Breaking News

ಜುಲೈ ೮ ರಂದು ರಾಜ್ಯಾದ್ಯಾಂತ ಮೆಗಾ ಲೋಕ ಅದಾಲತ್ ಹಿನ್ನೆಲೆ ರಾಮದುರ್ಗದಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಸುವರ್ಣಾವಕಾಶ.

Spread the love

ಜುಲೈ ೮ ರಂದು ರಾಜ್ಯಾದ್ಯಾಂತ ಮೆಗಾ ಲೋಕ ಅದಾಲತ್ ಹಿನ್ನೆಲೆ ರಾಮದುರ್ಗದಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಸುವರ್ಣಾವಕಾಶ.

ರಾಮದುರ್ಗ: ಜುಲೈ ೮ ರಂದು ರಾಜ್ಯಾದ್ಯಾಂತ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಕಾರಣ ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸ್ಥಳೀಯ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶರಾದ ಬಿ.ಟಿ ಅನ್ನಪೂಣೇಶ್ವರಿ ಹಾಗೂ ಕಿರಿಯ ದಿವಾಣಿ ನ್ಯಾಯಾಧೀಶರಾದ ಸುಕಿತಾ ಹದ್ಲಿ ತಿಳಿಸಿದರು.
ಪಟ್ಟಣದ ನ್ಯಾಯಾಲದಲ್ಲಿ ಈ ಕುರಿತು ಜಂಟಿಯಾಗಿ ನಡೆಸಿದ ತಾಲೂಕಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನೆಡೆದ ಲೋಕ ಅದಾಲತನಲ್ಲಿ ಸಾಕಷ್ಟು ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಲಾಗಿತ್ತು. ಈಗಲೂ ಸಹ ನಮ್ಮ ಕಾನೂನು ಸೇವಾ ಸಮಿತಿ ಹಾಗೂ ನ್ಯಾಯಾವಾಧಿಗಳ ಸಂಘದ ಮೂಲಕ ತಾಲೂಕಿನ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಾಕಿ ಇದ್ದ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಮೂಲಕ ಅವರಿಗೆ ನೆಮ್ಮದಿಯ ಬದುಕು ಕಲ್ಪಿಸುವ ಸುದುದ್ದೇಶವಾಗಿದೆ ಎಂದು ಹೇಳಿದರು.
ಮಾನ್ಯ ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜು.೮ ರಂದು ರಾಜ್ಯಾದ್ಯಂತ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಅದರಂತೆ ಜು.೮ ರಂದು ರಾಮದುರ್ಗದ ನ್ಯಾಯಾಲಯದ ಆವರಣದಲ್ಲಿ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿಶೇಷವಾಗಿ ಚೆಕ್ ಬೌನ್ಸ, ಬ್ಯಾಂಕ್ ಲೋನ್ ಕೇಸ್, ಮೆಂಟೆನೆನ್ಸ್ ಕೇಸ, ಶಾಲಾ ಮಕ್ಕಳ ಜನನ ಪ್ರಕರಣಗಳು ಸೇರಿದಂತೆ ೧೦ ವರ್ಷಗಳಿಂದ ಬಗೆ ಹರಿಯದೆ ಇದ್ದ ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಒಂದು ಉತ್ತಮ ಅವಕಾಶವಾಗಿದೆ. ಆದ್ದರಿಂದ ಇಂತಹ ವಿವಿಧ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ರಾಮದುರ್ಗ ತಾಲೂಕು ಕಾನೂನು ಸೇವಾ ಸಮಿತಿಗೆ ಆನ್ಲೈನ್, ವಿಡಿಯೋ ಕಾನ್ಪರೇಶನ್ಸ್, ಇ ಮೇಲ್, ಎಸ್.ಎಂ.ಎಸ್, ವಾಟ್ಸಪ್, ಇಲೆಕ್ಟ್ರಾನಿಕ್ ಮೋಡ ಅಥವಾ ಖುದ್ದಾಗಿ ಹಾಜರಾಗುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅನೇಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಒಟ್ಟಾರೆ ಜನ ಕೋರ್ಟಗೆ ಅಲೆದಾಡುವದನ್ನು ತಪ್ಪಿಸಿ ಅವರಿಗೆ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಾನುನೂ ಸೇವಾ ಸಮಿತಿಯವರನ್ನು ಅಥವಾ ಮೊಬೈಲ್ ನಂ:8050644574 ನಂಬರಿಗೆ ಸಂಪರ್ಕಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ವಿ.ಬಿ. ಸಿದ್ದಾಟಗಿಮಠ, ಎಪಿಪಿ ಶಿವಕುಮಾರ ಜಂಬುನ್ನವರ, ನ್ಯಾಯವಾದಿ ಎಸ್.ಎಸ್. ಮಾತನವರ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಸಾರಿಗೆ ಘಟಕ ವ್ಯವಸ್ಥಾಪಕ ಎಚ್.ಆರ್. ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ನಿಜಗುಣದೇವ ಸ್ವಾಮಿಜಿಯವರ ಕಾರ್ಯ ಶ್ಲಾಘನೀಯ: ಸರ್ವೋತ್ತಮ ಜಾರಕಿಹೊಳಿ

Spread the loveಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ನಿಜಗುಣದೇವ ಸ್ವಾಮಿಜಿಯವರ ಕಾರ್ಯ ಶ್ಲಾಘನೀಯ: ಸರ್ವೋತ್ತಮ ಜಾರಕಿಹೊಳಿ ಸಂಗನಕೇರಿ ಗ್ರಾಮದಲ್ಲಿ ಶ್ರೀ …

Leave a Reply

Your email address will not be published. Required fields are marked *