Breaking News

ಓಬಳಾಪುರ ಗ್ರಾಮ ಪಂಚಾಯತಿಯಿಂದ ನಡೆಯುತ್ತಿರುವ ಅನ್ಯಾಯಗಳ ಖಂಡಿಸಿ ಗ್ರಾಮಸ್ಥರಿಂದ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ.

Spread the love

ಓಬಳಾಪುರ ಗ್ರಾಮ ಪಂಚಾಯತಿಯಿಂದ ನಡೆಯುತ್ತಿರುವ ಅನ್ಯಾಯಗಳ ಖಂಡಿಸಿ ಗ್ರಾಮಸ್ಥರಿಂದ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ.

ರಾಮದುರ್ಗ: ಓಬಳಾಪೂರ ಗ್ರಾಮ ಪಂಚಾಯಿತಿಯಿಂದ ನಡೆಯುವ ಅನ್ಯಾಯ ಖಂಡಿಸಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರ ನೇತೃತ್ವದಲ್ಲಿ ಗ್ರಾಮದ ಅನೇಕ ಸಾರ್ವಜನಿಕರು ಮಂಗಳವಾರ ಗ್ರಾ.ಪಂ ಮುಂದೆ ಅನಿರ್ದಿಷ್ಟಕಾಲ ಅಹೋರಾತ್ರಿ ಉಪವಾಸ ಧರಣೆ ಸತ್ಯಾಗ್ರಹ ಪ್ರಾರಂಭಿಸಿದರು.
ಓಬಳಾಪೂರ ಗ್ರಾಮದ ಸಾರ್ವಜನಿಕ ಸರ್ಕಾರಿ ಆಸ್ತಿಗಳಾದ ಅಗಸಿ ಕಟ್ಟಡ, ಗ್ರಾಮ ಪಂಚಾಯಿತಿ ಕಚೇರಿ ರಾಷ್ಟಧ್ವಜ ಸ್ತಂಭ ಸ್ಥಳದ ಸರ್ಕಾರಿ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಗುಂಡಾಗಿರಿ ನಡೆಸಿ ಮಾರ್ಚ ೧೪. ೨೦೨೦ ರಂದು ರಾತ್ರೋರಾತ್ರಿ ಅಕ್ರಮವಾಗಿ ಅಂಗಡಿ ಕಟ್ಟಿದ್ದು, ಗ್ರಾಮದ ಅಶಾಂತಿಗೊಳಿಸಿದ ಸಾರಾಯಿ ಮಾರಾಟ ಅಂಗಡಿ ಕಟ್ಟಡವನ್ನು ನೆಲಸಮಗೊಳಿಸಿ ರಾಷ್ಟ್ರಧ್ವಜವನ್ನು ಗೌರವ ಘನತೆಯಿಂದ ಹಾರಿಸಬೇಕು. ಈ ವಿಷಯವಾಗಿ ೨೦೨೦ ರಲ್ಲಿ ತಹಶೀಲ್ದಾರ ಕಚೇರಿ ಮುಂದೆ ಸತ್ಯಾಗ್ರಹ ನಡೆಸಿದಾಗ ದ್ದು ಅಕ್ರಮ ಅಂಗಡಿ ಕಟ್ಟಡವನ್ನು ೩ ದಿನದಲ್ಲಿ ತೆರೆವುಗೊಳಿಸುತ್ತೇವೆಂದು ಅಂದಿನ ತಾ.ಪಂ ಇಓ ಮತ್ತು ತಹಶೀಲ್ದಾರರು ಭರವಸೆ ನೀಡಿದ್ದರು.

ಆದರೆ ೩ ವರ್ಷ ಕಳೆದರೂ ಇಲ್ಲಿವರೆಗೂ ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ, ಅಕ್ರಮವಾಸಿಗಳನ್ನು ತೆರೆವುಗೊಳಿಸದೆ, ಗ್ರಾಮ ಪಂಚಾಯಿತಿ ಕಚೇರಿ ಧ್ವಜಕಟ್ಟೆ ಸ್ಥಳದಲ್ಲಿ ಅಕ್ರಮ ಕಟ್ಟಡ ಸಾರಾಯಿ ಮಾರಾಟ ಮಾಡುತ್ತಿದ್ದ ಅಂಗಡಿ ಮುಂದೆ ೩ ವರ್ಷ ಕಾಲ ಧ್ವಜಾರೋಹಣ ನಡೆಸುತ್ತಾ ಅಪಮಾನ, ಅಗೌರವ, ಅಪವಿತ್ರತೆ ಮಾಡಿ ಗಂಭೀರ ಕೃತ್ಯವೆಸಗಿದ್ದಾರೆ. ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ ೧೯೭೧ ನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಆರೋಪಿಸಿದರು.

