ಸಂಚಾರಿ ನಿಯಮ ಪಾಲಿಸುತ್ತ ಸಾರ್ವಜನಿಕರು ಪೋಲಿಸರಂತೆ ಮಾದಕ ವ್ಯಸನಿಗಳ ವಿರುದ್ದ ಹೊರಾಡಬೇಕು : ಕೆ.ವಾಲಿಕಾರ
ಗೋಕಾಕ :ನಗರದ ರಿದ್ದಿ ಸಿದ್ದಿ ರಾಕೇಟ ಕಂಪನಿಯಲ್ಲಿ ಕಾರ್ಖಾನೆಯ ಸಹಯೋಗದೊಂದಿಗೆ ಗೋಕಾಕ ಶಹರ ಪೋಲಿಸ್ ಠಾಣೆಯ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಮತ್ತು ವ್ಯಸನ ಮುಕ್ತ ಸಮಾಜಕ್ಕಾಗಿ ಡ್ರಗ್ಸ್ ವಿರುದ್ದ ಜಾಗೃತಿ ಜಾಥಾ ನಡೆಯಿತು.
ಗೋಕಾಕ ಸಿ,ಪಿ,ಆಯ್ ಸುರೇಶಬಾಬು ಬಂಡಿವಡ್ಡರ ಮಾತನಾಡಿ, ವಾಹನ ಚಾಲಕರು ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಬೇಕು.ಮೊಬೈಲನಲ್ಲಿ ಮಾತನಾಡುತ್ತ ದ್ವಿಚಕ್ರ ವಾಹನವನ್ನು ಚಲಾಯಿಸಬಾರದು ಹಲ್ಮೇಟ್ ಕಡ್ಡಾಯವಾಗಿ ಉಪಯೋಗಿಸಿ ಚಿಕ್ಕ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಸುರಕ್ಷತಾ ಬೆಲ್ಟ್ ಉಪಯೋಗಿಸಬೇಕು.ನಂತರ ರಾತ್ರಿ ಹೊತ್ತು ಬರುವ ವಾಹನಗಳಿಂದ ಅಪಘಾತಗಳು ಆಗದಂತೆ ಕಾರ್ಖಾನೆ ಮುಂದೆ ರಸ್ತೆ ಬದಿಯ ಮರಗಳಿಗೆ ಸಿಬ್ಬಂದಿಗಳ ಜೊತೆಯಲ್ಲಿ ರಿಪ್ಲೇಕ್ಟರ ಅಳವಡಿಸಿದರು.
ಇನ್ನು ಗೋಕಾಕ ಶಹರ ಪಿ,ಎಸ್,ಐ, ಕೆ,ಬಿ,ವಾಲಿಕಾರ ಮಾತನಾಡಿ ಇವತ್ತಿನ ಯುವ ಜನಾಂಗ ಗಾಂಜಾ,
ಡ್ರಗ್ಸಗಳಂತಹ ಮಾದಕ ವಸ್ತುಗಳ ಸೇವನೆಗೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತಿದ್ದಾರೆ.ಕೇವಲ ಮಾದಕ ವಸ್ತುಗಳ ಸಾಗಣೆ, ಮಾದಕ ವ್ಯಸನಿಗಳ ವಿರುದ್ಧ ಕ್ರಮಕೈಗೊಳ್ಳುವುದು ಪೊಲೀಸರ ಕೆಲಸವಲ್ಲ.ಸಾರ್ವಜನಿಕರು ಕೂಡ ಪೋಲಿಸರಂತೆ ಮಾದಕ ವ್ಯಸನಿಗಳ ವಿರುದ್ದ ಹೊರಾಡಬೇಕು.ಅದನ್ನು ತಡೆಯುವದಕ್ಕಾಗಿ ಮಾದಕ ಅವುಗಳ ವಿರುದ್ಧ ಜಾಗೃತಿ ಮುಡಿಸಿ ಸಮಸ್ಯೆಯನ್ನು ಆರಂಭದಲ್ಲಿಯೇ ತಡೆಯುವುದಕ್ಕಾಗಿ ಪೊಲೀಸರು ಹರಸಾಹಸ ಮಾಡುತಿದ್ದೇವೆ ಮತ್ತು ಅದು ನಮ್ಮ ಕರ್ತವ್ಯವಾಗಿದೆ ಎಂದರು.ಆದ್ದರಿಂದ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಗ್ರಾಮೀಣ ಪಿ,ಎಸ್,ಐ, ಕಿರಣ ಮೊಹಿತೆ ಇವರು ಮಾತನಾಡಿ ಒರ್ವ ಕಾರ್ಮಿಕನ ಹಿಂದೆ ಒಂದು ಕುಟುಂಬವಿದ್ದು ಅವರನ್ನೆ ಅವಲಂಬಿಸಿ ನಂಬಿ ಬದುಕಿರುತ್ತದೆ ಅದಕ್ಕಾಗಿ ಕಾರ್ಮಿಕರು ಸಂಚಾರಿ ನಿಯಮವನ್ಮು ಪಾಲಿಸಬೇಕೆಂದರು. ವಾಹನವನ್ನು ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಇಂತಹ ಅರಿವು ಮೂಡಿಸುವ ಕಾರ್ಯಕ್ರಮ ಅಗತ್ಯವಿದೆ ಎಂದು ಕಾರ್ಮಿಕರಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಅಧಿಕಾರಿಗಳಾದ ವೆಂಕಟೇಶ ಪ್ರಸನ್ನ, ಮನಿವಣ್ಣನ್ ಎಸ್, ಹರಿರಾವ್ ಬಾಲಾಜಿ. ಪ್ರಕಾಶ ಅವಟೆ ಶಹರ ಪೊಲಿಸ್ ಠಾಣೆಯ ಪೋಲಿಸ್ ಠಾಣೆಯ ಹವಾಲ್ದಾರ ಮಾಹಾದೇವ ಮಳ್ಯಾಗೋಳ, ಸಿಬ್ಬಂದಿಗಳಾದ ನಾಗಪ್ಪ ಬೆಳಗಲಿ, ಶಹಜನ ತೊರಗಲ್,ಪ್ರಕಾಶ ಮಿಶ್ರಕೊಟಿ ಸೇರಿದಂತೆ ಕಾರ್ಖಾನೆಯ ಕಾರ್ಮಿಕರು ಭಾಗವಹಿಸಿದ್ದರು.