Breaking News

ಸರ್ಕಾರದ ಗ್ಯಾರೆಂಟಿಗಳು ಗೊಂದಲಿಕ್ಕಿಡಾಗಬಾರದು.:ಆನಂದ ಸೋರಗಾಂವಿ

Spread the love

ಸರ್ಕಾರದ ಗ್ಯಾರೆಂಟಿಗಳು ಗೊಂದಲಿಕ್ಕಿಡಾಗಬಾರದು.:ಆನಂದ ಸೋರಗಾಂವಿ

ಗೋಕಾಕ : ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಬೆಳಗಾವಿ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಗೋಕಾಕ ತಾಲೂಕ ಘಟಕದ ಸಂಘಟನೆಗಳು ಜಂಟಿಯಾಗಿ ಸಭೆ ಮಾಡಿ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನರಲ್ಲಿ ಗೋಂದಲವನ್ನುಂಟು ಮಾಡದೆ ತಲುಪಬೇಕು. ಚುಣಾವಣೆ ಪ್ರಚಾರದಲ್ಲಿ ಯಾವುದೇ ರೀತಿ ಕಂಡಿಷನಗಳನ್ನು ಹಾಕದೆ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುತ್ತವೆ, ಎಂದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೊಂದು ಯೋಜನೆಗೆ ಹಲವಾರು ರೀತಿಯ ಕಂಡಿಷನಗಳನ್ನು ಹಾಕುತ್ತಿರುವುದು ಖಂಡನಿಯ ಎಂದು ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ಆನಂದ ಸೋರಗಾಂವಿ ಹೇಳಿದರು.

ಇದೆ ಸಂದರ್ಭದಲ್ಲಿ ನೂತನವಾಗಿ ರಚನೆಯಾದ ಕಾಂಗ್ರೆಸ ಸರ್ಕಾರ ರೈತ ಪರವಾಗಿ ಆಡಳಿತ ನಡೆಸುವುದರ ಜೊತೆಗೆ ಗ್ಯಾರೆಂಟಿಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪೂರ ಹೇಳಿದರು.
ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಮೂಡಲಗಿ ತಾಲೂಕಾಧ್ಯಕ್ಷ ವಿಠ್ಠಲ ಹಲಗಿ, ಗೋಕಾಕ ತಾಲೂಕ ಉಪಾಧ್ಯಕ್ಷ ಬಸವರಾಜ ಬುಳ್ಳಿ, ಮಾಂತೇಶ ಕೋಣಿ, ಲಕ್ಷ್ಮಣ ಗೋಸಬಾಳ, ರೈತ ಸಂಘದ ಕುಮಾರ ತಿಗಡಿ, ಹಾಲಪ್ಪ ವಾಲಿಕಾರ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *