Breaking News

ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಅಥಣಿ ಪೊಲೀಸರು ಯಶಸ್ವಿ. ಬಂದಿತರಿಂದ ಲಕ್ಷಾಂತರ ಮೌಲ್ಯದ ಬೈಕ್ ವಶ

Spread the love

ಅಥಣಿ ವರದಿ

ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಅಥಣಿ ಪೊಲೀಸರು ಯಶಸ್ವಿ. ಬಂದಿತರಿಂದ ಲಕ್ಷಾಂತರ ಮೌಲ್ಯದ ಬೈಕ್ ವಶ

ವರದಿ: ವಿಲಾಸ ಕಾಂಬಳೆ
ಅಥಣಿ: ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡಾ.ಬೀಮಾಶಂಕರ ಗುಳೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಶೃತಿ ಎನ್ ಎಸ್, ಹಾಗೂ ಆರ್ ಬಿ ಬಸರಗಿ, ಪ್ರಶಾಂತ ಮನ್ನೋಳಿ ಡಿವೈಎಸ್ಪಿ ಅಥಣಿ, ರವೀಂದ್ರ ನಾಯ್ಕೋಡಿ ಸಿಪಿಆಯ್ ಅಥಣಿ, ಇವರ ಮಾರ್ಗದರ್ಶನದಲ್ಲಿ ಪಿಎಸ್ ಆಯ್ ಎಮ್ ಬಿ ಬಿರಾದರ, ಶಿವಾನಂದ ಕಾರಜೋಳ, ಪಿ ನಾಗರಾಜ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು

{“remix_data”:[],
ಮಹಾರಾಷ್ಟ್ರದ ಜತ್ತ ತಾಲೂಕಿನ ಅಮೊಲ ಪವಾರ ಹಾಗೂ ಅಥಣಿ ತಾಲೂಕಿನ ಮದಬಾವಿ ಗ್ರಾಮದ ಲಖನ್ ಸುಂಗಾರೆ ಬಂದಿತ ಆರೋಪಿಗಳು ಇತ್ತೀಚಿಗೆ ಅಥಣಿ ಪಟ್ಟಣದ ಶಿವಾಜಿ ವೃತ್ತದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ,ಬಂದಿತ ಆರೋಪಿಗಳಿಂದ 4,75,000 ಮೌಲ್ಯದ 13 ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ,
ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಥಣಿ ಪೊಲೀಸ್ ಸಿಬ್ಬಂದಿ ಕಾರ್ಯವೈಕರಿಯನ್ನು ಕಂಡು ಶ್ಲಾಘಿಸಿದ್ದಾರೆ

ಈ ವೇಳೆ ಆರ್ ಎಸ ವಂಟಗೊಡಿ,ಜಿ ಆರ್ ಅಸೊದೆ,ಎಮ್ ಎ ಪಾಟೀಲ,ಎಮ್ ಬಿ‌ ಮಹಿಶವಾಡಗಿ, ಜಮೀರ ಡಾಂಗೆ,ಈರಣ್ಣಾ ಮಾಯಣ್ಣವರ,ವಿನೋದ ಠಕ್ಕಣ್ಣವರ, ಭಾಗವಹಿಸಿದರು


Spread the love

About Fast9 News

Check Also

ಬಿಜೆಪಿ ಬಲವರ್ಧನೆಯಲ್ಲಿ ಪಂ. ದೀನ್ ದಯಾಳ್ ಉಪಾಧ್ಯಾಯ ಪಾತ್ರ ಅನನ್ಯ- ಸರ್ವೋತ್ತಮ ಜಾರಕಿಹೊಳಿ*

Spread the love*ಬಿಜೆಪಿ ಬಲವರ್ಧನೆಯಲ್ಲಿ ಪಂ. ದೀನ್ ದಯಾಳ್ ಉಪಾಧ್ಯಾಯ ಪಾತ್ರ ಅನನ್ಯ- ಸರ್ವೋತ್ತಮ ಜಾರಕಿಹೊಳಿ* ಗೋಕಾಕ- ಬಿಜೆಪಿಯು ಇಷ್ಟು …

Leave a Reply

Your email address will not be published. Required fields are marked *