ಭವಿಷ್ಯದ ಹಿತ ಕಾಪಾಡಿಕೊಳ್ಳಬೇಕಾದರೆ ಕಡ್ಡಾಯವಾಗಿ ಮತದಾನ ಮಾಡಿ: ಪೆದನ್ನವರ
ಗೋಕಾಕ : ನೂರಕ್ಕೆ ನೂರರಷ್ಟು ಮತದಾನ ಮಾಡುವ ಉದ್ದೇಶಕ್ಕಾಗಿ ಮತ್ತು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಗೂ ಬೆಳವಣಿಗೆ ಮತ್ತು ಭವಿಷ್ಯದ ಹಿತ ಕಾಪಾಡಿಕೊಳ್ಳಬೇಕಾದರೆ ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ.ಇದು ನಮ್ಮ ದೇಶದ ಮೂಲ ಹಕ್ಕುಗಳಲ್ಲಿ ಒಂದಾಗಿದೆ. ಚುನಾವಣೆಯೂ ಪ್ರಜಾಪ್ರಭುತ್ವದ ಬಹು ದೊಡ್ಡ ಹಬ್ಬವಾಗಿದೆ. ಕಡ್ಡಾಯ ಮತದಾನ ಮತ್ತು ನೈತಿಕ ಮತದಾನಕ್ಕೆ ನಾವೆಲ್ಲರೂ ಒತ್ತು ನೀಡಬೇಕಾಗಿದೆ ಎಂದು ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ಮಲ್ಲಪ್ಪ ಪೆದನ್ನವರ ಇವರು ಚುನಾವಣೆಯ ದ್ವಜಾರೊಹಣ ನೆರವೆರಿಸಿ ಮತದಾರರಲ್ಲಿ ವಿನಂತಿಸಿಕೊಂಡರು.
ಶ್ರೀ ಗುರುಸಿದ್ದೇಶ್ವರ ಮತ್ತು ಸರಕಾರಿ ಕನ್ನಡ ಶಾಲೆ ಮರಡಿಮಠದ ಶಾಲಾ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕಾ ಸ್ವೀಪ್ ಸಮಿತಿ ಹಾಗೂ ಕೊಣ್ಣೂರ ಪುರಸಭೆಯ ನೇತೃತ್ವದಲ್ಲಿ ಎರ್ಪಡಿಸಿದ್ದ ಪೌರಕಾರ್ಮಿಕರ ಕಾಲ್ನಡಿಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದರು.
ಮುಖ್ಯಾಧಿಕಾರಿ ಪೆದನ್ನವರ ಇವರ ನೇತೃತ್ವದಲ್ಲಿ ಪೌರಕಾರ್ಮಿಕರು ಮತದಾನ ನಮ್ಮ ಹಕ್ಕು ,ಕಡ್ಡಾಯ ಮತದಾನ ಮಾಡಿ ಎಂಬ ನಾಮಪಲಕಗಳನ್ನು ಹಿಡಿದು ಕಾಲ್ನಡಿಗೆಯಲ್ಲಿ ಪಟ್ಣದ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ ಮತದಾನದ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿ
ಪಮ್ಮಾರ ಮಾತನಾಡಿ ಮತದಾರರು ಯಾವುದೇ ಆಶೆ ಆಮಿಷಗಳಿಗೆ ಒಳಗಾಗಿ ತಮ್ಮ ಪವಿತ್ರವಾದ ಮತವನ್ನು ಮಾರಿಕೊಳ್ಳಬೇಡಿ.ನಿಮ್ಮ ಒಂದು ಮತದಿಂದ ಈ ರಾಜ್ಯದ ಭವಿಷ್ಯವನ್ನೆ ಬದಲಿಸಬಹುದು.ಅದಕ್ಕಾಗಿ ಮತದಾರರು ಯಾವುದೇ ಭಯ-ಭೀತಿಗಳಿಗೆ ಒಳಗಾಗದೆ ನಿರ್ಭಯವಾಗಿ ಮತ ಚಲಾಯಿಸಿ.ಮತದಾನಕ್ಕೆ ಯಾರಾದರೂ ಒತ್ತಾಯ ಅಥವಾ ಭಯ ಹುಟ್ಟಿಸುತ್ತಿದ್ದರೆ ಕೂಡಲೇ ಅಧಿಕಾರಿಗಳಿಗೆ ಸಂಪರ್ಕಿಸಿ. ನಿಮ್ಮ ಜೊತೆ ಇಲಾಖೆ ಇದೆ ಎಂದು ಮತದಾರರಿಗೆ ಧೈರ್ಯ ತುಂಬಿದರು.
ಹೊಸ ಮತದಾರರಿಗೆ ಮಾಲೆ ಹಾಕಿ ಸ್ವಾಗತಿಸಿ ಮತದಾನದ ಚೀಟಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಿರಿಯ ಅಭಿಯಂತರ ಮುತ್ತಪ್ಪ ತೇಲಿ,ಕಂದಾಯ ಅಧಿಕಾರಿ ರಮೇಶ ಸೊನ್ನದ, ಗ್ರಾಮ ಸಹಾಯಕ ವೆಂಕಟೇಶ ಕೇಳಗೇರಿ. ಕರವಸಿಲಗಾರ ಬಡಲಕ್ಕನವರ ಹಾಗೂ ಅಂಗನವಾಡಿ.ಆಶಾ ಕಾರ್ಯಕರ್ತೆಯರು ಪೌರ ಕಾರ್ಮಿಕರು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು