Breaking News

ಬಾದಾಮಿಗೆ ಸಿದ್ದರಾಮಯ್ಯ ನವರು ಸ್ಪರ್ಧೆ ಮಾಡಬೇಕು:ಯುತ ಕಾಂಗ್ರೆಸ್

Spread the love

ಬಾದಾಮಿ ಬ್ರೇಕಿಂಗ್ ನ್ಯೂಸ್

ಬಾದಾಮಿಗೆ ಸಿದ್ದರಾಮಯ್ಯ ನವರು ಸ್ಪರ್ಧೆ ಮಾಡಬೇಕು

ಬಾದಾಮಿಗೆ ಸಿದ್ದರಾಮಯ್ಯ ನವರು ಸ್ಪರ್ಧೆ ಮಾಡಬೇಕು ಪ್ರಯಾಣ ಅನಾನುಕೂಲದ ಕಾರಣ ಬಾದಾಮಿ ಕಾಂಗ್ರೆಸ್ ಪಕ್ಷದವರಿಂದ ಹೆಲಿಕ್ಯಾಪ್ಟರ್ ಕೊಡಿಸಲು ಸಿದ್ಧರಾಗಿದ್ದೇವೆ ಎಂದ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಹನಮಂತ ಖಾನಗೌಡ್ರ.*#

2023 ರ ಸಾರ್ವತ್ರಿಕ ಚುನಾವಣೆಗೆ ಬಾದಾಮಿ ಮತಕ್ಷೇತ್ರ ದಿಂದ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಹಾಲಿ ಬಾದಾಮಿ ಶಾಸಕ ಸಿದ್ದರಾಮಯ್ಯ ನವರು ಬಾದಾಮಿ ಮತಕ್ಷೇತ್ರ ನನಗೆ ದೂರ ಆಗುವುದರಿಂದ ನನ್ನ ಮತಕ್ಷೇತ್ರದ ಜನತೆಯ ಜೊತೆ ಬೇರೆಯುವುದಾಗಳಿ ,ಜನರ ಕಷ್ಟ ಕಾರ್ಪಣ್ಯಗಳ ಕುಂದುಕೊರತೆಗಳ ಜೊತೆಯಾಗಿ ನಿಂತು ಸಮಯ ಕೊಡುವುದಾಗಿ ಮಾಡುವುದಕ್ಕೆ ನನಗೆ ಸಮಯದ ಅಭಾವ ಆಗುವುದರಿಂದ ಸ್ಪರ್ಧೆ ಮಾಡಲು ನಿರಾಕರಿಸಿರುವ ಮಾಹಿತಿಯನ್ನು ಮಾಧ್ಯಮದ ಎದುರು ಹೇಳಿಕೊಂಡಿದ್ದಾರೆ,

ಇಷ್ಟಾದರೂ ಪಟ್ಟು ಬಿಡದ ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ನ ತಾಲೂಕಾ ಪದಾಧಿಕಾರಿಗಳು ಸಾವಿರಾರು ಕಾರ್ಯಕರ್ತರು ಪರವಾಗಿ ಮಾತನಾಡಿದ ಯೂತ್ ಕಾಂಗ್ರೆಸ್ ನ ಉಪಾಧ್ಯಕ್ಷ ಹಣಮಂತ ಖಾನ ಗೌಡ್ರ ಸಿದ್ದರಾಮಯ್ಯ ನವರ ಬಾದಾಮಿಗೆ ಸ್ಪರ್ಧೆ ಮಾಡಲೇಬೇಕು ಅವರಿಗೆ ಮತಕ್ಷೇತ್ರ ಅಕ್ಕೆ ಬರಲು ಹೋಗಲು ತೊಂದರೆ ಯಾಗುತ್ತಿರುವ ಕಾರಣ ಅವರಿಗೆ ನಮ್ಮ ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಅಪಾರ ಕಾರ್ಯಕರ್ತರು ಕೂಡಿ ಕೊಂಡು ಹೆಲಿಕ್ಯಾಪ್ಟರ್ ಕೊಡಿಸುವುದಾಗಿ ಹನಮಂತ ಖಾನಗೌಡ್ರ ಸ್ಪಷ್ಟಪಡಿಸಿದ್ದು ಈಗ ಸಖತ್ ವೈರಲ್ ಆಗಿರುವ ಸುದ್ದಿ ಯಾಗಿದೆ.

ಬಾದಾಮಿ ಮತಕ್ಷೇತ್ರದ ಪಟ್ಟು ಬಿಡದ ಕಾಂಗ್ರೆಸ್ ಕಾರ್ಯಕರ್ತರ ಪದಾಧಿಕಾರಿಗಳ ಅಭಿಮಾನಿಗಳು ಪಟ್ಟು ಹಿಡಿದು ಕುಳಿತಿರುವ ಬೆಳವಣಿಗೆಗಳನ್ನು ಗಮನಿಸಿ ಸಿದ್ದರಾಮಯ್ಯನವರು ಮತ್ತೆ ಚಾಲುಕ್ಯರ ನಾಡು ಬಾದಾಮಿಯಿಂದ ರಣಕಹಳೆ ಮೊಳಗಿಸಲ್ ಸನ್ನಾದ್ದಾರಾಗುತ್ತಾರಾ ಎನ್ನುವುದೇ ಇಡೀ ರಾಜಕೀಯ ವಲಯ ಕುತೂಹಲದಿಂದ ಕಾಯ್ದು ನೋಡುತ್ತಿದೆ.

ವರದಿ:-ಕೆ.ಎಚ್.ಶಾಂತಗೇರಿ,

ಬಾದಾಮಿ ತಾಲೂಕಾ ವರದಿಗಾರರು


Spread the love

About Fast9 News

Check Also

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ

Spread the loveತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ …

Leave a Reply

Your email address will not be published. Required fields are marked *