*ಕಚೇರಿಯಲ್ಲಿ ಹಾಜರಾತಿ ಪುಸ್ತಕ ಕಳ್ಳತನ. ಪ್ರಶ್ನಿಸಿದ ಪತ್ರಕರ್ತರ ಮೇಲೆ ಅಧಿಕಾರಿ ದರ್ಪ*
ಗೋಕಾಕ : ತಾಲೂಕಿನ ದುಫಧಾಳ ಕಾಲನಿಯಲ್ಲಿರುವ ಸಹಾಯಕ ಕಾರ್ಯಪಾಲಕ ಅಬಿಯಂತರರ ಕಚೇರಿ, ಘಟಪ್ರಭಾ ಎಡದಂಡೆ ಕಾಲುವೆ, ಉಪ ವಿಭಾಗ 1ರಲ್ಲಿ ಶನಿವಾರದಂದು ಕಚೇರಿಯ ಹಾಜರಾತಿ ಪುಸ್ತಕ ಮತ್ತು ಕಂಪ್ಯೂಟರ್ ಸಿ,ಪಿ,ಓ, ಕಳ್ಳತನ ಆಗಿದ್ದು. ಪ್ರಕರಣವನ್ಮು ತಿರುಚಲು ಸ್ಥಳಿಯ ಅಧಿಕಾರಿಗಳು ಪ್ರಯತ್ನಿಸುತಿದ್ದಾರೆ.ಇಲ್ಲಿನ ಕಚೇರಿಯ ಅಧಿಕಾರಿಯಾದ ಸಹಾಯಕ ಅಬಿಯಂತರ ಮಹಿಮಗೋಳ ಮತ್ತು ಸಿಬ್ಬಂದಿಗಳು ಕಳ್ಳತನವಾದ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.
ಇಲ್ಲಿನ ಹಿರಿಯ ಅಧಿಕಾರಿಗಳು ಮಾತ್ರ ಯಾವುದೆ ಕಳ್ಳತನ ನಡೆದಿಲ್ಲ ಎಂಬ ಉಡಾಪೆ ಉತ್ತರಕ್ಕೆ ಪತ್ರಕರ್ತರು ಹಾಜರಾತಿ ಪುಸ್ತಕ ತೊರಿಸಿರಿ ಎಂದು ಪ್ರಶ್ನಿಸಿದಾಗ ಕಾರ್ಯನಿರ್ವಾಹಕ ಅಬಿಯಂತರ ಎನ್,ಡಿ,ಕೊಲಕಾರ ಇವರು ಪತ್ರಕರ್ತರಿದ್ದರೆ ಎನಾಯಿತು.
ಅರ್ಜಿ ಬರೆದು ಕೇಳಿ ಎಂದು ಪತ್ರಕರ್ತರಿಗೆ ಅವಾಜ ಹಾಕಿ ಎನ್ ಮಾಡುತ್ತೀರಿ ಮಾಡಿ,ಮೊದಲು ವಿಡಿಯೋ ಮಾಡೊದು ಬಂದ್ ಮಾಡು. ನಿಮ್ಮ ಜೊತೆ ಮಾತನಾಡಲಿಕ್ಕೆ ನನಗೆ ಆಸಕ್ತಿ ಇಲ್ಲ ಎಂದು ಒರಟಾಗಿ ವರ್ತಿಸಿ ದರ್ಪ ದೊರಿಸಿದ್ದಾನೆ.
ಕಳ್ಳತನವಾದ ಬಗ್ಗೆ ಗೊತ್ತಿರುವ ಮ್ಯಾನೆಜರ ಬೆಳಗಲಿ ಇತನನ್ನು ಹೇದರಿಸಿ ಮಾದ್ಯಮದವರಿಗೆ ಎನು ಹೇಳದಂತೆ ಅಧಿಕಾರಿಗಳು ತಮ್ಮ ವಾಹನದಲ್ಲಿ ಒತ್ತಾಯ ಪೂರ್ವಕ ಬೇರೆ ಕಡೆ ಕರೆದುಕೊಂಡು ಹೋದರು.ಇನ್ನು ಇಬ್ಬರು ಸಿಬ್ಬಂದಿಗಳು ಹಾಜರಾತಿ ಪುಸ್ತಕ ಇಲ್ಲದಿದ್ದರೆ ಏನಾಯಿತು ಬಿಳಿ ಹಾಳೆಯ ಮೇಲೆ ಸಹಿ ಮಾಡು ಅಂದಾಗ ನಾವೇಕೆ ಸಹಿ ಮಾಡಬೇಕು.ಕಳ್ಳತನವಾದ ಬಗ್ಗೆ ಮೇಲಿನ ಅಧಿಕಾರಿಗಳಿಗಾಗಲಿ ಅಥವಾ ಸ್ಥಳಿಯ ಪೋಲಿಸ್ ಠಾಣೆಗೆ ತಿಳಿಸಬೇಕಾಗಿತ್ತು ಎಂದು ಇಬ್ಬರಲ್ಲಿ ವಾದ ಮಾಡುತಿದ್ದರು.
ಇನ್ನು ಈ ಇಲಾಖೆಯಲ್ಲಿ ಎನೆ ಕಳ್ಳತನವಾದರೂ ಅರ್ಜಿ ಬರೆದುಕೇಳಬೇಕಂತೆ.ಅಧಿಕಾರಿ ದರ್ಪ ತೊರುವದನ್ನು ಬಿಟ್ಟು ಮೊದಲು ಕಳ್ಳತನವಾದ ಸರಕಾರಿ ದಾಖಲಾತಿಯೆ ಕಂಡು ಹಿಡಿಯಬೇಕಾಗಿದೆ.ಇಂತಹ ಬೇಜವಾಬ್ದಾರಿ ಅಧಿಕಾರಿಯ ಮೇಲೆ ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳತಾರೋ ಕಾದು ನೋಡಬೇಕಾಗಿದೆ.
Fast9 Latest Kannada News