ಶುಗರ್ ಪ್ಯಾಕ್ಟರಿ ಮಶೀನರ ಸಾಮಾನುಗಳ ಕಳ್ಳರ ಬಂಧನ ಪೋಲಿಸರಿಗೆ ಶ್ಲ್ಯಾಘನೆ
ಗೋಕಾಕ ಶುಗರ್ ಲಿಮಿಟೆಡ್ ಕೊಳವಿ ಪ್ಯಾಕ್ಟರಿಯ ಸ್ಟೋ ಗೋಡಾವನದಲ್ಲಿಟ್ಟಿದ್ದ ಅಪಾರ ಪ್ರಮಾಣದ ಪ್ಯಾಕ್ಟರಿ ಮಶೀನರಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಮೂರು ಜನ ಕಳ್ಳರನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಗೋಕಾಕ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ.
ದಿ: 13/4/25 ರಂದು ಗೋಕಾಕ ತಾಲೂಕಿನ ಕೊಳವಿಯ ಹೊರವಲಯದಲ್ಲಿರುವ ಗೋಕಾಕ ಶುಗರ್ಸ್ ಲಿಮಿಟೆಡ್ ಕೊಳವಿ ಪ್ಯಾಕ್ಟರಿಯ ಸ್ಟೋ ಗೊಡಾನವದಲ್ಲಿನ ಅಪಾರ ಪ್ರಮಾಣದ ಮೊತ್ತಿನ ಮಶಿನರಿ ಸಾಮಾನುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು,
ಪ್ರಕರಣ ದಾಖಲಿಸಿಕೊಂಡ ಗೋಕಾಕ ಗ್ರಾಮೀಣ ಪೋಲಿಸರು ಬೆಳಗಾವಿಯ ಪೋಲಿಸ್ ಅಧಿಕ್ಷಕರಾದ ಭೀಮಾಶಂಕರ ಗುಳೇದ ಮತ್ತು ಇನ್ನೂಳಿದ ಅಧಿಕಾರಿಗಳ ಆದೇಶದಂತೆ ಸಿ,ಪಿ,ಆಯ್, ಆರ್,ಬಿ, ಸುರೇಶಬಾಬು ಇವರ ನೇತೃತ್ವದಲ್ಲಿ ತಂಡ ರಚಿಸಿ ಡಿಎಸ್ ಪಿ ,ಡಿ ಎಚ್ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪಿ,ಎಸ್,ಐ, ಕಿರಣ ಮೊಹಿತೆ ಮತ್ತು ಸಿಬ್ಬಂದಿಗಳು ಕಳ್ಳರನ್ನು ಪತ್ತೆ ಹಚ್ಚಿ ಯಶಸ್ವಿಯಾಗಿದ್ದಾರೆ.
ಕಳ್ಳರಿಂದ ನಗದು ಹಣ 95 ಸಾವಿರ, ರೂ, ಕೃತ್ಯಕ್ಕೆ ಬಳಸಿದ ವಾಹನಗಳನ್ನು ಸೇರಿ ಅಂದಾಜು 8.58.100=00 ರೂ ನಗದು ಮತ್ತು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಇನ್ನು ಈ ಪ್ರಕರದಣಲ್ಲಿ ಬಾಗಿಯಾಗಿ ಪರಾರಿಯಾದ ಇನ್ನುಳಿದವರ ಪತ್ತೆಗಾಗಿ ಬಲೆ ಬಿಸಿಲಾಗಿದೆ ಎಂದು ಡಿಎಸಪಿ ಡಿ,ಎಚ್, ಮುಲ್ಲಾ ತಿಳಿಸಿದ್ದಾರೆ.
ಇನ್ನು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಸಿ,ಪಿ,ಆಯ್ ಸುರೇಶಬಾಬು, ಪಿಎಸ್ಐ ಕಿರಣ ಮೊಹಿತೆ ಸಿಬ್ಬಂದಿಗಳಾದ ಶ್ರೀಮತಿ ಎಲ್ ಎಲ್ ಪತ್ತೆನ್ನವರ, ಬಿ ವಿ ನೆರ್ಲಿ,ಜಗದೀಶ ಗುಡ್ಡಿ, ಮಾರುತಿ ವಾಯ್ ಪಡದಲ್ಲಿ, ಕುಮಾರ ಪವಾರ, ಡಿ ಬಿ ಅಂತರಗಟ್ಟಿ, ಡಿ ಜಿ ಕೊಣ್ಣೂರ, ಎಚ್ ಡಿ ಗೌಡಿ, ಎನ್ ಎಲ್ ಮಂಗಿ, ಎ ಎಲ್ ನಾಯ್ಕವಾಡಿ, ಸಂತೋಷ ವಜ್ರಮಟ್ಟಿ, ಶಿವಾನಂದ ಕಲ್ಲೋಳಿ, ಎಸ್ ಬಿ ಮಾನಪ್ಪಗೋಳ, ವಿಠಲ ಖೋತ್ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ಶ್ರೀ ಸಚೀನ ಪಾಟೀಲ ಮತ್ತು ವಿನೋದ ತಕ್ಕನ್ನವರ ಇವರ ಕಾರ್ಯವನ್ನು ಬೆಳಗಾವಿ ಎಸ್.ಪಿ ರವರು ಶ್ಲಾಘಿಸಿರುತ್ತಾರೆ.