Breaking News

ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕೇಂದ್ರ ಹಾಗೂ ರಾಜ್ಯ ಸರಕಾರ ಶ್ರಮಿಸುತ್ತಿವೆ: ಶಾಸಕ ರಮೇಶ ಜಾರಕಿಹೋಳಿ

Spread the love

ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕೇಂದ್ರ ಹಾಗೂ ರಾಜ್ಯ ಸರಕಾರ ಶ್ರಮಿಸುತ್ತಿವೆ: ಶಾಸಕ ರಮೇಶ ಜಾರಕಿಹೋಳಿ

ಗೋಕಾಕ: ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು
ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಶ್ರಮಿಸುತ್ತಿವೆ ಎಂದು ಶಾಸಕ ರಮೇಶ
ಜಾರಕಿಹೊಳಿ ಹೇಳಿದರು.
ಅವರು, ಸೋಮವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ಮಹಿಳಾ ಮತ್ತು
ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗೋಕಾಕ ಮತಕ್ಷೇತ್ರದ 40 ಸ್ವಸಹಾಯ ಸಂಘಗಳಿಗೆ
1ಲಕ್ಷ ರೂಗಳ ಸಹಾಯಧನದ ಚೇಕ್‌ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡುತ್ತಿದ್ದರು.
ಮಾದರಿಯಾಗಿ
ದೇಶದಲ್ಲಿ ಸ್ತ್ರೀಯರಿಗೆ ಅತ್ಯುತ್ತಮ ಸ್ಥಾನವಿದೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ
ಮುಂಚುಣಿಯಲ್ಲಿ ಕಾರ್ಯನಿರ್ವಹಿಸಯತ್ತಿದ್ದಾರೆ. ಪ್ರಧಾನಿ ನರೇಂದ
ಮೋದಿಯವರು ಮಹಿಳೆಯರ ಆರ್ಥಿಕ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ
ತಂದಿದ್ದಾರೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಉದ್ಯೋಗಿಗಳಾಗಿ ನೆಮ್ಮದಿನ
ಜೀವನ ನಡೆಸುವಂತೆ ಕರೆ ನೀಡಿದರು.
ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಟಿ ಆರ ಕಾಗಲ, ಸುಧೀರ ಜೋಡಟ್ಟಿ
ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸುರೇಶ ಸನದಿ, ಹನಮಂತ ದುರ್ಗನ್ನವರ,
ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಜಿಲ್ಲಾ ಉಪನಿರ್ದೇಶಕ ಬಸವರಾಜ ಎ ಎಮ್,
ಸಿಡಿಪಿಓ ಜಯಶ್ರೀ ಶಿಲವಂತ, ಒಕ್ಕೂಟಗಳ ಅಧ್ಯಕ್ಷೆ ಸುಲೋಚನಾ ಶೇರಖಾನೆ ಸೇರಿದಂತೆ
ನೂರಾರು ಮಹಿಳೆಯರು ಇದ್ದರು.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *