ಶೆಟ್ಟೆವ್ವಾ ತಾಯಿ ಜಾತ್ರೆಯಲ್ಲಿ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು.
ಗೋಕಾಕದ ಹೊರವಲಯದ ಲೋಳಸೂರ ತೊಟದ ಹತ್ತಿರ ಇರುವ ಶೆಟ್ಟೆವ್ವಾ ತಾಯಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಮೂರ್ತಿ ಪ್ರತಿಷ್ಟಾಪನೆ ನೇರವೆರಿತು
150 ವರ್ಷಗಳ ಇತಿಹಾಸವುಳ್ಳ ಈ ದೇವಿಯ ಪೂಜೆಯನ್ನು ಗೋಕಾಕದ ಮೇಸ್ತ್ರಿ ಕುಟುಂಬಸ್ಥರು ಮಾಡುತ್ತಾ ಬಂದಿದ್ದಾರೆ,ಈ ದೇವಿಗೆ ಕೇವಲ ಗೋಕಾಕ ಅಷ್ಟೆ ಅಲ್ಲ ಸುತ್ತಮುತ್ತಲಿನ ಗ್ರಾಮದಲ್ಲಿ ಮಕ್ಕಳು ಹುಟ್ಟಿದರೆ ಈ ದೇವಿಗೆ ಬಂದು ಮುಡಿ ಕೊಟ್ಟು ಅದರಲ್ಲಿಯೂ ವಿಶೇಷ ಎನೆಂದರೆ ಹೆಣ್ಣು ಹುಟ್ಟಿದರೆ ಹೋಳಿಗೆ ಊಟ ಗಂಡು ಮಗು ಹುಟ್ಟಿದರೆ ಬ್ಯಾಟಿ ಊಟ ಮಾಡಿಸೊದು ಇಲ್ಲಿನ ವಾಡಿಕೆ ಇದೆ,
150 ವರ್ಷದಿಂದಲೂ ಈ ದೇವಿಯ ಜಾತ್ರೆ ಮಾಡದೆ ಹಾಗೆಯೆ ಭಕ್ತರು ಬಂದು ತಮ್ಮ ಹರಕೆ ತಿರಿಸಿ ಹೋಗುತಿದ್ದರು. ಪ್ರತಿ ವರ್ಷವೂ ಈ ದೇವಿಯ ಮಹಾತ್ಮೆ ಪ್ರಸಿದ್ದಿ ಪಡೆಯುತ್ತಿರುವದನ್ನು ನೋಡಿದ ಮೇಸ್ತ್ರಿ ಕುಟುಂಬ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದೆ ವರ್ಷ ಪ್ರಪ್ರಥಮ ಬಾರಿಗೆ ಶೆಟ್ಟೆವ್ವಾ ದೇವಿ ಜಾತ್ರೆ ಮಾಡಲು ತಿರ್ಮಾನಿಸಿ ಅದ್ದೂರಿಯಾಗಿ ಜಾತ್ರೆ ನೇರವೆರಸಿದರು,
ಈ ಜಾತ್ರೆಗೆ ಬಂದಂತಹ ಸಾವಿರಾರು ಭಕ್ತರಿಗೆ ಮೇಸ್ತ್ರೀ ಕುಟುಂಬಸ್ಥರು ಮಹಾಪ್ರಸಾದದ ವ್ಯವಸ್ಥೆ ಮಾಡಿದ್ದರು,ಅದಲ್ಲದೆ ಬಕ್ತರೆಲ್ಲರೂ ಒಬ್ಬರಿಗೊಬ್ಬರು ಬಂಡಾರ ಎರಚಿ ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಶೋಕ ಮೇಸ್ತ್ರಿ, ಬಸವರಾಜ ಮೇಸ್ತ್ರಿ, ಬರಮಪ್ಪ ಮೇಸ್ತ್ರಿ,ಶೆಟ್ಟೆಪ್ಪಾ ಮೇಸ್ತ್ರಿ, ಕಾಡಪ್ಪಾ ಮೇಸ್ತ್ರಿ, ವಿನೋದ ಮೇಸ್ತ್ರಿ,ಬಬ್ರುವಾಹನ ಮೇಸ್ತ್ರಿ,ಬಾಳಪ್ಪ ಮೇಸ್ತ್ರಿ,ರವಿ ಕಡಕೋಳ,ಗೋವಿಂದ ಕಳ್ಳಿಮನಿ,ದೀಪಕ ಇಂಗಳಗಿ,ಜಾನಪ್ಪ ಕರೆಮ್ಮನವರ ಹಾಗೂ ಇನ್ನೂಳಿದ ಮುಖಂಡರು ಈ ಜಾತ್ರೆಯಲ್ಲಿ ಉಪಸ್ಥಿತರಿದ್ದರು.