ಸಂಘಟನೆ ಬೆಳೆಸಿ ಜನರನ್ನು ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ
ಸಂಘಟನೆಗಳ ಹೆಸರು ಹೇಳಿ ಬ್ಲ್ಯಾಕ ಮೇಲ್ ಮಾಡಬಾರದು: ರವೀಂದ್ರ ಗದಾಡೆ.
ಅಥಣಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ ) ಡಿಜಿಸಾಗರ ಬಣದ ರಾಜ್ಯ ಸಂಚಾಲಕರ ಆದೇಶದಂತೆ ತಾಲೂಕಾ ಘಟಕ ಅಥಣಿಯಲ್ಲಿ ಡಾ:ಬಾಬಾಸಾಹೇಬ ಅಂಬೇಡ್ಕರ ಅವರ ಪರಿನರ್ವಾಣ ದಿನದ ಅಂಗವಾಗಿ ದಿ.29/12/2024 ರಂದು ಡಾ: ಬಿ,ಆರ್,ಅಂಬೇಡ್ಕರ,ಶ್ರೀಮತಿ ಸಾವಿತ್ರಿಬಾಯಿ ಪುಲೆ,ಮತ್ತು ಸಂವಿಧಾನದ ಬಗ್ಗೆ ಲಿಖಿತ ರಸಪ್ರಶ್ನೆ ಕಾರ್ಯಕ್ರಮದ ಬಹುಮಾನ ವಿತರಣಾ ಸಮಾರಂಭವನ್ನು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,ಸಿ,ಆರ್,ಸೆಲ್ ಅಧಿಕಾರಿ ರವೀಂದ್ರ ಗಡಾದೆ,ನಗರಸಭೆ ಉಪಾದಕ್ಷ ರಾವಸಾಬ ಐಹೋಳೆ,ಸಸಿಗೆ ನೀರು ಉಣಿಸುವ ಮೂಲಕ ಮತ್ತು ಸಂವಿಧಾನ ಪೀಠಿಕೆ ಒದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಿ: 29/12/2024 ರಂದು ಹಮ್ಮಿಕೊಂಡಿದ್ದ ಲಿಖಿತ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಸಿ ಮಾತನಾಡಿದ ಸಿ,ಆರ್,ಸೆಲ್ ಜಿಲ್ಲಾ ಅಧಿಕಾರಿ ರವೀಂದ್ರ ಗಡಾದೆ ಯವರು ಸಂಘಟನೆಯನ್ನು ಉಳಿಸುವವರನ್ನು ಬರಮಾಡಿಕೊಳ್ಳಿ ಕೇಡಿಸುವಂತವರನ್ನು ಒಳಗೆ ಕರೆದುಕೊಳ್ಳಬೇಡಿ,ಸಂಘಟನೆಗಳನ್ನು ಬೆಳೆಸುವಂತವರಾಗಬೇಕು,ಸಂಘಟನೆಗಳಿಂದ ಆಗುವ ಕಾರ್ಯಕ್ರಮಗಳ ಮೂಲಕ ನಮ್ಮ ಜನತೆ ಎಚ್ಚೆತ್ತುಗೊಳ್ಳುತ್ತಾರೆ.
ಡಾ: ಬಿ,ಆರ್,ಅಂಬೇಡ್ಕರ ಅವರ ಹೆಸರು ಹೇಳಿಕೊಂಡು ಬ್ಕ್ಯಾಕಮೇಲ್ ಮಾಡುತಿದ್ದಾರೆ ಅಂತವರು ಬಾಬಾಸಾಹೇಬರ ಹೆಸರು ಕೇಡಿಸುತ್ತಾರೆ ಹೊರತು ಹೆಸರು ಉಳಿಸುವುದಿಲ್ಲ ಅಂತವರನ್ನು ಎಂದು ಸಂಘಟನೆಗಳಲ್ಲಿ ಸೇರಿಸಿಕೊಳ್ಳಬೇಡಿ ಎಂದರು.ಅದರ ಜೊತೆಯಲ್ಲಿ ಸಂಘಟನೆ ಹೆಸರು ಹೇಳಿಕೊಂಡು ಬ್ಲ್ಯಾಕಮೇಲ್ ಮಾಡೊದನ್ನ ಬಿಟ್ಟು ಸಂಘಟನೆ ಬೆಳೆಸಿ ನೀವು ಬೆಳೆಯಿರಿ,ಜನರನ್ನು ಬೆಳೆಸರಿ ಅವಾಗ ಮಾತ್ರ ನಾವು ಡಾ: ಅಂಬೇಡ್ಕರ ಹೆಸರು ಹೇಳಿದರೆ ಸ್ವಾರ್ಥಕವಾಗುತ್ತದೆ,
ಒಳ್ಳೆಯ ಸಮಾಜ ಸೇವೆ ಮಾಡುವವರು ಸಮಾಜಕ್ಕೆ ಬೇಕಾಗಿದೆ ಸುಮ್ಮನೆ ನಾವು ಅಂಬೇಡ್ಕರವಾದಿ ಅಂತ ಹೇಳೊದರಲ್ಲಿ ಅರ್ಥವಿಲ್ಲ ಎಂದರು.ಅದಕ್ಕಾಗಿ ಮಕ್ಕಳ ವಿದ್ಯಾಬ್ಯಾಸದ ಕಡೆ ಗಮನ ಹರಿಸಿ ಅವರನ್ನು ಎಂದು ನಿರ್ಲಕ್ಷ ಮಾಡಬೇಡಿ ಇವತ್ತು ನೀವು ಮಕ್ಕಳನ್ನು ನಿರ್ಲಕ್ಷಿಸಿದರೆ ನಾಳೆ ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆಂದು ಎಲ್ಲರಿಗೂ ಶುಬ ಹಾರೈಸಿದರು.
ಇನ್ನು ಇದೆ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಸುಂದರವ್ವಾ ಕಟ್ಟಿಮನಿ ಇವರ ನೇತೃತ್ವದಲ್ಲಿ ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ,ವಿಭಾಗಿಯ ಸಂಚಾಲಕ ಸತೀಶ ಹರಿಜನ ಇವರ ಸಮ್ಮುಖದಲ್ಲಿ ಚಿಕ್ಕೋಡಿ, ರಾಯಬಾಗ,ಅಥಣಿ,ಕಾಗವಾಡ,ನಿಪ್ಪಾಣಿ,ಮಹಿಳಾ ಪಧಾದಿಕಾರಿಗಳ ಆಯ್ಕೆ ಮಾಡಿ ಅವರಿಗೆ ಆದೇಶ ಪತ್ರಗಳನ್ನು ವಿತರಿಸಿ ಶುಭ ಕೊರಿದರು.ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಸಂಜು ಕಾಂಬಳೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಸಂಚಾಲಕರು ಮತ್ತು ಮಹಿಳಾ ಸದಸ್ಯರುಗಳು ಉಪಸ್ಥಿತರಿದ್ದರು.