ಕರ್ನಲ್ ಸೋಫಿಯಾ ಮಾವನವರಿಗೆ ಕನ್ನಡ ಸೇನೆ ಸಂಘಟನೆ ವತಿಯಿಂದ ಸತ್ಕಾರ
ಘಟಪ್ರಭಾ:ಗೋಕಾಕ ತಾಲೂಕಿನ ಕೊಣ್ಣೂರನಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರನ್ನು ಕನ್ನಡ ಸೇನೆ ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ಸೇನೆ ಸಂಘಟನೆಯ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಡಾ ರಾಘವೇಂದ್ರ ಪತ್ತಾರ ಅವರು ಮಾತನಾಡಿ ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ನಾಡಿನ ಸೊಸೆ ಎಂಬ ಹೆಮ್ಮೆಯ ವ್ಯಕ್ತವಾಗಿದೆ. ಅವರ ಸಾಧನೆಯನ್ನು ಇಡೀ ದೇಶವೇ ಹೆಮ್ಮೆಪಡುವಂತಾಗಿದೆ. ಗೋಕಾಕ ಹೆಸರನ್ನು ಇಡೀ ದೇಶಕ್ಕೆ ಹರಡುವ ಮೂಲಕ ಅವರು ಉತ್ತಮ ಸಾಧನೆ ಮಾಡಿದ್ದಾರೆ.
ಸೋಫಿಯಾ ಖುರೇಷಿ ಅವರು ಆಪರೇಷನ್ ಸಿಂಧೂರ್ ನಡೆಸಿ ಇಡೀ ಪ್ರಪಂಚವೇ ಇತ್ತ ನೋಡುವಂತೆ ಮಾಡಿದ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕಾಧ್ಯಕ್ಷರಾದ ಅಪ್ಪಾಸಾಬ ಮುಲ್ಲಾ,ಕಿರಣ ಪತ್ತಾರ,ಕುಮಾರ ಇಂಡೇರ, ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.