದ್ಧ ಭೋದಿಸಿದ ಪಂಚಶೀಲಗಳ ಪಾಲನೆಯಿಂದ ಕರುಣೆ ಮತ್ತು ನೆಮ್ಮಂದಿ ಪಡೆಯಲು ಸಾಧ್ಯವಿದೆ ಎಂದು ಜಲಾಲಪೂರದ ಬೋಧಿಪ್ರಿಯ ಅಜೀತ ಕಾಂಬಳೆ ಕರೆ ನೀಡಿದರು.

ಅವರು ಸಮೀಪದ ಭಿರಡಿ ಗ್ರಾಮದಲ್ಲಿ ಬುದ್ಧ ಜಯಂತಿ ಅಂಗವಾಗಿ ಬುದ್ಧ, ಬಸವ, ಅಂಬೇಡಕರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಭಗವಾನ್ ಬುದ್ಧನಿಗೆ ಪ್ರಾರ್ಥನೆ ಸಲ್ಲಿಸಿ ನಂತರ ಬುದ್ಧ ಬಸವ ಅಂಬೇಡಕರ ಸಂಘಟನೆಯ ಸಂಯೋಗದಲ್ಲಿ ಆಯೋಜಿಸಿದ ಮೂಡ ನಂಬಿಕೆ ಮತ್ತು ಜಾತಿವಾಂದ ಸಂಘಟನೆ ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ ಗೌತಮ ಬುದ್ಧ, ವೈಶಾಖ ಮಾಸದ ಹುಣ್ಣಿಮೆ ದಿನವೇ ಬುದ್ಧ ಜಯಂತಿ ಸಿದ್ದಾರ್ಥ ಬುದ್ಧನಾಗಿದ್ದು ಇದೇ ದಿನ. ಸಿದ್ದಾರ್ಥ ಹುಟ್ಟಿದ್ದೂ ಇದೇ ದಿನ. ವೇದಕಾಲದ ಚಲನಶೀಲವಾದ ವರ್ಣವ್ಯವಸ್ಥೆ ಕಾಲಾನಂತರದಲ್ಲಿ ಜಡಗಟ್ಟಿತು. ಅದು ಕ್ರಮೇಣ ಸಂಘರ್ಷಕ್ಕೆ ನಾಂದಿಯಾಯಿತು. ಸ್ಪರ್ಶ- ಅಸ್ಪರ್ಶ ಭಾವನೆಗಳು ಬಲವಾಗಿ ಬೇರೂರಿದ್ದವು. ಇಂತಹ ಸಮಯ ದಲ್ಲಿ 2500 ವರ್ಷಗಳ ಹಿಂದೆ ಮನುಕುಲದ ಉದ್ಧಾರಕ್ಕಾಗಿ ಶ್ರಮ ಪಟವರು ಗೌತಮ ಬುದ್ಧ.
ಗೌತಮ ಬುದ್ದರು ಬೋಧಿಸಿದ ಪಂಚ ಶೀಲ ಶತೃಗಳಾದ ಪ್ರಾಣಿ ಹತ್ಯೆ ಮಾಡದಿರುವುದು, ಸಳ, ಕೇಳದಿರುವುದು, ಮೋಸ, ವ್ಯಭಿಚಾರ, ಮದ್ಯಪಾನ ಮಾಡದಿರುವುದು ಇವು ಜೀವನವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುತ್ತವೆ. ನಮ್ಮ ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿದ್ದರು. ಗೌತಮ ಬುದ್ಧನು ದೇವರಲ್ಲ, ದೇವದೂತನೂ ಅಲ್ಲ. ದೈವಸಂಭೂತನು ಅಲ್ಲ. ಆದರೆ ತನ್ನ ಸ್ವಸಾಮರ್ಥ್ಯದಿಂದ ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು ಎಂದು ಬಣ್ಣಿಸಿದರು.

ಬುದ್ದನ ದುಖ ಲೌಕಿಕ ದುಃಖವೇ ಹೊರತು ಜನ್ಮಾಂತರ ಗಳದ್ದಲ್ಲ. ಅದು ಮನಸ್ಸಿಗೆ ಅಂಟಿಕೊಳ್ಳುವ ವಿಚಾರಗಳೇ ಹೊರತು ಬೇರೇನೂ ಅಲ್ಲ. ಹುಟ್ಟು ಕೂಡ ಒಂದು ದುಃಖ ಎನ್ನುವ ಕಲ್ಪನೆ, ಬೌದ್ಧ ಧರ್ಮದ ನಂತರ ಸೇರಿರಬೇಕು ಎಂದು ಬಾಬಾಸಾಹೇಬ ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಅಂತಿಮವಾಗಿ ಬುದ್ಧನ ಸಂದೇಶವಾದ, ಜಗತ್ತಿನಲ್ಲಿ ದುಃಖವಿದೆ. ಇದು ಮನುಷ್ಯರು ಮನುಷ್ಯರಿಗೆ ಮಾಡುವ ಅನ್ಯಾಯದ ಫಲ. ಆದರೆ ಅದಕ್ಕೆ ಪರಿಹಾರ ಮನುಷ್ಯನಲ್ಲೇ ಇದೆ. ಹಾಗಾಗಿ ಇತರರ ಜತೆ ಋಜುತನದಿಂದ ನಡೆದುಕೊಳ್ಳಬೇಕು. ಆ ಮೂಲಕ ಭೂಮಿಯನ್ನು ಋಜುತನದ ಸಾಮ್ರಾಜ್ಯವನ್ನಾಗಿ ಮಾಡಬೇಕು ಎಂಬುದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಆ ಮಹಾ ಬುದ್ದನಿಗೆ ನಿಜವಾದ ಕಾಣಿಕೆ ಸಲ್ಲಿಸಿದಂತಾಗುತ್ತದೆ. ಅಜೀತ ಕಾಂಬಳೆ ಬುದ್ಧನ ತತ್ವ ಸಿದ್ಧಾತಗಳ ಬಗ್ಗೆ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸಿದ್ದು ಗಸ್ತಿ ಮಾಜಿ ಸದಸ್ಯರಾದ ಮಹಾದೇವ ಇಟ್ಟಿಕರಿ, ಚಂದ್ರು ಗಸ್ತಿ, ದಲಿತ ಸಂಘಟನೆ ಮುಂಖಡರಾದ ಮಾರುತಿ ದುರ್ಗನ್ನವರ, ರಮೇಶ ಕಾಂಬಳೆ, ಸುರೇಶ ದೇವರಋಷಿ, ಚಂದ್ರಕಾಂತ ಕಾಂಬಳೆ, ಜಲಾಲಪೂರದ ಕಿರಣ ಕಾಂಬಳೆ, ಸಹಾದೇವ ಕಾಂಬಳೆ,ಶಂಕರ ದೇವಋಷಿ, ಎಸ್. ಡಿ. ಕಾಂಬಳೆ, ಕುಮಾರ ಬಾನೆ, ಅಜೀತ ಕಾಂಬಳೆ ಕುಮಾರ ಕಾಂಬಳೆ, ಕುಮಾರ ದೇವಋಷಿ, ಹಾಗೂ ಸಮಾಜ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಲಕ್ಷ್ಮಣ ಕಾಂಬಳೆ ಸ್ವಾಗತಿಸಿದರು, ಸಾಗರ ಕಾಂಬಳೆ ವಂದಿಸಿದರು.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *