Breaking News

ಅಟ್ರಾಸಿಟಿ ಪ್ರಕರದಲ್ಲಿನ ಆರೋಪಿಯನ್ನು ಬಂದಿಸುವಂತೆ ದಲಿತ ಸಂಘಟನೆಯಿಂದ ಪ್ರತಿಭಟನೆ

Spread the love

ಅಟ್ರಾಸಿಟಿ ಪ್ರಕರದಲ್ಲಿನ ಆರೋಪಿಯನ್ನು ಬಂದಿಸುವಂತೆ ದಲಿತ ಸಂಘಟನೆಯಿಂದ ಪ್ರತಿಭಟನೆ

ವರದಿ : ಮನೋಹರ ಮೇಗೇರಿ
ಗೋಕಾಕ : ಪರಿಶಿಷ್ಟ ಜಾತಿಯವರ ಮೇಲೆ ಸುವರ್ಣಿಯರು ಜತಿ ನಿಂದನೆ ಮಾಡಿ ಹಲ್ಲೆ ಮಾಡಿದವರ ಮೇಲೆ ಪರಿಶಿಷ್ಟ ಕಾಯಿದೆ ಅಡಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದ ಆರೋಪಿಯನ್ನು ಬಂದಿಸುವಂತೆ ಗೋಕಾಕದಲ್ಲಿ ಡಿಜೆ ಸಾಗರ ಬಣದ ದಲಿತ ಸಂಘಟನೆಯ ಸದಸ್ಯರು ಜಿಲ್ಲಾ ಸಂಚಾಲಕ ಮಯೂರ ತಳವಾರ ಇವರ ನೇತೃತ್ಬದಲ್ಲಿ ಗೋಕಾಕ ತಹಸಿಲ್ದಾರ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಸವದತ್ತಿ ತಾಲೂಕಿನ ಅಟಕಲ್ ಗ್ರಾಮದ ದುರ್ಗಪ್ಪ ಮಾದರ ಎಂಬುವರ ಮೇಲೆ ಸರಕಾರಿ ಶಾಲೆಯ ಎಸ್,ಡಿ,ಎಮ್,ಸಿ, ಚುನಾವಣೆಯ ಸಂಬಂದ ಸ್ಥಳಿಯ ಸುವರ್ಣಿಯರು ದುರ್ಗಪ್ಪ ಮಾದರ ಮೇಲೆ ಜಾತಿ ನಿಂದನೆ ಮಾಡಿದ್ದಲ್ಲದೆ ಹಲ್ಲೆ ಮಾಡಿದ್ದರು,ಅದನ್ನು ಡಿಜಿ ಸಾಗರ ಬಣದ ದಲಿತ ಸಂಘಟನೆ ಸದಸ್ಯರು ಪ್ರತಿಭಟನೆ ಹೊರಾಟದಿಂದ ಪರಿಶಿಷ್ಟ ಕಾಯಿದೆ ಪ್ರಕಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಅದರಂತೆ ಹಲ್ಲೆ ,ಜಾತಿ ನಿಂದನೆ ಮಾಡಿದವರ ಮೇಲೆ ಎಪ್,ಐ,ಅರ್, ಕೂಡ ದಾಖಲಾಗಿತ್ತು.ಆದರೆ ದಾಖಲಾಗಿ 15 ದಿನಗಳಾದರೂ ಸಹ ಆರೋಪಿಗಳು ಗಣ್ಯ ವ್ಯಕ್ತಿಗಳಾಗಿದ್ದರಿಂದ ಸ್ಥಳಿಯ ಪೋಲಿಸರು ಆರೋಪಿಗಳನ್ನು ಬಂದಿಸುತ್ತಿಲ್ಲ ವಿಭಾಗಿ ಸಂಚಾಲಕ ಸತೀಶ ಹರಿಜನ ಮಾತನಾಡಿ ಆರೋಪಿಸಿದ್ದಾರೆ.