ಅಕ್ರಮದಲ್ಲಿ ಶಾಮೀಲಾದ ಎಲ್ಲ ತಪ್ಪಿತಸ್ತರನ್ನು ತಕ್ಷಣವೇ ಬಂಧಿಸಬೇಕು. ಕೃತ್ಯವನ್ನು ನಿರ್ಲಕ್ಷಿಸಿದ ಸರ್ಕಾರದ ನಡೆ ಖಂಡನಿಯವಾಗಿದೆ. ಸಾರ್ವಜನಿಕ ದೇವಸ್ಥಾನದ ರಥಬೀದಿಯ ಆಸ್ತಿಯಲ್ಲಿ ಅಕ್ರಮ ಪ್ರವೇಶ ಮಾಡಿ, ಅಕ್ರಮವಾಗಿ ಅಂಗಡಿ ಕಟ್ಟಡ, ಚಾವನೆ, ಇತರೆ ನಿರ್ಮಿಸಿದ್ದು ಇದೆ. ಮಠದ ರಥ ಬೀದಿಯ ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿದ ಅಕ್ರಮ ಕಟ್ಟಡಗಳನ್ನು ತೆರೆವುಗೊಳಿಸಬೇಕೆಂದು ಈಗಾಗಲೇ ದೂರು ಸಲ್ಲಿಸಲಾಗಿದೆ.ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಹಾಗೂ ಸಾರ್ವಜನಿಕ ಆಸ್ತಿ ರಕ್ಷಿಸಲು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಕಾನೂನು ಕ್ರಮಕೈಗೊಳ್ಳಲು ತಾಲೂಕಾಡಳಿತ, ಜಿಲ್ಲಾಡಳಿತ ಮುಂದಾಗಬೇಕು. ಇಲ್ಲದಿದ್ದರೇ ನ್ಯಾಯ ಸಿಗುವವರೆಗೆ ಅನಿರ್ದಿಷ್ಟಕಾಲ ಅಹೋರಾತ್ರಿ ಉಪವಾಸ ಧರಣೆ ಸತ್ಯಾಗ್ರಹ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.ಧರಣಿ ಸತ್ಯಾಗ್ರಹದಲ್ಲಿ ಸುಭಾರಯಪ್ಪ ಪೂಜಾರ, ಮಲ್ಲಪ್ಪ ಮದರಖಂಡಿ, ನಿಂಗನಗೌಡ ಸಂಗನಗೌಡ್ರ, ಗುರಪ್ಪ ಹಾಲಿಗೇರಿ, ರವಿ ಮಾದರ, ಭೀಮಣ್ಣ ಬಂಡಿವಡ್ಡರ, ರುದರಪ್ಪ ಕರಿಗಾರ, ಕುಶಪ್ಪ ಯಂಡಿಗೇರಿ, ಶುಕೃತಿ ಆಕಾಡೆಮಿಯ ಅನಿಲ್ ನಾಯಕ ಪಾಲ್ಗೊಂಡಿದ್ದರು.

ವರದಿ: ಸಿದ್ದು ಮೊಹಿತೆ


Spread the love

About Fast9 News

Check Also

ಗೋಕಾಕ ಪೋಲಿಸರಿಂದ ಭರ್ಜರಿ ಬೇಟೆ,ವಾಹನ ಸವಾರರ ಸುಲಿಗೆ ಮಾಡುತಿದ್ದ ಡಕಾಯಿತರ ಬಂಧನ.

Spread the loveಗೋಕಾಕ ಪೋಲಿಸರಿಂದ ಭರ್ಜರಿ ಬೇಟೆ,ವಾಹನ ಸವಾರರ ಸುಲಿಗೆ ಮಾಡುತಿದ್ದ ಡಕಾಯಿತರ ಬಂಧನ. ಗೋಕಾಕ : ನಾಲ್ಕು ದಿನಗಳ …

Leave a Reply

Your email address will not be published. Required fields are marked *