ಎನಾರ ಮಾಡ್ಲಿ, ಹೆಂಗಾರ ಮಾಡ್ಲಿ ಗೋಕಾಕ ಜಿಲ್ಲೆ ಮಾಡ್ಲಿ : ಸತೀಶ ಜಾರಕಿಹೋಳಿ
ಗೋಕಾಕ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮದೇನು ತಕರಾರಿಲ್ಲ. ಆದಷ್ಟು ಬೇಗ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಕಾಕ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮ ಸರ್ಕಾರ ಇದ್ದಾಗಲೂ ಹೇಳಿದ್ದೆವು.
ಸದನದಲ್ಲೂ ಸಾಕಷ್ಟು ಬಾರಿ ಜಿಲ್ಲೆ ಮಾಡಬೇಕೆಂದು ಹೇಳಿದ್ದೇವೆ. ಗೋಕಾಕ ಜಿಲ್ಲೆ ಆದ್ರೆ ಒಳ್ಳೆಯದು. ಆ ಶ್ರೇಯಸ್ಸು ರಮೇಶ ಜಾರಕಿಹೋಳಿ ಅವರಿಗೆ ಸಲ್ಲುತ್ತದೆ ಎಂದರು. ಬಹಳಷ್ಟು ದೊಡ್ಡದಾಗಿರುವ ಬೆಳಗಾವಿಯನ್ನು ವಿಭಜನೆ ಮಾಡಲೇಬೇಕು. ಇಲ್ಲವಾದ್ರೆ ಅಭಿವೃದ್ಧಿ ಮಾಡಲು ಕಷ್ಟವಾಗುತ್ತದೆ
ಈ ಹಿಂದೆ ಗೋಕಾಕ ಜಿಲ್ಲೆ ಘೋಷಣೆ ವಾಪಸ್ ಪಡೆಯಲು ಕೋರ್ಟ್ ಕಾರಣವಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ವಾಪಸ್ ಪಡೆಯಲಾಗಿತ್ತು. ಇದೀಗ ಸಚಿವ ರಮೇಶ ಜಾರಕಿಹೊಳಿಯವರು ಹೇಗಾದರೂ ಮಾಡ್ಲಿ, ಏನಾರ ಮಾಡ್ಲಿ. ಆದ್ರೆ, ಗೋಕಾಕ ತಾಲೂಕನ್ನು ಜಿಲ್ಲೆ ಮಾಡಿದ್ರೆ ಸಾಕು. ಇದಲ್ಲದೇ ಬೆಳಗಾವಿ ತಾಲೂಕನ್ನು ಕೂಡ ವಿಭಜನೆ ಮಾಡಬೇಕು ಎಂದರು.
Fast9 Latest Kannada News