ಇನ್ನು ಜಿಲ್ಲಾ ಸಂಚಾಲಕ ಮಯೂರ ತಳವಾರ ಇವರು ಮಾತನಾಡಿ ಆರೋಪಿಗಳು ರಾಜಾರೋಷವಾಗಿ ಗ್ರಾಮದಲ್ಲಿ ಸುತ್ತಾಡುತಿದ್ದರು ಸಹ ಸ್ಥಳಿಯ ಪೋಲಿಸರು ಆರೋಪಿಯನ್ನ ಬಂದಿಸುವಲ್ಲಿ ನಿರ್ಲಕ್ಷ ತೊರುತಿದ್ದಾರೆ,ಇದರಿಂದ ಆರೋಪಿಗಳು ಗ್ರಾಮದಲ್ಲಿ ದುರ್ಗಪ್ಪ ಮಾದರ ಇವರಿಗೆ ಬೇದರಿಕೆ ಹಾಕುವ ಹುನ್ನಾರ ನಡೆಸುತಿದ್ದಾನೆ,ತಮ್ಮ ಕಣ್ಮುಂದೆ ತಿರುಗಾಡುತಿದ್ದರು ಸಹ ಪೋಲಿಸರು ಆರೋಪಿಗಳನ್ನು ಬಂದಿಸುತ್ತಿಲ್ಲಾ,ಒಂದು ವೇಳೆ ತಕ್ಷಣ ಆರೋಪಿಯನ್ನು ಬಂದಿಸಿದಿದ್ದರೆ ರಾಜ್ಯಾದ್ಯಂತ ಮತ್ತು ಬೆಳಗಾವಿಯ ಎಸ್,ಪಿ, ಕಚೇರಿ ಮುಂದೆ ಪೋಲಿಸರ ವಿರುದ್ದ ಡಿಜಿ ಸಾಗರ ಬಣದ ದಲಿತ ಸಂಘಟನೆ ಮತ್ತು ಇನ್ನೂಳಿದ ಘಟನೆಯವರು ಸರ್ವ ಸದಸ್ಯರು ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಸಿ ತಹಸಿಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗೆ ಮತ್ತು ಗೃಹಮಂತ್ರಿಗೆ ಮನವಿ ಸಲ್ಲಿಸಿದ್ದರು

ಈ ಸಂದರ್ಭದಲ್ಲಿ ಡಾ: ಡಿಜಿ ಸಾಗರ ಬಣದ ಜಿಲ್ಲಾ ಸಂಚಾಲಕ ಶ್ರೀಕಾಂತ ಎಮ್ ,ಗುರುಮೂರ್ತಿ ಬಣದ ತಾಲೂಕಾ ಸಂಚಾಲಕ ರವಿ,ಕಡಕೋಳ,ಅರ್ಜುನ ಗಂಡವ್ವಗೋಳ ತಳವಾರ,ತಾಲೂಕಾ ಸಂಚಾಲಕ ಶೆಟ್ಟೆಪ್ಪಾ ಮೇಸ್ತ್ರಿ, ಭಬಲೆಪ್ಪಾ ಮಾದರ ಸುಂದ್ರವ್ವಾ ಕಟ್ಟಿಮನಿ,ದೊಡ್ಡವ್ವಾ ತಳಗೇರಿ, ಬಸವರಾಜ ತಳವಾರ, ವಿಠ್ಠಲ ಸಣ್ಣಕ್ಕಿ,ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು.


Spread the love

About Fast9 News

Check Also

ದೃಶ್ಯ ಮಾದ್ಯಮಗಳ ಹೆಸರಿನಲ್ಲಿ  ಭ್ರಷ್ಟಾಚಾರ, ದರ್ಬಳಕೆ,ಹಪ್ತಾ ವಸೂಲಿಗೆ ಕಡಿವಾಣ ಹಾಕಲು ಮುಂದಾದ ಬೆಳಗಾವಿ ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಮತ್ತು ಎಸ್,ಪಿ,ಗೆ ಮನವಿ

Spread the loveದೃಶ್ಯ ಮಾದ್ಯಮಗಳ ಹೆಸರಿನಲ್ಲಿ  ಭ್ರಷ್ಟಾಚಾರ, ದರ್ಬಳಕೆ,ಹಪ್ತಾ ವಸೂಲಿಗೆ ಕಡಿವಾಣ ಹಾಕಲು ಮುಂದಾದ ಬೆಳಗಾವಿ ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ …

Leave a Reply

Your email address will not be published. Required fields are marked *