Breaking News

ಆಮ್ ಆದ್ಮಿ ಪಕ್ಷದಿಂದ ಬಾದಾಮಿಯಲ್ಲಿ ಮಿಸ್ ಕಾಲ್ ಬಿರುಸಿನ ಪ್ರಚಾರ

Spread the love

ಆಮ್ ಆದ್ಮಿ ಪಕ್ಷದಿಂದ ಬಾದಾಮಿಯಲ್ಲಿ ಮಿಸ್ ಕಾಲ್ ಬಿರುಸಿನ ಪ್ರಚಾರ

ಬಾದಾಮಿ :ಬಾದಾಮಿ ತಾಲೂಕಿನಲ್ಲಿ ಆಮ್ ಆದ್ಮಿ  ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಶಶಿಧರ ಹಲಗಲಿ ಮಠ ಹಾಗೂ ಬಾದಾಮಿ ಮತಕ್ಷೇತ್ರದ ಸಂಯೋಜಕರಾದ ಮಲ್ಲಿಕಾರ್ಜುನ್ ಕಲಾದಗಿ ಸಾರಥ್ಯದಲ್ಲಿ ಭರ್ಜರಿ ಪಕ್ಷ ಸಂಘಟನೆಗೆ ಮಿಸ್ ಕಾಲ್ ಅಭಿಯಾನ ಬಿರುಸಿನ ಪ್ರಚಾರ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಶಶಿಧರ ಹಲಗಳಿಮಠ ಹಾಗೂ ಬಾದಾಮಿ ಮತಕ್ಷೇತ್ರದ ಸಂಯೋಜಕರಾದ ಮಲ್ಲಿಕಾರ್ಜುನ್ ಕಲಾದಗಿ ತಾಲೂಕಿನ ಚಿಕ್ಕ ಮುಚ್ಚಳಗುಡ್ಡ ಹಾಗೂ ಕೆಂದೂರು ಗ್ರಾಮಗಳಲ್ಲಿ ಪಕ್ಷ ಸಂಘಟನೆ ಮಿಸ್ ಕಾಲ್ ಅಭಿಯಾನ ಹಮ್ಮಿಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಉತ್ತಮ ಆದರ್ಶ ಆಡಳಿತದ ಬಗ್ಗೆ ಜನರಿಗೆ ತಿಳಿ ಹೇಳಿದರು. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಜನಸಾಮಾನ್ಯರ ಕುಟುಂಬಗಳಿಗೆ ಒದಗಿಸುತ್ತಿರುವ ಉಚಿತ ಮೂಲಭೂತ ಸೌಲಭ್ಯಗಳು ಹಾಗೂ ವಿಶೇಷವಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಬೀಜ ರಸಗೊಬ್ಬರ ಜಮೀನಿಗೆ ನೀರು ಹತ್ತು ಹಲವು ವಿಶಿಷ್ಟ ಯೋಜನೆಗಳನ್ನು ನೀಡಿ ಜನರ ಮೆಚ್ವುಗೆ ಪಡೆದ ಸರಕಾರ ಆಮ್ ಆದ್ಮಿ ಪಕ್ಷ ಆಗಿದ್ದು ಮುಂಬರುವ ದಿನಗಳಲ್ಲಿ ಕರ್ನಾಟಕದ ಜನತೆ ಈಗಾಗಲೇ ಆಮ್ ಆದ್ಮಿ ಪಕ್ಷದ ಬಗ್ಗೆ ಊಹೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು ಜನರು ಸ್ವ ಇಚ್ಛೆಯಿಂದ ಪಕ್ಷದ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾತನಾಡಿದರು.

ಅರವಿಂದ್ ಕೇಜ್ರಿವಾಲ್ ಅವರು ಬಾದಾಮಿಗೆ ಅಗಮಿಸುವವರಿದ್ದು ಇಡೀ ಉತ್ತರ ಕರ್ನಾಟಕದಲ್ಲಿ ಬಾದಾಮಿಯಿಂದಲೆ ಬೃಹತ್ ಸಭೆಗೆ ಚಾಲನೆ ನೀಡಿ ಬಾದಾಮಿಯೇ ಕೇಂದ್ರ ಸ್ಥಾನವಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದರು. ಚಾಲುಕ್ಯರ ನಾಡಿನಿಂದಲೇ ಆಮ್ ಆದ್ಮಿ ಕಹಳೆ ಮೊಳಗಿಸುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಈಗಾಗಲೇ.ಮಾಧ್ಯಮದ ಎದುರು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ದಲ್ಲಿರುವ ಜೆ.ಸಿ. ಬಿ. ಪಕ್ಷಗಳಿಗೆ ಟಕ್ಕರ್ ಕೊಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ವರದಿ:- ಕನಕಪ್ಪ.ಶಾಂತಗೇರಿ ಬಾದಾಮಿ


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *