Breaking News

ರೌಡಿ ಶೀಟರಗಳು ಕಾನೂನು ಬಾಹಿರ ಚಟುವಟಿಕೆ ಮಾಡಿದರೆ ಗಡಿಪಾರು : DSP ಡಿ,ಎಚ್,ಮುಲ್ಲಾ ಖಡಕ್ ಎಚ್ಚರಿಕೆ,

Spread the love

ರೌಡಿ ಶೀಟರಗಳು ಕಾನೂನು ಬಾಹಿರ ಚಟುವಟಿಕೆ ಮಾಡಿದರೆ ಗಡಿಪಾರು : DSP ಡಿ,ಎಚ್,ಮುಲ್ಲಾ ಖಡಕ್ ಎಚ್ಚರಿಕೆ,

ಗೋಕಾಕ : ನಗರ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಗೋಕಾಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್‌ಗಳ ಪರೇಡ್ ನಡೆಸಿ ರೌಡಿಶೀಟರ್​ಗಳಿಗೆ ಗೋಕಾಕ ಉಪವಿಭಾಗದ ಡಿ,ಎಸ್,ಪಿ, ಡಿ,ಎಚ್,ಮುಲ್ಲಾ ಇವರು ಕ್ಲಾಸ್ ತೆಗೆದುಕೊಂಡರು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿದರು. ರೌಡಿಶೀಟರ್ ಗಳ ಪರೇಡ್ ನಡೆಸಿ ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಲು ಖಡಕ್ ಎಚ್ಚರಿಕೆ ನೀಡಿದರು.

ಎರಡು ಧರ್ಮ,ಕೊಮಿನ ನಡುವೆ ದ್ವೇಷ ಬಿತ್ತುವಂತಹ ಸುಳ್ಳು ಸುದ್ದಿಗಳನ್ನು ಸೊಸಿಯಲ್ ಮಿಡಿಯಾದಲ್ಲಿ ಹಾಕಬಾರದು,
ಅದರ ಜೊತೆಯಲ್ಲಿ ‘ಕೊಲೆ, ಕೋಮು ಗಲಭೆ, ಕಳ್ಳತನ,ಮಿಟರ ಬಡ್ಡಿ, ಗಲಾಟೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿಕೊಂಡು ಉತ್ತಮ ಪ್ರಜೆಗಳಾಗಿ ಬದುಕಬೇಕು. ಹಳೆಯ ತಪ್ಪುಗಳು ಮರುಕಳಿಸಿದರೆ ನಾವು ನಮ್ಮ ಕೆಲಸ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕೋಮುಗಲಭೆಗಳಿಗೆ ಕುಮ್ಮಕ್ಕು ಕೊಡುವುದಾಗಲಿ, ಅದನ್ನು ಮಾಡುವುದಾಗಲಿ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರಗಳ್ಳತನ, ಮಟ್ಕಾ, ಜೂಜಾಟ,ಇನ್ನೂಳಿದ ಅಪರಾದ ಪ್ರಕರಣದಲ್ಲಿರುವವರು ಈ ಕೆಲಸ ಬಿಡಬೇಕು. ಇಲ್ಲವಾದರೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಅದರ ಜೊತೆಯಲ್ಲಿ ಕೆಲವೆ ದಿನಗಳಲ್ಲಿ ಗೋಕಾಕ ಗ್ರಾಮದೇವತೆಯ ಜಾತ್ರೆಯು ನಡೆಯಲಿದ್ದು ಬಂದು ಬಳಗದೊಂದಿಗೆ ಸಂತೋಷವಾಗಿ ಜಾತ್ರೆ ಮಾಡಿ,ಅದನ್ನು ಜಾತ್ರೆಯಲ್ಲಿ ಮತ್ತೆ ಹಳೆಯ ಚಾಳಿ ತೊರಿಸಿದರೆ ಪೋಲಿಸ್ ಇಲಾಖೆ ಸುಮ್ಮನಿರುವುದಿಲ್ಲ,ಯಾರಾದರೂ ಕಾನೂನು ಬಾಹಿರ ಚಟುವಟಿಕೆ ಮಾಡಿದ್ದು ಕಂಡು ಬಂದಲ್ಲಿ ಅಂತವರನ್ನು ಯಾವುದೆ ಮುಲಾಜಿಲ್ಲದೆ ಗಡಿಪಾರು ಮಾಡಿ ಅವರನ್ನು ಗುಂಡಾ ಕಾಯ್ದೆ ಪ್ರಕರಣ ದಾಖಲಿಸುತ್ತೇವೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಸಿಪಿಆಯ್ ಸುರೇಶಬಾಬು,ಆರ್,ಬಿ, ಮತ್ತು ಶಹರ ಪೋಲಿಸ್ ಠಾಣೆಯ ಪಿಎಸ್ಐ ಕೆ,ವಾಲಿಕರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿ : ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ

Spread the loveಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿ : ಶಾಸಕ ಮತ್ತು ಬೆಮೂಲ್ …

Leave a Reply

Your email address will not be published. Required fields are marked *