Breaking News

ಕಾನೂನು ನಿಯಮ ಪಾಲಿಸುವುದರ ಜೊತೆ ತಮ್ಮ ಭವಿಷ್ಯ ರೂಪಿಸಿಕೊಳ್ಳಿ: ಪಿ,ಎಸ್,ಐ,ಕಿರಣ ಮೊಹಿತೆ.

Spread the love

ಕಾನೂನು ನಿಯಮ ಪಾಲಿಸುವುದರ ಜೊತೆ ತಮ್ಮ ಭವಿಷ್ಯ ರೂಪಿಸಿಕೊಳ್ಳಿ: ಪಿ,ಎಸ್,ಐ,ಕಿರಣ ಮೊಹಿತೆ.

ಗೋಕಾಕ : ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕು ಮತ್ತು ವ್ಯಸನ ಮುಕ್ತ ಜನಾಂಗ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಜಾಗ್ರತರಾಗಿರಬೇಕೆಂದು ಗೋಕಾಕ ತಾಲೂಕಿನ ಕೊಣ್ಣೂರಿನ ಮರಡಿಮಠದ ಶ್ರೀ ಗುರುಸಿದ್ದೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಅಪರಾಧ ತಡೆ ಮಾಸಚಾರಣೆ 2023-24 ಕಾರ್ಯಕ್ರಮದಲ್ಲಿ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿ,ಎಸ್,ಐ, ಕಿರಣ ಮೊಹಿತೆಯವರು ಮಾತನಾಡಿದರು.

ಇವತ್ತಿನ ದಿನಮಾನಗಳಲ್ಲಿ ಗಾಂಜಾ, ಅಫೀಮಿನಂತಹ ಮಾದಕ ದ್ರವ್ಯಗಳು ಭವಿಷ್ಯವನ್ನೇ ನಾಶಪಡಿಸುತ್ತದೆ. ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳೆ ಗುರಿಯಾಗಿದ್ದಾರೆ. ಆನಲೈನ್ ಗೇಮಗಳಿಗೆ ಮೊರೆ ಹೋಗಿ ತಮ್ಮ ಉಜ್ವಲ ಭವಿಷ್ಯ ಹಾಳುಮಾಡಿಕೊಳ್ಳದೆ ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಿ ಇಂತಹ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದು ತಮ್ಮ ಉತ್ತಮ ಭವಿಷ್ಯವನ್ನು ಹಾಳು ಮಾಡಿಕೊಳ್ಳದಿರಿ. ಸಿಕ್ಕಿ ಬಿದ್ದರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಯುವಕರು ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ವಿದ್ಯಾರ್ಥಿಗಳು ಕಲಿಕಾ ಪರವಾನಗಿ, ಇನ್ಷೂ ರೆನ್ಸ್‌ ಮತ್ತು ಹೆಲ್ಮೆಟ್‌ ಇಲ್ಲದೆ ರಸ್ತೆಗೆ ವಾಹನಗಳನ್ನು ಇಳಿಸುವಂತಿಲ್ಲ. ತ್ರಿಬಲ್ ಸೀಟ್ ಹೊಗುವುದು ಕಾನೂನು ಬಾಹಿರವಾಗಿದ್ದು ಆಕಸ್ಮಿಕ ಅಪಘಾತಗಳು ನಡೆದರೆ ಜೀವನಷ್ಟದ ಜೊತೆಗೆ ಪರಿಹಾರವೂ ದೊರಕುವುದಿಲ್ಲ ಎಂದು ಹೇಳಿದರು.ಈ
ಕಾರ್ಯಕ್ರಮದಲ್ಲಿ ಆರಕ್ಷಕ ಸಿಬ್ಬಂದಿ ನಾಗೇಶ ದುರದುಂಡಿ,ಹನಮಂತ ಗೌಡಿ, ದುಂಡೇಶ ಅಂತರಗಟ್ಟಿ, ಉಪಸ್ಥಿತರಿದ್ದರು. ಉಪನ್ಯಾಸಕ ತಳಕೇರಿ ಕಾರ್ಯಕ್ರಮ ನಿರೂಪಿಸಿದರು.


Spread the love

About Fast9 News

Check Also

ಅನೈತಿಕ ಸಂಬಂಧ,ಮನೆಗೆ ಕರೆಯಿಸಿ ಕೊಲೆ,, ಪತ್ನಿ ಆಸ್ಪತ್ರೆಯಲ್ಲಿ,,,

Spread the loveಅನೈತಿಕ ಸಂಬಂಧ,ಮನೆಗೆ ಕರೆಯಿಸಿ ಕೊಲೆ,, ಪತ್ನಿ ಆಸ್ಪತ್ರೆಯಲ್ಲಿ,,, ಒಂದು ವಿಷಯ ಮಾತಾಡೊದಿದೆ ಎಂದು ಮನೆಗೆ ಕರೆಯಸಿ ಮಾರಕಾಸ್ತ್ರಗಳಿಂದ …

Leave a Reply

Your email address will not be published. Required fields are marked *