Breaking News

ಬ್ರಷ್ಟಾಚಾರ ನಿಗ್ರಹ ದಳದ ಅತಿಥಿಯಾದ ಅಡವಿಸಿದ್ದೇಶ್ವರ.

Spread the love

ಬ್ರಷ್ಟಾಚಾರ ನಿಗ್ರಹ ದಳದ ಅತಿಥಿಯಾದ ಅಡವಿಸಿದ್ದೇಶ್ವರ.

ಇತ್ತೀಚಿಗೆ ಅಡವಿಸಿದ್ದೇಶ್ವರ ಕರೆಪ್ಪ ಮಾಸ್ತಿ ಬ್ರಷ್ಟಾಚಾರ ನಿಗ್ರಹ ದಳದ ಅತಿಧಿಯಾದ ಘಟನೆಯೊಂದು ಬೈಲಹೊಂಗಲದಲ್ಲಿ ನಡೆದಿದೆ.

ಬೈಲಹೊಂಗಲದಲ್ಲಿ ಎರಡು ವರ್ಷಗಳ ಹಿಂದೆ ಸಂಗಮೇಶಗೌಡ ಪಾಟೀಲ್ ಹಾಗೂ ಅನಿಲ್ ದೈವಧ್ನ್ಯ ಅವರಿಗೆ ಶ್ರೀ ಶಕ್ತಿ ಪೈನಾನ್ಸ ತೆರೆಯಲು 10‌ ಸಾವಿರ ಬೇಡಿಕೆ ಇಟ್ಟಿದ್ದ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪಿರ್ಯಾದಿ ನಿಡಲಾಗಿತ್ತು.

ಅಲ್ಲದೆ ಭ್ರಷ್ಟ ಅಧಿಕಾರಿಯು ಬೈಲಹೊಂಗಲದಲ್ಲಿ ಕಳೆದ 30 ವರ್ಷಗಳಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ 1 ವರ್ಷಗಳ ಹಿಂದೆ ಸಹಕಾರ ಅಭಿವೃದ್ಧಿ ಅಧಿಕಾರಿಯಾಗಿ ಸವದತ್ತಿಗೆ ವರ್ಗಾವಣೆಗೊಂಡಿದ್ದರೂ, ನಾಮಕಾವ್ಯೆಸ್ತೆ ಮಾತ್ರ ಬೈಲಹೊಂಗಲ ಕಚೇರಿಯಿಂದ ಬಿಡುಗಡೆಗೊಂಡು ಪುನಃ ಅದೇ ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸದರಿ ದೂರಿನ ಮೇರೆಗೆ FIR ದಾಖಲಿಸಿಕೊಂಡ ಭ್ರಷ್ಟಾಚಾರ ನಿಗ್ರಹ ದಳ ಬೆಳಗಾವಿಯ ಅಧಿಕಾರಿಗಳು ದಿನಾಂಕ : 11/9/2020, 18/9/2020, 9/11/2020, 27/1/2021 ಹಾಗೂ 13/7/2021ರಂದು ನಿರಂತರ ದಾಳಿ ನಡೆಸಿ ಶಿಸ್ತು ಕ್ರಮಕ್ಕಾಗಿ ವರದಿ ಮಾಡಿದ ಪ್ರಯುಕ್ತ ಎಚ್ಚೆತ್ತುಕೊಂಡ ಬೆಂಗಳೂರು ಸಹಕಾರ ಇಲಾಖೆಯ ನಿಬಂಧಕರು ಬೈಲಹೊಂಗಲದಲ್ಲಿ ಅನಧಿಕೃತವಾಗಿ ಕಾರ್ಯನಿರವಹಿಸುತ್ತಿದ್ದ ಎ. ಕೆ. ಮಾಸ್ತಿ ಎಂಬಾತನನ್ನು ಬೈಲಹೊಂಗಲ ದಿಂದ ವರ್ಗಾವಣೆ ಗೊಳಿಸಿ ಎತ್ತಂಗಡಿ ಆದೇಶ ಹೊರಡಿಸಿದ್ದಾರೆ.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *