ಭಾರೀ ಮಳೆ ಕಾರಣ ಅಮರನಾಥ ಯಾತ್ರೆ ಸ್ಥಗಿತ..
ಮಳೆಯಿಂದಾಗಿ ಹವಾಮಾನ ಬದಲಾವಣೆಯಾಗಿದ್ದರಿಂದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಅಮರನಾಥ ದೇವಾಲಯಕ್ಕೆ ಹೋಗುವ ಮಾರ್ಗಗಳಲ್ಲಿ ಪ್ರತಿಕೂಲ ಹವಾಮಾನ
ಸೃಷ್ಟಿಯಾಗಿದ್ದರಿಂದ ಯಾತ್ರಿಗಳನ್ನು ದೇಗುಲದ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈಗಾಗಲೇ 4,600 ಯಾತ್ರಾರ್ಥಿಗಳನ್ನು ಒಂದು ಪ್ರದೇಶದಲ್ಲಿ ನಿಲ್ಲಿಸಲಾಗಿದೆ ಎಂದಿದ್ದಾರೆ.
Fast9 Latest Kannada News