ಪಠ್ಯ ಬೋಧನೆಯ, ಜೊತೆ ಕ್ರೀಡೆಯಲ್ಲಿ ಭಾಗವಹಿಸಬೇಕು : ಕುಮಾರ ಮಾದರ
ಚಿಂಚಲಿ: ವಿದ್ಯಾರ್ಥಿಗಳು ಪಠ್ಯ ಬೋಧನೆಯ ಜೀವನ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವಂತಿಕೆಯ ಜೀವನ ಸಾಗಿಸಲು ಮುಂದಾಗಬೇಕೆಂದು ಸಮಾಜದಲ್ಲಿನ ತಿರುಳನ್ನು ಅರಿತುಕೊಳ್ಳಲು ನಮ್ಮಗೆ ಶಿಕ್ಷಣ ಎಷ್ಟು ಮುಖ್ಯವಾಗಿದೆಯೋ ಅದರಂತೆ ರೋಗಮುಕ್ತ ಜೀವನ ಸಾಗಿಸಲು ಕ್ರೀಡೆ ಅಷ್ಟೇ ಮುಖ್ಯವಾಗಿದೆ. ವಿದ್ಯಾರ್ಥಿಗಳು ಎರಡನ್ನು ಸರಿಸಮಾನವಾಗಿ ಜೀವನದಲ್ಲಿ ಅನುಕರಣೆ ಮಾಡಿಕೊಳ್ಳಬೇಕೆಂದು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ ತಾಲೂಕಾ ಪಂಚಾಯತ ರಾಯಬಾಗ ಅಧಿಕಾರ ಕುಮಾರ ಮಾದರ ಕರೆ ನೀಡಿದರು.
ಅವರು ಪಟ್ಟಣದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಕ್ರೀಡಾಗಣದಲ್ಲಿ ಆಯೋಜಿಸಿದ “ರಿವರ್ಸೈಡ್ ಟ್ರೋಫಿ 2022″ 14 ವರ್ಷದೊಳಗಿನ ಬಾಲಕರ ಅಂತರ ಶಾಲಾ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಾ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಕ್ರೀಡೆ ಮನುಷ್ಯರನ್ನು ಸದಾ ಯುವಕರನ್ನಾಗಿರಿಸುತ್ತದೆ, ಅವರಲ್ಲಿ ಉಲ್ಲಾಸ, ಉತ್ಸಾಹ, ಮತ್ತು ಲವಲವಿಕೆಯನ್ನು ತುಂಬುತ್ತದೆ, ಕ್ರೀಡಾಭ್ಯಾಸದಿಂದ ಮನಸ್ಸು ಮತ್ತು ದೇಹ ಸದೃಢವಾಗುತ್ತದೆ. ವಿದ್ಯಾರ್ಥಿಗಳು ಕ್ರೀಡೆಗಳಿಗೂ ಒತ್ತು ನೀಡುವ ಮೂಲಕ ಅವಸಾನದ ಅಂಚಿನಲ್ಲಿರುವ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿವೇಕರಾವ ಪಾಟೀಲ ಹಾಗೂ ಆಡಳಿತ ಮಂಡಳಿವರು ಹೆಚ್ಚು ಒತ್ತು ನೀಡುವ ಮೂಲಕ ತಾಲೂಕು ಮತ್ತು ಜಿಲ್ಲೆಯಲ್ಲಿ ಅತ್ತಿ ಹೆಚ್ಚು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿದ್ದಾರೆಂದು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ ತಾಲೂಕಾ ಪಂಚಾಯತ ರಾಯಬಾಗ ಅಧಿಕಾರ ಕುಮಾರ ಮಾದರ ಹೇಳಿದರು.
“ರಿವರ್ಸೈಡ್ ಟ್ರೋಫಿ 2022″ 14 ವರ್ಷದೊಳಗಿನ ಬಾಲಕರ ಅಂತರ ಶಾಲಾ ಫುಟ್ಬಾಲ್ ಪಂದ್ಯಾವಳಿ ಅಧ್ಯಕ್ಷತೆಯನ್ನು ವಹಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ವಿವೇಕರಾವ ಪಾಟೀಲ ಶ್ರೀ ಮಾಯಾಕ್ಕಾ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಪರಿಚಯ ಮಾಡಿಕೊಂಡು ನಂತ ಫುಟ್ಬಾಲ್ ಕೀಕ್ ಮಾಡುವ ಮೂಲಕ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡುತ್ತಾ ವಿದ್ಯಾರ್ಥಿಗಳು ಫುಟ್ಬಾಲ್ ಪಂದ್ಯಾವಳಿಯ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಇಂದು ಫೈನಲ್ ಫುಟ್ಬಾಲ್ ಪಂದ್ಯಾವಳಿ ಬಹುಮಾನ ವಿತರಣಾ ಸಮಾರಂಭಕ್ಕೆ ರಾಯಬಾಗ ಕ್ಷೇತ್ರ ಶಿಕ್ಷಣ ದೈಹಿಕ ಪರಿವೀಕ್ಷರಾದ ಮಹಾವೀರ ಜೀರಗಿಹಾಳ್ಳ ಹಾಗೂ ಜಿಲ್ಲಾ ದೈಹಿಕ ಪರೀವಿಕ್ಷರಾದ ದಿ ಎಸ್ ಡಿಗ್ರಜ್ ಉಪಸ್ಥೀತರಿರುವವರು
ಕಾರ್ಯಕ್ರಮದಲ್ಲಿ ರಾಜು ಬಣಗೆ, ಜಾಕೀರ ತರಡೆ, ವಿಶ್ವನಾಥ ಪಾಟೀಲ, ಮಹಾದೇವ ಪಡೋಳಕರ, ಭೀಮು ಬನಗೆ, ಸುಧೀರ ನಿಂಗನೂರೆ, ಸದಾಶಿವ ದಂಡಾಪೂರೆ, ಆದರ್ಶ ಪೂಜೇರಿ, ಅಮೀತ ಚೌಗಲಾ, ನಿವೃತ್ತ ಉಪಪ್ರಾಚಾರ್ಯರಾದ ಎಸ್ ಎಲ್ ಲಕ್ಷ್ಮೀಶ್ವರ, ನಿವೃತ್ತ ಪ್ರಾಚಾರ್ಯರಾದ ಹೋಸಳಿ ಸರ್, ಡಿ ಎನ್ ಪಾಟೀಲ, ಡಿ. ಡಿ ಕಾಂಬಳೆ, ದೈಹಿಕ ಶಿಕ್ಷಕರಾದ ಬಿಸ್ಟನ್ನವರ, ಹಾಗೂ ಶಿಕ್ಷಕವೃತ್ತದವರು ಉಪಸ್ಥಿತರಿದ್ದರು.