Breaking News

ಉಡುಗೊರೆ (Gift) ಕೊಡಲಿಲ್ಲ ಎಂದು ಪತಿಗೆ ಚಾಕು ಇರಿದ ಪತ್ನಿ

Spread the love

ಉಡುಗೊರೆ (Gift) ಕೊಡಲಿಲ್ಲ ಎಂದು ಪತಿಗೆ ಚಾಕು ಇರಿದ ಪತ್ನಿ♥

ಬೆಂಗಳೂರು: ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆ (Gift) ಕೊಡಲಿಲ್ಲ ಎಂದು ಕೋಪ ಮಾಡಿಕೊಂಡು ಮಹಿಳೆಯೊಬ್ಬಳು ತನ್ನ ಪತಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರು (Bengaluru) ನಗರದಲ್ಲಿ ನಡೆದಿದೆ.ಬೆಂಗಳೂರಿನ ಬೆಳ್ಳಂದೂರಿನಲ್ಲಿ ಫೆ.27 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮದುವೆ ವಾರ್ಷಿಕೋತ್ಸವದ ದಿನ ಗಂಡ ನಿದ್ದೆಗೆ ಜಾರಿದ್ದ. ಈ ವೇಳೆ ಅಡುಗೆ ಮನೆಯಿಂದ ಚಾಕು ತಂದು ಪತ್ನಿ ಇರಿದಿದ್ದಾಳೆ. ಚಾಕುವಿನಿಂದ ಇರಿದ ಹಿನ್ನೆಲೆ ಗಂಡನ ಕೈಗೆ ರಕ್ತ ಗಾಯವಾಗಿದೆ. ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ.

ಘಟನೆ ಸಂಬಂಧಿಸಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ಮೊದಲ ಬಾರಿಗೆ ಗಿಫ್ಟ್ ನೀಡಿಲ್ಲ ಎಂದು ಮಹಿಳೆ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಹಿಳೆಯ ಗಂಡನ ತಾತ ತೀರಿ ಹೋಗಿದ್ದ. ಈ ಹಿನ್ನೆಲೆ ಗಿಫ್ಟ್ ಆಕೆಯ ಪತಿ ಗಿಫ್ಟ್‌ ನೀಡಿರಲಿಲ್ಲ ಎನ್ನಲಾಗಿದೆ.


Spread the love

About Fast9 News

Check Also

ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …

Leave a Reply

Your email address will not be published. Required fields are marked *